ರಾಜ್ಯ ಸರ್ಕಾರಿ ನೌಕರರಿಗೂ ವಾರಕ್ಕೆ ಐದೇ ದಿನ ಕೆಲಸ?


Team Udayavani, Dec 31, 2017, 6:00 AM IST

State-Government-Employees-.jpg

ಬೆಂಗಳೂರು: ವಾರದಲ್ಲಿ ಆರು ದಿನ ಕೆಲಸ ಮಾಡಿ ದಣಿದಿರುವ ಸರ್ಕಾರಿ ನೌಕರರಿಗೆ ಇದು ಖುಷಿಯ ಸುದ್ದಿ. ಅಂದುಕೊಂಡಂತೆ ಎಲ್ಲವೂ ಆದರೆ ಐಟಿ-ಬಿಟಿ ಉದ್ಯೋಗಿಗಳು ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿರುವಂತೆ ರಾಜ್ಯದಲ್ಲಿಯೂ ಐದು ದಿನ ಕೆಲಸ, ಎರಡು ದಿನ ರಜಾ ಪದ್ಧತಿ ಜಾರಿಗೆ ಬರಲಿದೆ!

ಹೌದು, ಸರ್ಕಾರಿ ನೌಕರರ ಸಂಘ ಇಂಥದ್ದೊಂದು ಮನವಿಯನ್ನು 6ನೇ ವೇತನ ಆಯೋಗಕ್ಕೆ ಮಾಡಿಕೊಂಡಿದ್ದು, 5 ದಿನ ಕೆಲಸ ಹಾಗೂ 2ದಿನ (ಶನಿವಾರ ಮತ್ತು ಭಾನುವಾರ) ರಜಾ ಜಾರಿ ಕುರಿತಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಧಕ-ಬಾಧಕಗಳ ಬಗ್ಗೆ ಆಯೋಗ ಅಧ್ಯಯನ ನಡೆಸುತ್ತಿದೆ.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚನೆಯಾಗಿರುವ 6ನೇ ವೇತನ ಆಯೋಗ, ಮನವಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಪರಿಷ್ಕರಣೆ ಮೇಲೆಯೂ ತನ್ನ ಗಮನ ಹರಿಸಿದೆ. ವಾರದಲ್ಲಿ ಎರಡು ದಿನ ರಜಾ ನೀಡುವ ಪದ್ಧತಿ ಆಡಳಿತಕ್ಕೆ ಉತ್ತಮವೆಂದು ಮನವರಿಕೆಯಾಗಿ, ಸರ್ಕಾರ ಇದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದಲ್ಲಿ ಸರ್ಕಾರಿ ನೌಕರರು ಸಹ ವಾರದಲ್ಲಿ 2 ದಿನ ರಜೆಯ ಮಜಾ ಅನುಭವಿಸುವ ಕಾಲ ದೂರವಿಲ್ಲ.

ಖನ್ನತೆ ತಪ್ಪಿಸಲು ಈ ಕ್ರಮ:
ಕೇಂದ್ರ ಸರ್ಕಾರಿ ಕಚೇರಿಗಳು ಹಾಗೂ ದೇಶದ ಹಲವಾರು ರಾಜ್ಯಗಳ ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ವಾರದಲ್ಲಿ ಐದು ದಿನ ಕೆಲಸ, 2 ದಿನಗಳ ರಜೆ ಪದ್ಧತಿ ಜಾರಿಯಲಿದ್ದು, ಕರ್ನಾಟಕದಲ್ಲೂ ಇದೇ ಮಾದರಿ ಪಾಲಿಸಬೇಕು ಎನ್ನುವುದು ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯಾಗಿದೆ. ನೌಕರರ ಮೇಲಿನ ಕೆಲಸದ ಒತ್ತಡ ಕಡಿಮೆ ಮಾಡಲು ಹಾಗೂ ಸರ್ಕಾರಿ ನೌಕರರು ಖನ್ನತೆಗೆ ಒಳಗಾಗವುದನ್ನು ತಪ್ಪಿಸಲು ಈ ಪದ್ಧತಿ ಅಗತ್ಯ ಎಂದು ಸಂಘವು ವೇತನ ಆಯೋಗದ ಮುಂದೆ ತನ್ನ ನಿಲುವನ್ನು ಪ್ರತಿಪಾದಿಸಿದೆ.

ಸರ್ಕಾರಿ ರಜೆ ಪರಿಷ್ಕರಣೆ ಬಗ್ಗೆ ಮನವಿಗಳು ಬಂದಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸುತ್ತಿರುವುದನ್ನ 6ನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ ಅವರು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ. ರಾಜ್ಯ ಸರ್ಕಾರವು ವೇತನ ಪರಿಷ್ಕರಣೆಯ ಜೊತಗೆ ಸರ್ಕಾರಿ ನೌಕರರ ಕಾರ್ಯದಕ್ಷತೆ ಹೆಚ್ಚಿಸುವ ಬಗ್ಗೆ ಪರೀಶಿಲನೆ ನಡೆಸಿ ಶಿಫಾರಸುಗಳನ್ನು ನೀಡಲು ಸೂಚಿಸಿದೆ. ಅದರಂತೆ ರಜೆ ಪರಿಷ್ಕರಣೆ ಕುರಿತು ಸಹ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪರಿಗಣಿಸಿದ ಆಯೋಗ:
ವೇತನ ಆಯೋಗವು ನೌಕರ ಸಂಘದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ವಾರದಲ್ಲಿ 5 ದಿನ ಕೆಲಸ ಮತ್ತು 2 ದಿನ ರಜೆ ಪದ್ದತಿ ಇರುವ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಇತರೆ ರಾಜ್ಯಗಳಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಕೇಂದ್ರ ಸರ್ಕಾರದ ಕಚೇರಿಗಳಲ್ಲದೆ, ತಮಿಳುನಾಡು, ಗೋವಾ, ಬಿಹಾರ, ದೆಹಲಿ, ಪಂಜಾಬ್‌, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈಗಾಗಲೇ ವಾರದಲ್ಲಿ 5 ದಿನ ಕೆಲಸ 2 ದಿನ ರಜೆ ಪದ್ಧತಿ ಜಾರಿಯಲ್ಲಿದೆ. ವಾರದ ಐದು ದಿನವಷ್ಟೇ ಕೆಲಸವಾಗಿದ್ದರಿಂದ ಪ್ರತಿದಿನದ ಕೆಲಸದ ಸಮಯವನ್ನು  ಹೆಚ್ಚಿಸಲಾಗಿದ್ದು, ಬೆಳಗ್ಗೆ 9.30 ರಿಂದ ಸಂಜೆ 6 ವರೆಗೆ ಅಲ್ಲಿ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.

ರಾಜ್ಯದಲ್ಲಿಯೂ ಸಹ ವಾರದಲ್ಲಿ 2 ದಿನ ರಜೆ ಪದ್ಧತಿಯನ್ನು ಜಾರಿಗೊಳಿಸಿ, ಉಳಿದ ಐದು ದಿನದ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲು ಸರ್ಕಾರಿ ನೌಕರರ ಸಂಘ ತನ್ನ ಸಹಮತ ವ್ಯಕ್ತಪಡಿಸಿದೆ. ಪ್ರತಿ ಭಾನುವಾರದ ಜೊತೆಗೆ ಪ್ರತಿ ಶನಿವಾರ ಸರ್ಕಾರಿ ರಜೆ ನೀಡಿ ಉಳಿದ ದಿನಗಳಲ್ಲಿ ಕೆಲಸದ ಸಮಯವನ್ನು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆ ತನಕ ಹೆಚ್ಚಿಸಿದರೆ ಶನಿವಾರ ರಜೆ ನೀಡುವುದರಿಂದ ಆಗುವ ಕೆಲಸದ ಒತ್ತಡವನ್ನು ನಿಭಾಯಿಸಬಹುದು ಎಂಬ ವಾದ ವ್ಯಕ್ತವಾಗಿದೆ.

ಒಂದು ವೇಳೆ ವಾರದಲ್ಲಿ 2 ದಿನ ರಜೆ ನೀಡುವುದು ಕಷ್ಟವಾದಲ್ಲಿ ಕಡೇ ಪಕ್ಷ, 2ನೇ ಶನಿವಾರದಂತೆ ನಾಲ್ಕನೆ ಶನಿವಾರವೂ ಕಡ್ಡಾಯವಾಗಿ ಸರ್ಕಾರಿ ರಜೆ ಘೋಷಣೆ ಮಾಡಬೇಕೆನ್ನುವ ಒತ್ತಡವನ್ನು ಸರ್ಕಾರಿ ನೌಕರರ ಸಂಘ ವೇತನ ಆಯೋಗದ ಮೇಲೆ ಹಾಕಿದೆ.

ಮಹಾರಾಷ್ಟ್ರದಲ್ಲೂ ಆಗ್ರಹ:
ಮಹಾರಾಷ್ಟ್ರದಲ್ಲೂ ಸಹ ವಾರದಲ್ಲಿ 2 ದಿನ ಸರ್ಕಾರಿ ರಜೆ ನೀಡುವ ಪದ್ಧತಿ ಜಾರಿಗೆ ತರುವಂತೆ ಅಲ್ಲಿನ ಸರ್ಕಾರಿ ನೌಕರರು ಮುಷ್ಕರ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಸಮಿತಿಯನ್ನು ರಚನೆ ಮಾಡಿ ಸದ್ಯದಲ್ಲಿಯೇ 2ದಿನ ರಜೆ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಅಲ್ಲಿನ ಸರ್ಕಾರ ನೌಕರರಿಗೆ ಭರವಸೆ ನೀಡಿದೆ.

ರಜೆಯಿಂದ ಲಾಭ ಏನು..?
* ಶನಿವಾರ ರಜೆ ನೀಡುವುದರಿಂದ ಬೆಂಗಳೂರು ಸೇರಿ ಹಲವಡೆ ಟ್ರಾಫಿಕ್‌ ಸಮಸ್ಯೆ ಇರುವುದಿಲ್ಲ. ಇದರಿಂದ ವಾಯುಮಾಲಿನ್ಯ ತಡೆಗಟ್ಟಲು ಅನುಕೂಲವಾಗಲಿದೆ.
* ನೌಕರರು ಹಾಗೂ ಸಾರ್ವಜನಿಕರ ಸಂಚಾರ ಕಡಿಮೆ ಆಗಿ ಹೆಚ್ಚಿನ ಪ್ರಮಾಣದ ಇಂಧನ ಸಹ ಉಳಿತಾಯವಾಗಲಿದೆ.
* ಒಂದು ದಿನದ ವಿದ್ಯುತ್ಛಕ್ತಿ ಬಳಕೆಯ ಉಳಿತಾಯವೂ ಆಗಲಿದ್ದು, ಕೊರತೆ ನೀಗಿಸಲು ಸಹಾಯವಾಗುತ್ತದೆ.
* ಸರ್ಕಾರಿ ನೌಕರರು ಒತ್ತಡವನ್ನು ನಿವಾರಿಸಿಕೊಂಡು ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಅನಾನುಕೂಲಗಳೇನು?
* ವಾರದಲ್ಲಿ 2 ದಿನದ ರಜೆಯಿಂದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಕಾಲಕ್ಕೆ ಸ್ಪಂದಿಸುವುದು ಕಷ್ಟಕರ.
* 2 ದಿನ ರಜೆ ಸಿಕ್ಕರೆ ನೌಕರರು ಮತ್ತಷ್ಟು ಸೋಮಾರಿಗಳಾಗಿ ಸಾರ್ವಜನಿಕರ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿಯುವ ಸಾದ್ಯತೆಗಳಿವೆ.
* ರಜೆಗಳು ಅಧಿಕವಾಗಿದ್ದು, ವಾರದಲ್ಲಿ ಎರಡು ದಿನ ರಜಾ ಪದ್ಧತಿ ಜಾರಿಯಾದರೆ ಸರ್ಕಾರಿ ನೌಕರರು ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿಯೂ ರಜೆ ಹಾಕಿದರೆ ಕಡತ ವಿಲೇವಾರಿ ವಿಳಂಬವಾಗಿ ಆಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೇರೆ ರಾಜ್ಯಗಳ ಕೆಲಸದ ಸಮಯ
ಕೇಂದ್ರ ಸರ್ಕಾರಿ ಕಚೇರಿ ಸಮಯ   ಬೆ. 9ರಿಂದ ಸಂ.6
ಗೋವಾ                                 ಬೆ.9.30 ರಿಂದ ಸಂ. 6
ತಮಿಳುನಾಡು                          ಬೆ.10 ರಿಂದ ಸಂ.5.45
ಬಿಹಾರ                                  ಬೆ.9.30ರಿಂದ ಸಂ. 6
ದೆಹಲಿ                                   ಬೆ.9.30 ರಿಂದ ಸಂ.6
ಪಂಜಾಬ್‌                              ಬೆ.9.30 ರಿಂದ ಸಂ.6
ರಾಜಸ್ಥಾನ                               ಬೆ.9.30ರಿಂದ ಸಂ.6
ಉ.ಪ್ರ                                    ಬೆ.9.30 ರಿಂದ  ಸಂ.6
ಪಶ್ಚಿಮ ಬಂಗಾಳ                        ಬೆ.10.15 ರಿಂದ ಸಂ. 5.15

ಸರ್ಕಾರಿ ಕಛೇರಿಗಳಲ್ಲಿ ವಾರದಲ್ಲಿ 5 ದಿನ ಕೆಲಸ 2 ದಿನ ರಜೆ ನೀಡುವ ಬಗ್ಗೆ ಮನವಿಯು ತಮಗೆ ಸಲ್ಲಿಕೆ ಆಗಿದೆ. ಈ ಬಗ್ಗೆ ಸಾದ್ಯಾಸಾದ್ಯತೆಗಳ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
– ಬಿ.ವಿ. ಶ್ರೀನಿವಾಸಮೂರ್ತಿ, 6ನೇ ವೇತನ ಆಯೋಗದ ಅಧ್ಯಕ್ಷರು.

ವಾರದಲ್ಲಿ 2ದಿನ ರಜೆ ನೀಡಿದರೆ ದಕ್ಷತೆಯಿಂದ ಕೆಲಸ ಮಾಡಲು ಅನುಕೂಲ. ಅನಗತ್ಯ ಜಯಂತಿಗಳ ರಜೆಗೆ ಕಡಿವಾಣ ಹಾಕಿ ಶನಿವಾರ ಮತ್ತು ಭಾನುವಾರ ರಜೆ ನೀಡುವಂತೆ ವೇತನ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕಡೇ ಪಕ್ಷ 4ನೇ ಶನಿವಾರವಾದರೂ ರಜೆ ನೀಡಿ ಎಂದು ಕೇಳಿದ್ದೇವೆ.
– ಮಂಜೇಗೌಡ, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ.

– ಸೋಮಶೇಖರ್‌ ಕವಚೂರು

ಟಾಪ್ ನ್ಯೂಸ್

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.