ಪತ್ನಿಯ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ ಬಂಧನ

Team Udayavani, Aug 11, 2017, 11:47 AM IST

ARREST].jpg

ಬೆಂಗಳೂರು: ವರದಕ್ಷಿಣೆ ತರಲು ಒಪ್ಪದ ಪತ್ನಿಯನ್ನು ಕತ್ತುಹಿಸುಕಿ ಕೊಲೆಗೈದ ಕುಡುಕ ಪತಿಯೊಬ್ಬ ನಂತರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

 ಶಾಲಿನಿ (26) ಮೃತ ಗೃಹಿಣಿ.  ಈ ಬಗ್ಗೆ ಶಾಲಿನಿಯ ತಾಯಿ ಜಯಲಕ್ಷ್ಮಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದು,  ಅಳಿಯ ಆನಂದ್‌ ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಗಳನ್ನು ಕೊಲೈಗೈದಿದ್ದಾನೆ ಎಂದು ಆರೋಪಿಸಿದ್ದಾರೆ.

ದೂರಿನ ಅನ್ವಯ ಆನಂದ್‌ನನ್ನು ಬಂಧಿಸಿ ಐಪಿಸಿ ಕಲಂ 302,304(ಬಿ) ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯ ಬಳಿಕ ಕೊಲೆಯೋ? ಆತ್ಮಹತ್ಯೆಯೋ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ 8 ತಿಂಗಳಿಂದ ಜವರೇಗೌಡನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆರೋಪಿ ಆನಂದ್‌, ಆಟೋ ಚಾಲಕನಾಗಿದ್ದು ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಪತ್ನಿ ಶಾಲಿನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ ಬೋಗ್ಯದ ಮನೆ ಹಾಕಿಕೊಳ್ಳಲು ಪೋಷಕರಿಂದ 1 ಲಕ್ಷ ರೂ. ತರುವಂತೆ ಪೀಡಿಸುತ್ತಿದ್ದ.

ಅದೇ ರೀತಿ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆನಂದ್‌, ಹಣದ ವಿಚಾರಕ್ಕೆ ಪತ್ನಿಯ ಜೊತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆ, ಪೋಷಕರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾಳೆ. ಇದಾದ ಬಳಿಕ ಮಕ್ಕಳು ಮಲಗಿದ ಮೇಲೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದು, ಬಳಿಕ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾನೆ ಎಂದು ಶಾಲಿನಿ ಪೋಷಕರು ಪೊಲೀಸರಿಗೆ ದೂರಿದ್ದಾರೆ. 

ಗುರುವಾರ ಬೆಳಿಗ್ಗೆ ಏನು ಅರಿಯದವಂತೆ ನಟಿಸಿದ ಆನಂದ್‌, ತನ್ನ  ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ತನ್ನ ಪತ್ನಿ ಕಾಲು ಜಾರಿ ಬಚ್ಚಲ ಮನೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ. ಈ ವಿಚಾರ ಶಾಲಿನಿ ಪೋಷಕರಿಗೂ ಗೊತ್ತಾಗಿದ್ದು ಹುಣಸೂರಿನಿಂದ ಆಗಮಿಸಿದ್ದಾರೆ. ಅಕ್ಕ-ಪಕ್ಕದ ಮನೆಯವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ನಾಲ್ಕು ವರ್ಷದ ಒಂದು ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಣುಮಗುವಿದೆ. ಗುರುವಾರ ಬೆಳಗಿನವರೆಗೂ ತಾಯಿ ಸತ್ತಿರುವ ವಿಷಯ ಮಕ್ಕಳಿಗೆ ಗೊತ್ತಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಟಾಪ್ ನ್ಯೂಸ್

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

swati maliwal

AAP; ಸಂತ್ರಸ್ತೆಯಾದ ಸ್ವಾತಿ ಮಲಿವಾಲ್

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.