ವಿಜಯಮಲ್ಯ ಹೊಂದಿರುವ ಶೇರುಗಳಿಗೆ ಮಾನ್ಯತೆ ಇಲ್ಲ
Team Udayavani, Oct 26, 2018, 6:25 AM IST
ಬೆಂಗಳೂರು: ಯುಆರ್ಬಿಬಿಎಲ್ ಸಂಸ್ಥೆಯಲ್ಲಿ ವಿಜಯಮಲ್ಯ ಹೊಂದಿರುವ 4152272 ಶೇರುಗಳನ್ನು ಇದೇ ಅ.30ರಂದು ಇ-ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣ ಪ್ರಕಟಿಸಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಗಳು ಈ ಶೇರುಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಶೇರುಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರಾಷ್ಟ್ರದ ವಿವಿಧ ಬ್ಯಾಂಕ್ಗಳಲ್ಲಿ ಕೋಟ್ಯಂತರ ರೂ. ಸಾಲ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದಲ್ಲದೆ, ಕೋಟ್ಯಂತರ ರೂ. ತೆರಿಗೆ ವಂಚನೆ ಆರೋಪದ ಮೇಲೆ ಈಗಾಗಲೇ ಮಲ್ಯ ಅವರಿಗೆ ಸೇರಿದ ಯುಆರ್ಬಿಬಿಎಲ್ ಸಂಸ್ಥೆಯ 4152272 ಶೇರುಗಳನ್ನು ಜಪ್ತಿ ಮಾಡಲಾಗಿದೆ. ಹೀಗಾಗಿ ಈ ಶೇರುಗಳು ಆದಾಯ ತೆರಿಗೆ ಕಾಯ್ದೆ 281 ಸೆಕ್ಷನ್ ಪ್ರಕಾರ ಮಾನ್ಯತೆ ಹೊಂದಿರುವುದಿಲ್ಲ. ಒಂದು ವೇಳೆ ಯಾರಾದರೂ ಶೇರುಗಳನ್ನು ಖರೀದಿ ಮಾಡಿದರೆ ಇದಕ್ಕೆ ಖರೀದಿದಾರರೇ ಹೊಣೆಗಾರರಾಗಿರುತ್ತಾರೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.