Udayavni Special

ಸಿಲಿಕಾನ್‌ ಸಿಟಿಯಲ್ಲಿ ಸಂಕ್ರಾಂತಿ ಸಂಭ್ರಮ

Team Udayavani, Jan 16, 2020, 3:06 AM IST

siliconb

ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಬುಧವಾರ ಗಾಮೀಣ ಸೊಗಡು ಮೈದೆಳೆದಿತ್ತು. ನಗರ ಮೈದಾನಗಳಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಧಾನ್ಯಗಳ ರಾಶಿ ಪೂಜೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ನಗರದ ಹಳೆಯ ಪ್ರದೇಶಗಳಲ್ಲಿ ಮನೆ ಮುಂಭಾಗ ರಂಗೋಲಿ ಹಾಕಿ ಸಿಂಗರಿಸಲಾಗುತ್ತು.

“ಸಂಕ್ರಾಂತಿ ಶುಭಾಶಯಗಳು’ ಎಂಬ ಅಡಿ ಬರಹ, ಕಬ್ಬು ಎಳ್ಳು-ಬೆಲ್ಲಗಳ ವಿನಿಮಯದ ಸಂಭ್ರಮ ಜೋರಾಗಿತ್ತು. ಹೊಸ, ಬಟ್ಟೆ ತೊಟ್ಟಿದ್ದ ಮಕ್ಕಳು ಸಂಜೆ ಆಗುತ್ತಿದ್ದಂತೆ ನೆರೆ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡರು. ಮನೆಯಲ್ಲಿ ಸಿಹಿ ಪೊಂಗಲ್‌ ತಯಾರಿಸಿ ಸವಿದರು. ಬಡಾವಣೆಯ ಮೈದಾನದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸಂಕ್ರಾಂತಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದವು. ಹಬ್ಬದ ಹಿನ್ನೆಲೆ ದೇವಾಲಯಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು.

ಮುಂಜಾನೆಯಿಂದಲೇ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಕೆ.ಆರ್‌. ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಯಶವಂತಪುರ ಸರ್ಕಲ್‌ನ ಗಾಯತ್ರಿ ದೇವಸ್ಥಾನ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಪ್ರಮುಖ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಂಡು ನೆರೆದಿದ್ದು, ನಿರಂತರವಾಗಿ ವಿಶೇಷ ಪೂಜೆಗಳು ನೆರವೇರಿದವು.

ಕಿಚ್ಚಿನ ಸಂಕ್ರಾಂತಿ: ಮೈ ಕೊರೆವ ಚಳಿಯ ದಿನಗಳು ಮುಗಿಯಲಿವೆ ಎಂಬುದರ ಸಂಕೇತವೆಂಬಂತೆ ಸಂಕ್ರಾಂತಿ ಹಬ್ಬದಲ್ಲಿ ಬೆಂಕಿಯ ಕಿಚ್ಚಿನ ಮೇಲೆ ದನಗಳನ್ನು ಹಾಯಿಸುವ ವಿಶಿಷ್ಟ ಆಚರಣೆ ಮಾಡಲಾಯಿತು. ನಗರದ ಅನೇಕ ಕಡೆಗಳಲ್ಲಿ ಬೆಳಗ್ಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸಂಜೆ ವಿವಿಧ ಕಡೆಗಳಿಂದ ರಾಸುಗಳನ್ನು ಕರೆತಂದು ಕಿಚ್ಚು ಹಾಯಿಸುವ ಮೂಲಕ ಗ್ರಾಮೀಣ ಸೊಗಡನ್ನು ಸಂಭ್ರಮಿಸಲಾಯಿತು.

ರಾಸುಗಳನ್ನು ಮೈ ತೊಳೆದು, ಅವುಗಳ ಕೊಂಬು ಹೆರೆದು, ಬಣ್ಣದ ಬಲೂನು, ರಿಬ್ಬನ್‌ ಟೇಪ್‌ಗ್ಳಿಂದ ಅಲಂಕರಿಸಿ, ಬೆನ್ನ ಮೇಲೆ ಸಿಂಗಾರದ ಬಟ್ಟೆ ಹೊದಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಗಂಟೆ ಮಾಲೆ ಹಾಕಿ ಸಿಂಗಾರ ಮಾಡಲಾಗಿತ್ತು. ಪ್ರಮುಖವಾಗಿ ಜಯನಗರ,ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಆಟದ ಮೈದಾನ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭನರಗಳಲ್ಲಿ ವಿವಿಧ ಸಂಸ್ಥೆಗಳು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಹಾಯಿಸುವ ಸ್ಪರ್ಧೆ ನಡೆಸಿದವು.

ರಾಸುಗಳು ಆರೇಳು ಅಡಿ ಎತ್ತರಕ್ಕೆ ಉರಿಯುವ ಬೆಂಕಿಯಲ್ಲಿ ಹಾಯ್ದು ಮುಂದೆ ಓಡಿದರೆ, ತನ್ನ ರಾಸುಗಳು ಕಿಚ್ಚು ಹಾಯ್ದವು ಎಂದು ಮಾಲೀಕರು ಖುಷಿಪಟ್ಟರು. ಹೊಸಕೆರೆ ಹಳ್ಳಿಯ ಸುತ್ತಮುತ್ತ ಸಂಕ್ರಾಂತಿಯನ್ನು ಪ್ರತೀತಿಯಂತೆ ಕಾಟುಂರಾಯ ಹಬ್ಬ ಎಂದು ಮಾಡಲಾಯಿತು. ಅಲ್ಲಿನ ಬಸ್‌ ನಿಲ್ದಾಣದ ಬಳಿಯ ಮೈದಾನದಲ್ಲಿ ಕಾಟುಂರಾಯ ಮೂರ್ತಿ ಬಳಿ ಸ್ಥಳೀಯ ವಿವಿಧ ಸಂಘಗಳು ಸೇರಿ ರಾಸುವಿನ ಕಿಚ್ಚು ಹಾಯಿಸಲಾಯಿತು.

ಇಲ್ಲಿ ವಿಶೇಷವೆಂದರೆ ರಾಸುಗಳ ಜತೆಗೆ ಗೌಳಿ ಅಥವಾ ಮಾಲೀಕರು ಕಿಚ್ಚು ಹಾರಿದರು. ಸಹಕಾರ ನಗರ ಬಯಲು ರಂಗಮಂಟಪದಲ್ಲಿ ಸಂಗೀತ ಹಾಗೂ ನೃತ್ಯ ವೈಭವ, ನಗೆಹಬ್ಬ ಕಾರ್ಯಕ್ರಮ ನಡೆಯಿತು. ಬನಶಂಕರಿ 3ನೇ ಹಂತದ ಭುವನೇಶ್ವರಿ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ಗಾಯನ ಹಾಗೂ ಮೊಸರು ಗಡಿಗೆ ಹೊಡೆಯುವ ಸ್ಪರ್ಧೆಗಳು ನಡೆದವು.

ಟಾಪ್ ನ್ಯೂಸ್

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಎಚ್. ವಿಶ್ವನಾಥ್ ರದ್ದು ಹತಾಶೆಯ ಹೇಳಿಕೆ: ಬಿ ಸಿ ಪಾಟೀಲ್

ಎಚ್. ವಿಶ್ವನಾಥ್ ರದ್ದು ಹತಾಶೆಯ ಹೇಳಿಕೆ: ಬಿ.ಸಿ. ಪಾಟೀಲ್

ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ

ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ

ಬೆಳಗಾವಿ: ಭಾರೀ ಮಳೆಗೆ ಹಬ್ಬಾನಟ್ಟಿ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತ

ಬೆಳಗಾವಿ: ಭಾರೀ ಮಳೆಗೆ ಹಬ್ಬಾನಟ್ಟಿ ಆಂಜನೇಯ ದೇವಸ್ಥಾನ ಸಂಪೂರ್ಣ ಜಲಾವೃತ

ಸಾಲದ ಖಾತೆಗೆ ಕೋವಿಡ್ ಪ್ರೋತ್ಸಾಹಧನ!

ಸಾಲದ ಖಾತೆಗೆ ಕೋವಿಡ್ ಪ್ರೋತ್ಸಾಹಧನ!

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಜೀವನ ಬಿಮಾ ಜಾರಿಗೆ ಜಾಗೃತಿ ಕೊರತೆ

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!

ಕೋವಿಡ್ ಬೆನ್ನಲ್ಲೇ ಪ್ರವಾಹ ಭೀತಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್‌ ಸಿಂಗ್‌

ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್‌ ಸಿಂಗ್‌

ಮುಂಗಾರು ಹಿನ್ನೆಲೆ : 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಿಎಂ ವೀಡಿಯೋ ಸಂವಾದ

ಮುಂಗಾರು ಹಿನ್ನೆಲೆ : 20 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಸಿಎಂ ವೀಡಿಯೋ ಸಂವಾದ

ಎಸೆಸೆಲ್ಸಿ ಪರೀಕ್ಷೆಗೆ ಅಧಿಸೂಚನೆ ಪ್ರಕಟ : ಎಲ್ಲರೂ ಉತ್ತೀರ್ಣ, ಮರುಮೌಲ್ಯಮಾಪನ ಇಲ್ಲ

ಎಸೆಸೆಲ್ಸಿ ಪರೀಕ್ಷೆಗೆ ಅಧಿಸೂಚನೆ ಪ್ರಕಟ : ಎಲ್ಲರೂ ಉತ್ತೀರ್ಣ, ಮರುಮೌಲ್ಯಮಾಪನ ಇಲ್ಲ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಹುಲುಗಪ್ಪನ ಮಾನವೀಯ ಕಾರ್ಯಕ್ಕೆ ಸಲಾಂ

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 120 ಕೇಂದ್ರ, 22,561 ವಿದ್ಯಾರ್ಥಿಗಳು!

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 120 ಕೇಂದ್ರ, 22,561 ವಿದ್ಯಾರ್ಥಿಗಳು!

ಎಚ್. ವಿಶ್ವನಾಥ್ ರದ್ದು ಹತಾಶೆಯ ಹೇಳಿಕೆ: ಬಿ ಸಿ ಪಾಟೀಲ್

ಎಚ್. ವಿಶ್ವನಾಥ್ ರದ್ದು ಹತಾಶೆಯ ಹೇಳಿಕೆ: ಬಿ.ಸಿ. ಪಾಟೀಲ್

ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ

ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡದೆ ಮುಂಬಯಿ ಲಾಕ್ ಡೌನ್ ತೆರವು ಬೇಡ: ಸಮಿತಿ

Untitled-2

ರಸ್ತೆ ದಾಟಲು ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.