Siri grain: ಸಿರಿಧಾನ್ಯಗಳ ಬಗ್ಗೆ ತಿಳಿದು ತಿನ್ನೋಣ ಬನ್ನಿ


Team Udayavani, Nov 13, 2023, 11:53 AM IST

TDY-5

ಬೆಂಗಳೂರು: ಅಕ್ಕಿ, ಗೋಧಿಯ ಬಳಕೆ ಇಲ್ಲ, ಮೈದಾ ಹಿಟ್ಟು, ಕಡಲೆ ಹಿಟ್ಟು, ಹೆಸರು, ಬಟಾಣಿ, ಹುರುಳಿ ಬಳಕೆಯೇ ಇಲ್ಲ. ಆದರೂ, ಅಲ್ಲಿ ದೋಸೆಯಿದೆ, ಇಡ್ಲಿ ಇದೆ, ಚಕ್ಕುಲಿ, ಪಿಜ್ಜಾ, ಕೇಕ್‌, ಕುಕ್ಕಿಸ್‌, ಚಾಕೊಲೇಟ್‌, ಉಂಡೆ ಹೀಗೆ ವಿವಿಧ ಬಗೆಯ ತಿಂಡಿ ತಿನಿಸುಗಳು ಜಿಕೆವಿಕೆಯಲ್ಲಿ ನಡೆಯಲಿರುವ ಸಿರಿಧಾನ್ಯದ ಆಹಾರ ಮೇಳದಲ್ಲಿ ಸಿಗಲಿದೆ.

ಸಿರಿಧಾನ್ಯ ಆರೋಗ್ಯವಂತ ಸಮಾಜದ ಆಧಾರ ಸ್ತಂಭ. ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ, ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಈ ಬಾರಿ ಬೆಂಗಳೂರು ಕೃಷಿ ವಿವಿ ಆಯೋಜಿಸಿದ್ದ ಮೂರು ದಿನಗಳ ಕೃಷಿ ಮೇಳದಲ್ಲಿ ನ.18ರಂದು ಒಂದು ದಿನ “ಸಿರಿ ಧಾನ್ಯ ಆಹಾರ’ ಮೇಳವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಸಿರಿಧಾನ್ಯ ಉತ್ಪನ್ನಗಳು: ಕೃಷಿ ಮೇಳದಲ್ಲಿ ನವೋದ್ಯಮಗಳಿಗೆ ಸಿರಿಧಾನ್ಯದ ಉಪ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕ ವೇದಿಕೆ ಕಲ್ಪಿಸಲಾಗಿದೆ. ರಾಜ್ಯದ ಪ್ರಮುಖ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಮಳಿಗೆ ಪ್ರದರ್ಶನದಲ್ಲಿ ಭಾಗವಹಿಸಲಿದೆ.

ಸಾಮೆ, ಊದಲು, ಕೊರಲು, ಬರಗು, ನವಣೆಯಂತಹ ವೈವಿಧಮಯ ಸಿರಿಧಾನ್ಯಗಳ ಖಾದ್ಯ ಮಳಿಗೆ ಆಹಾರ ಮೇಳದ ಕೇಂದ್ರ ಬಿಂದುವಾಗಿದೆ.

ಯಾವ ಯಾವ ಖಾದ್ಯಗಳಿವೆ!: ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ವಿವಿಧೆಡೆಯಿಂದ ಆಗಮಿಸಿದ ಸಿರಿಧಾನ್ಯ ಉತ್ಪನ್ನಗಳ ಮಾರಾಟಗಾರರಿಗೆ ಉಚಿತ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದ ಸಂಜೆ ವರೆಗೆ ಆಹಾರ ಮೇಳದಲ್ಲಿ ಸಿರಿಧಾನ್ಯದ ಪಕೋಡಾ, ಚಕ್ಕಲಿ, ಬಿಸ್ಕೇಟ್‌, ಚಾಕೊಲೇಟ್‌, ಪಿಜ್ಜಾ, ಕೇಕ್‌, ಪೇಸ್ಟರಿ, ನಿಪ್ಪಟ್ಟು, ರಾಗಿ ಲಡ್ಡು, ಸಿಹಿ ತಿನ್ನಿಸು, ಪಕೋಡಾ, ಮಸಾಲೆ ವಡೆ, ದೋಸೆ, ಪಲಾವ್‌, ಉಪ್ಪಿಟ್ಟು, ಹಲ್ವಾ, ಅಂಬಲಿ, ಕೇಸರಿ ಬಾತ್‌, ಉಂಡೆ, ಜಾಮೂನ್‌, ಕಿಚಡಿ, ಬμì ಸೇರಿ ನಾನಾ ಬಗೆಯ ತಿನಿಸುಗಳು ಸಿರಿಧಾನ್ಯ ಆಹಾರ ಮೇಳದಲ್ಲಿ ಇರಲಿದೆ. ಸಿರಿಧಾನ್ಯ-ಪ್ರಯೋಜನ?: ಜೋಳ, ರಾಗಿ, ಸಜ್ಜೆ, ನವಣೆ, ಬರಗು, ಕೊರಲೆ, ಸಾಮೆ, ಊದಲು, ಹಾರಕ ಇವೇ 9 ಸಿರಿ ಧಾನ್ಯಗಳು. ಇವುಗಳಲ್ಲಿ ಅಧಿಕ ನಾರಿನಾಂಶ ಮತ್ತು ಪೋಷಕಾಂಶ, ಖನಿಜಾಂಶಗಳಿವೆ. ರಕ್ತದೊತ್ತಡ, ಮಧುಮೇಹ, ಬೊಜ್ಜು, ಮಲಬದ್ಧತೆ, ಅಂಡಾಶಯ ಸಮಸ್ಯೆ, ಮುಟ್ಟಿನ ಸಮಸ್ಯೆ, ನರ ದೌರ್ಬಲ್ಯ, ಮೂಛೆì ರೋಗ, ರಕ್ತ ಹೀನತೆ, ಲಿವರ್‌, ಕಿಡ್ನಿ ಸಮಸ್ಯೆ, ಜೀರ್ಣಾಂಗದ ಸಮಸ್ಯೆ, ಹೃದ್ರೋಗ, ಕ್ಯಾನ್ಸರ್‌ ಸೇರಿದಂತೆ ಹತ್ತಾರು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಈ ಧಾನ್ಯಗಳಲ್ಲಿ ಪರಿಹಾರವಿದೆ. ನೇರವಾಗಿ ಸಿರಿಧಾನ್ಯ ಸೇವಿಸಲು ಇಚ್ಛಿಸಿದವರು ಉಪ ಉತ್ಪನ್ನಗಳ ಇಷ್ಟಪಟ್ಟು ತಿನ್ನುತ್ತಾರೆ ಎಂದು ಜಿಕೆವಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಮಾರುಕಟ್ಟೆ ಒದಗಿಸಲು ಹಾಗೂ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಆಹಾರ ಮೇಳ ಆಯೋಜಿಸಲಾಗಿದೆ. ● ಡಾ.ಉಷಾ ರವೀಂದ್ರ, ಸಿರಿಧಾನ್ಯ ಆಹಾರ ಮೇಳದ ಸಂಯೋಜಕಿ, ಜಿಕೆವಿಕೆ ಬೆಂಗಳೂರು.

-ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

three year old child passed away in Suspicious way

Belagavi: ಮೂರು ವರ್ಷದ‌ ಕಂದಮ್ಮ ಅನುಮಾನಾಸ್ಪದ ಸಾವು; ಕೊಲೆ ಆರೋಪ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

4-cet

CET Results: ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

one year for siddaramaiah govt

ಗ್ಯಾರಂಟಿ ಸರಕಾರಕ್ಕೆ ವರ್ಷದ ಗೋರಂಟಿ!; ಹಲವು ಸವಾಲುಗಳ ನಡುವೆಯೂ ಭರವಸೆ ಈಡೇರಿಸಿದ ಸರಕಾರ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.