ಆಟೋ ಚಾಲಕನಿಗೆ ಯುವತಿಯರ ಶೂ ಏಟು!


Team Udayavani, Jun 3, 2019, 3:00 AM IST

Udayavani Kannada Newspaper

ಬೆಂಗಳೂರು: ಕಂಠಪೂರ್ತಿ ಮದ್ಯ ಸೇವಿಸಿದ್ದ ಮೂವರು ಯುವತಿಯರು, ಆಟೋ ಚಾಲಕನಿಗೆ “ಶೂ’ನಿಂದ ಹೊಡೆದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಆಟೋ ಚಾಲಕ, ಕೆಂಗೇರಿಯ ನಾಗದೇವನಹಳ್ಳಿ ನಿವಾಸಿ ಸುರೇಂದ್ರ ಎಂಬವರು ದೂರು ನೀಡಿದ್ದು, ಈ ದೂರು ಆಧರಿಸಿ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್‌) ದಾಖಲಿಸಿಕೊಂಡು, ಅಪರಿಚಿತ ಯುವತಿಯರಿಗಾಗಿ ಶೋಧ ನಡೆಸುತ್ತಿದ್ದಾರೆ.

ದೂರುದಾರ ಸುರೇಂದ್ರ ಸುಮಾರು 20 ವರ್ಷಗಳಿಂದ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ಕುಟುಂಬ ಸದಸ್ಯರ ಜತೆ ವಾಸವಾಗಿದ್ದು, ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮೇ 29ರಂದು ರಾತ್ರಿ 8.30ರ ಸುಮಾರಿಗೆ ಸುರೇಂದ್ರ ಎಂ.ಜಿ.ರಸ್ತೆಯಲ್ಲಿ ಆಟೋ ನಿಲ್ಲಿಸಿಕೊಂಡಿದ್ದರು.

ಈ ವೇಳೆ ಮದ್ಯದ ಅಮಲಿನಲ್ಲಿದ್ದ ಮೂವರು ಯುವತಿಯರು ತಮ್ಮನ್ನು ವಿಜಯನಗರದ ಹೊಸಹಳ್ಳಿಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಒಪ್ಪಿದ ಸುರೇಂದ್ರ ಆಟೋದಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ.

ನಂತರ ಮೀಟರ್‌ ಹಾಕಿ ಕರೆದೊಯ್ಯುವ ಮಾರ್ಗ ಮಧ್ಯೆ ಶಿವಾನಂದ ವೃತ್ತದ ಪ್ರತಿಷ್ಠಿತ ಹೋಟೆಲ್‌ ಒಂದರ ಸಮೀಪ ಮೂವರೂ ಯುವತಿಯರು ಪರಸ್ಪರ ಕಿತ್ತಾಡಿಕೊಂಡು, ಜೋರಾಗಿ ಕಿರುಚಾಡುತ್ತಿದ್ದರು. ಆಗ ಮಧ್ಯೆ ಪ್ರವೇಶಿಸಿದ ಸುರೇಂದ್ರ, “ಯಾಕಮ್ಮ ಚಿರಾಡುತ್ತಿರಾ, ಸುಮ್ಮನೆ ಕುಳಿತುಕೊಳ್ಳಿ’ ಎಂದು ಹೇಳಿದ್ದಾರೆ.

ಅಷ್ಟಕ್ಕೆ ಆಕ್ರೋಶಗೊಂಡ ಯುವತಿಯರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸುರೇಂದ್ರ ಅವರು ಕೂಡಲೇ ಆಟೋ ನಿಲ್ಲಿಸಿ, ಯಾಕಮ್ಮ ಬೈತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯುವತಿಯೊಬ್ಬಳು ಆಟೋದಲ್ಲಿ ಕುಳಿತಲ್ಲಿನಿಂದಲೇ “ಶೂ’ನಿಂದ ಸುರೇಂದ್ರ ಅವರ ಕೆನ್ನೆಗೆ ಹೊಡೆದಿದ್ದಾಳೆ.

ಈ ವೇಳೆ ಆಟೋ ಚಾಲಕ ಮತ್ತು ಯುವತಿಯರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸ್ತುತಿದ್ದಂತೆ ಯುವತಿಯರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಈ ಸಂಬಂಧ ಸುರೇಂದ್ರ ಅವರು ಮೂವರು ಅಪರಿಚಿತ ಯುವತಿಯರನ್ನು ಪತ್ತೆ ಹಚ್ಚಿ ತಮಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಎಸೆಸೆಲ್ಸಿ ಪರೀಕ್ಷೆ ಫ‌ಲಿತಾಂಶ: ರಾಜ್ಯದ ಶೇ. 16 ವಿದ್ಯಾರ್ಥಿಗಳಿ ಗೆ “ಎ ಪ್ಲಸ್‌’ ಗ್ರೇಡ್‌

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಮರಳಿನ ಮೋಡಿಗೆ ಮಾಯವಾದ ಬುರ್ಜ್‌ ಖಲೀಫಾ!

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಮಸೀದಿಯೋ ಅಥವಾ ಮಂದಿರವೋ…? ಬಾಬ್ರಿ ಮಸೀದಿಯಿಂದ ಕುತುಬ್‌ ಮಿನಾರ್‌ವರೆಗೆ…

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರ

ಆರ್ಥಿಕ ಪ್ರಗತಿಗೆ ತಡೆಯಾಗಿರುವ ಹಣದುಬ್ಬರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಉದ್ಯೋಗ ನೀಡಿದ ಸಂಸ್ಥೆಗೆ ಬೆದರಿಕೆ ಹಾಕಿ ಕೆಲಸ ಕಳೆದುಕೊಂಡ ಟೆಕ್ಕಿ

ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್‌ಡಿಆರ್‌ಎಫ್ ತಂಡ ರಾಜ್ಯಕ್ಕೆ

ಮಳೆಯಬ್ಬರ ಎದುರಿಸಲು ಸಕಲ ಸಿದ್ಧತೆ : ಮುಂದಿನ ವಾರ 4 ಎನ್‌ಡಿಆರ್‌ಎಫ್ ತಂಡ ರಾಜ್ಯಕ್ಕೆ

ನಟಿ ಚೇತನಾ ಸಾವು: ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆಗೆ ಬೀಗ

ನಟಿ ಚೇತನಾ ಸಾವು: ಶಸ್ತ್ರಚಿಕಿತ್ಸೆ ಮಾಡಿದ್ದ ಆಸ್ಪತ್ರೆಗೆ ಬೀಗ

ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ

ಗುತ್ತಿಗೆದಾರರ ಬೇಜವಾಬ್ದಾರಿ, ಕಾಮಗಾರಿ ವಿಳಂಬದಿಂದ ಮನೆಗಳಿಗೆ ನೀರು :ಎಸ್.ಟಿ.ಸೋಮಶೇಖರ್ ಕಿಡಿ

ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ

ಅಪರಾಧಿಗಳನ್ನು ಹಿಡಿಯಬೇಕಾದ ಪೊಲೀಸರು ಅಪರಾಧ ನಡೆಸಿದರೆ ಕ್ಷಮೆ ಇಲ್ಲ : ಗೃಹ ಸಚಿವ ಎಚ್ಚರಿಕೆ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

ಮಳೆಗಾಲ: ಅವಘಡ ಸಂಭವಿಸದಂತೆ ಎಚ್ಚರ ವಹಿಸಿ

ಮಳೆಗಾಲ: ಅವಘಡ ಸಂಭವಿಸದಂತೆ ಎಚ್ಚರ ವಹಿಸಿ

5ಜಿ ಕರೆ ಪರೀಕ್ಷೆ ಯಶಸ್ವಿ: ಸಚಿವ

5ಜಿ ಕರೆ ಪರೀಕ್ಷೆ ಯಶಸ್ವಿ: ಸಚಿವ

ಹೈದರಾಬಾದ್‌: ಕಿಡ್ನಿಯಲ್ಲಿದ್ದವು 206 ಕಲ್ಲು!

ಹೈದರಾಬಾದ್‌: ಕಿಡ್ನಿಯಲ್ಲಿದ್ದವು 206 ಕಲ್ಲು!

ಟ್ರಂಪ್‌ ಬರಹಗಳಿಗೆ ಟ್ವಿಟರ್‌ ಮತ್ತೆ ನಿಷೇಧ

ಟ್ರಂಪ್‌ ಬರಹಗಳಿಗೆ ಟ್ವಿಟರ್‌ ಮತ್ತೆ ನಿಷೇಧ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

ಪ್ರೊ ಲೀಗ್‌ ಹಾಕಿ : ಅಮಿತ್‌ ರೋಹಿದಾಸ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.