Udayavni Special

ರಾತ್ರೋರಾತ್ರಿ 24 ಮರಗಳಿಗೆ ಕೊಡಲಿ ಪೆಟ್ಟು

Team Udayavani, May 15, 2018, 12:22 PM IST

ratroratri.jpg

ಮಹದೇವಪುರ: ಬೆಳ್ಳಂದೂರು ಬಳಿಯ ಹೊರವರ್ತುಲ ರಸ್ತೆ ಬದಿಯಲ್ಲಿರುವ ಜಾಹಿರಾತು ಪಲಕಗಳ ವೀಕ್ಷಣೆಗೆ ಅಡ್ಡಲಾಗಿವೆ ಎಂಬ ಕಾರಣಕ್ಕೆ, ರಸ್ತೆ ವಿಭಜಕದಲ್ಲಿ ಬೆಳೆಸಲಾಗಿದ್ದ 24 ಮರಗಳನ್ನು ರಾತ್ರೋರಾತ್ರಿ ಕತ್ತರಿಸಲಾಗಿದೆ. ಜಾಹೀರಾತು ಮಾಫಿಯಾದವರ ಈ ಕೃತ್ಯಕ್ಕೆ ಸ್ಥಳೀಯ ನಾಗರಿಕರು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರವರ್ತುಲ ರಸ್ತೆಯಲ್ಲಿನ ಬೆಳ್ಳಂದೂರು ಬಳಿಯ ಇಬ್ಬಲೂರು ಮೇಲ್ಸೇತುವೆ ರಸ್ತೆ ಸಮೀಪ ಮೇ 9ರ ತಡರಾತ್ರಿ ಘಟನೆ ನಡೆದಿದೆ. ಜಾಹಿರಾತು ಫ‌ಲಕಗಳ ವೀಕ್ಷಣೆಗೆ ಅಡ್ಡಿಯಾಗುತ್ತವೆ ಎಂಬ ಕಾರಣಕ್ಕೆ ವಿಭಜಕದಲ್ಲಿನ ಮಗಳನ್ನು ಕಡಿದ ನಾಲ್ಕನೇ ಪ್ರಕರಣ ಇದಾಗಿದ್ದು, ಈವರೆಗೆ ಒಂದು ಪ್ರಕರಣ ಸಂಬಂಧವೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮರಗಳನ್ನು ಕಡಿದ ವಿಷಯ ತಿಳಿದು ಭಾನುವಾರ ವೃಕ್ಷ ವೈದ್ಯ ವಿಜಯ್‌ ನಿಶಾಂತ್‌ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ ಇಬ್ಬಲೂರು, ಬೆಳ್ಳಂದೂರು, ಎಚ್‌ಎಸ್‌ಆರ್‌ ಬಡಾವಣೆ ನಿವಾಸಿಗಳು, ಕತ್ತರಿಸಿದ ಮರಗಳ ಕೊಂಬೆಗಳು ಮತ್ತೆ ಬೆಳೆಯುವಂತಾಗಲು ಹಾಗೂ ಸೋಂಕು ತಗುಲದಂತೆ ಶಿಲಿಂದ್ರ ನಾಶಕ ಔಷಧ ಲೇಪಿಸಿ, ಚಿಕಿತ್ಸೆ ನೀಡಿದ್ದಾರೆ. ಹಾಗೇ ಮರ ಕಡಿದ ಮಾಫಿಆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ.

ಮಾರತ್ತಹಳ್ಳಿ, ಮಹದೇವಪುರ ಮತ್ತು ಬೆಳ್ಳಂದೂರು ಭಾಗದ ಹೊರವರ್ತುಲ ರಸ್ತೆಯಲ್ಲಿ ಜಾಹಿರಾತು ಫ‌ಲಕ ಅಳವಡಿಸುವ ಖಾಸಗಿ ಸಂಸ್ಥೆಗಳು, ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತಮ್ಮ ಜಾಹಿರಾತುಗಳು ಸ್ಪಷ್ಟವಾಗಿ ಕಾಣಲಿ ಎಂಬ ಉದ್ದೇಶದಿಂದ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ.

ಸ್ವಾರ್ಥಕ್ಕಾಗಿ ಮತ ಕಡಿಯುವ ದುಷ್ಕರ್ಮಿಗಳ ವಿರುದ್ಧ ನಾಗರಿಕರು ಧ್ವನಿ ಎತ್ತಬೇಕಿದೆ. ಜಾಹಿರಾತು ಪಲಕದ ವೀಕ್ಷಣೆಗೆ ಅಡ್ಡಿಯಾಗುತ್ತದೆ ಎಂದು ಮರ ಕತ್ತರಿಸುವುದು ಕಾನೂನು ಬಾಹಿರವಾದ್ದು, ಹೀಗೆ ಮರ ಕತ್ತರಿಸಿದ ಸಂಸ್ಥೆಯ ಪರವಾನಗಿ ರದ್ದು ಮಾಡುವ ಜತೆಗೆ ಜಾಹಿರಾತು ಪಲಕ ತೆರವು ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದರು. 24 ಮರಗಳನ್ನು ಕತ್ತರಿಸಿದ ಪ್ರಕರಣ ವಿರೋಧಿಸಿ ಮೇ 17ರ ಗುರುವಾರ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಲಿದ್ದೇವೆ ಎಂದು ವೃಕ್ಷ ವೈದ್ಯ ವಿಜಯ್‌ ನಿಶಾಂತ್‌ ತಿಳಿಸಿದ್ದಾರೆ.

ಜಾಹೀರಾತು ಫ‌ಲಕ ಕಾಣುವುದಿಲ್ಲವೆಂಬ ಕಾರಣದಿಂದ ಎರಡು ಮೂರು ವರ್ಷದ ಮರಗಳನ್ನು ಕತ್ತರಿಸಲಾಗಿದ್ದು, ಸ್ಥಳೀಯ ನಾಗರಿಕ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮರಗಳ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪಾಲಿಕೆಯ ಅಧಿಕಾರಿಗಳನ್ನು ಒತ್ತಾಯಿಸಲಾಗಿದ್ದು, ದೂರು ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ. 
-ವಿಜಯ್‌ ನಿಶಾಂತ್‌, ಪರಿಸರ ಪ್ರೇಮಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್: ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಮಂಗಳೂರಿನಲ್ಲಿ‌ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

ಶಾಲೆ ಆರಂಭ: ಜನಪ್ರತಿನಿಧಿಗಳಿಂದ ಸಲಹೆ ಕೋರಿದ ಶಿಕ್ಷಣ ಸಚಿವ

ಶಾಲೆ ಆರಂಭ: ಜನಪ್ರತಿನಿಧಿಗಳಿಂದ ಸಲಹೆ ಕೋರಿದ ಶಿಕ್ಷಣ ಸಚಿವ

ಕೆಪಿಸಿಸಿ ಸಭೆಯಲ್ಲಿ ನಿರ್ಧಾರ: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರ

ಕೆಪಿಸಿಸಿ ಸಭೆಯಲ್ಲಿ ನಿರ್ಧಾರ: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bng-tdy-4

ಮಾಸ್ಕ್ ಹಾಕದಿದ್ದರೆ ಸಾವಿರ ರೂ.ದಂಡ?

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

ಸಚಿವ ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮಾಜ ನಾಯಕರ ಸಭೆ

bng-tdy-3

ವಿಕ್ಟೋರಿಯಾ ಆಸ್ಪತ್ರೆಗಳ ಸೇವೆ ಪುನಾರಂಭ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿದ್ದವರ ಸೆರೆ

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಗ್ರಿಲ್‌

ಫ್ಯಾಷನ್‌ ಲೋಕ ದಲ್ಲೂ ಡ್ರಗ್ಸ್‌; ದೆಂಬ್ಲಾಗೆ ಸಿಸಿಬಿ ಗ್ರಿಲ್‌

MUST WATCH

udayavani youtube

ಕರಿಮೆಣಸು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyamಹೊಸ ಸೇರ್ಪಡೆ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್: ಉಡುಪಿಯಲ್ಲಿ ಬಸ್ ಸಂಚಾರ ವಿರಳ, ಬಸ್ ಬಂದ್ ಮಾಡಲು ಸಂಘಟನೆಗಳ ಮನವಿ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್:ಬಳ್ಳಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ, APMC ಮಾರ್ಕೆಟ್ ಎಂದಿನಂತೆ

ಕರ್ನಾಟಕ ಬಂದ್: ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಮಂಗಳೂರಿನಲ್ಲಿ‌ ನೀರಸ ಪ್ರತಿಕ್ರಿಯೆ, ಬಸ್ ಸಂಚಾರ ಆರಂಭ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ಕರ್ನಾಟಕ ಬಂದ್: ಶೀರ್ಷಾಸನ ಮಾಡಿ ರಾಜ್ಯ, ‌ಕೇಂದ್ರ ಸರ್ಕಾರದ ವಿರುದ್ಧ ರೈತರ‌ ಆಕ್ರೋಶ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.