ಬುದ್ಧಿವಂತರ ಪಾಶ್ಚಾತ್ಯ ವಲಸೆ ತಡೆ ಅಗತ್ಯ


Team Udayavani, Jan 22, 2020, 3:09 AM IST

bhuddivanta

ಬೆಂಗಳೂರು: ಉತ್ತಮ ಅವಕಾಶಗಳಿಗಾಗಿ ಬುದ್ಧಿ ವಂತವರ್ಗ(ಇನ್‌ಟೆಲೆಕುcವಲ್ಸ್‌) ಪಾಶ್ಚಾತ್ಯ ರಾಷ್ಟ್ರ ಗಳಿಗೆ ವಲಸೆ ಹೋಗುತ್ತಿರುವುದು ಸದ್ಯದ ಸವಾಲಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಆಗಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ಸಮಾಜ ವಿಜ್ಞಾನ ಸಮ್ಮೇಳನ ಸಂಘಟನೆ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲ ಯದ ಸಹಯೋಗದಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 43ನೇ ಭಾರತೀಯ ಸಮಾಜ ವಿಜ್ಞಾನ ಸಮ್ಮೇಳನದ ಸಮಾ ರೋಪದಲ್ಲಿ ಮಾತನಾಡಿ, ನಮ್ಮ ಜೀವನ ಪದ್ಧತಿಯಲ್ಲಿ ಮೂಲಭೂತ ಬದಲಾವಣೆಯಾಗುತ್ತಿದೆ. ನಗರ ಪ್ರದೇಶದಲ್ಲಿರುವ ಅತ್ಯುತ್ತಮ ಸೌಲಭ್ಯಗಳನ್ನು ನೋಡಿ, ಹಳ್ಳಿ ಭಾಗದಿಂದ ನಗರಕ್ಕೆ ವಲಸೆ ಬರುತ್ತಿದ್ದಾರೆ ಎಂದರು.

ವಲಸೆ ತಡೆಯುವುದೇ ಇಂದಿನ ದೊಡ್ಡ ಸವಾಲು. ಕಾರ್ಮಿಕರ ವಲಸೆ ಮಾತ್ರವಲ್ಲ, ಬುದ್ಧಿವಂತವರ್ಗ ಉತ್ತಮ ಅವಕಾಶಗಳಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೀಡುವ ಸೌಲಭ್ಯಗಳನ್ನು ಆಧರಿಸಿ ಬುದ್ಧಿವಂತ ವರ್ಗ ಆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ದೇಶದ ಒಳಗೂ ನಿತ್ಯದ ಅಸ್ಥಿತ್ವಕ್ಕಾಗಿ ವಲಸೆ ನಡೆಯುತ್ತಲೇ ಇದೆ. ಇದರಿಂದ ಭಾಷೆ, ಸಂಸ್ಕೃತಿ ಹಾಗೂ ಇತರೆ ವಿಷಯಗಳ ನಡುವೆ ಸಂಘರ್ಷ ನಡೆಯುತ್ತಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಜನ ಸಾಮಾನ್ಯರೊಂದಿಗೆ ಚರ್ಚೆ ನಡೆಸುವ ಮೂಲಕ ವಲಸೆಯಂತಹ ಗಂಭೀರ ಸಮಸ್ಯೆಯನ್ನು ತಡೆಯಲು ಪ್ರಯತ್ನ ನಡೆಯಬೇಕು. ಸಮಾಜ ವಿಜ್ಞಾನ ಸಮ್ಮೇಳನ ಇದಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಜ್ಞಾನ, ತಂತ್ರಜ್ಞಾನ ಹಾಗೂ ವೈಜ್ಞಾನಿಕತೆಯ ಆಧಾರದಲ್ಲಿ ಯಾವುದೇ ಹೊಸ ಉಪಕರಣ ಅಥವಾ ಸಾಧನ ಸಿದ್ಧಪಡಿಸಿದರೂ, ಅದು ಸಮಾಜದ ಸಮಸ್ಯೆಗೆ ಪರಿಹಾರ ನೀಡುವಂತಿರಬೇಕು.

ನಾವು ಗಳಿಸುವ ಜ್ಞಾನ ಮತ್ತು ಕೌಶಲ್ಯ ವ್ಯಕ್ತಿಗತ ಏಳ್ಗೆಗೆ ಸೀಮಿತವಾಗಿದರೆ, ಸಮಾಜದ ಏಳ್ಗೆಗೆ, ನೆರೆಯ ರಾಷ್ಟ್ರಗಳ ಏಳ್ಗೆಗೆ ಅನುಕೂಲವಾಗಬೇಕು ಎಂದರು. ಕ್ಷಿಪ್ರ ಅಭಿವೃದ್ಧಿಯ ನೆಪದಲ್ಲಿ ಅನೇಕ ಅಂಶಗಳನ್ನು ಮರೆತುಬಿಡುತ್ತಿದ್ದೇವೆ. ಕೇವಲ ಲಾಭಗಳಿಕೆಯೊಂದೇ ನಮ್ಮ ಉದ್ದೇಶವಾಗಿರಬಾರದು. ಕ್ಷಿಪ್ರ ಅಭಿವೃದ್ಧಿ ಯಿಂದ ಪರಿಸರ, ಜೀವಸಂಕುಲ ಹಾಗೂ ಒಟ್ಟರೆ ಜೀವನ ಕ್ರಮದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಐಎಸ್‌ಎಸ್‌ಐ ಪ್ರಧಾನ ಕಾರ್ಯದರ್ಶಿ ಪ್ರೊ.ಡಿ.ಎಂ.ದ್ವಾರಕನಾಥ್‌, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್‌.ಜಾಫೆಟ್‌ ಇದ್ದರು.

ಮೊಬೈಲ್‌ಗ‌ಳಲ್ಲಿ ಸಿಗಲಿದೆ ಇಸ್ರೋ ನಾವಿಕ್‌ ವ್ಯವಸ್ಥೆ
ಬೆಂಗಳೂರು: ಅಮೆರಿಕದ ದೂರಸಂಪರ್ಕ ಕಂಪನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪ ಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರ ತರಲಿರುವ ಹೊಸ ಮೊಬೈಲ್‌ಗ‌ಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್‌ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್‌ 720ಜಿ, ಸ್ನ್ಯಾಪ್‌ಡ್ರಾಗನ್‌ 662 ಮತ್ತು ಸ್ನ್ಯಾಪ್‌ಡ್ರಾಗನ್‌460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾ ಗಿದೆ. ಇದೇ ಮೊದಲ ಬಾರಿಗೆ ಚಿಪ್‌ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮ ದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್‌, “ಸಂಸ್ಥೆ ಕ್ವಾಲ್ಕಾಂ ಹೊಂದಿರುವ ತಾಂತ್ರಿಕ ವ್ಯವಸ್ಥೆಯಲ್ಲಿ ಪರಿಶೀಲಿಸಿ ತೃಪ್ತಿ ಹೊಂದಿದ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಅಮೆರಿಕದ ಜಿಪಿಎಸ್‌ ವ್ಯವಸ್ಥೆಗೆ ಸೆಡ್ಡು ಹೊಡೆವ ನಿಟ್ಟಿನಲ್ಲಿ ಇಸ್ರೋ ನಾವಿಕ್‌ ಎಂಬ ಹೊಸ ವ್ಯವಸ್ಥೆ ಅಭಿವೃದ್ಧಿಗೊಳಿಸಿದ್ದು, ಅದು ಹೆಚ್ಚಿನ ರೀತಿಯಲ್ಲಿ ಲಭ್ಯವಾಗಲು ಉಪಗ್ರಹ ಗಳನ್ನು ಉಡಾಯಿಸಿದೆ. ಮೊಬೈಲ್‌ ಕಂಪನಿಗಳಾದ ಶಿಯೋಮಿ, ರಿಯಲ್‌ಮಿ ಈಗಾಗಲೇ ಕ್ವಾಲ್ಕಾಂ ಜತೆಗೆ ಕೈಜೋಡಿಸುವ ನಿರ್ಧಾರ ಪ್ರಕಟಿಸಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಕಂಪನಿಗಳ ಫೋನ್‌ಗಳಲ್ಲಿ ಇಸ್ರೋದ ನಾವಿಕ್‌ ವ್ಯವಸ್ಥೆ ಒಳಗೊಳ್ಳಲಿದೆ.

ಮೀನುಗಾರರಿಗೆ ಅನುಕೂಲ: ಮೀನುಗಾರರಿಗೆ ಅನುಕೂಲ ಆಗುವಂತೆ ನಾವಿಕ್‌ ನ್ಯಾವಿಗೇಷನ್‌ ವ್ಯವಸ್ಥೆಯನ್ನು ಇಸ್ರೋ ಅನ್ವೇಷಿಸಿದೆ. ಇದರಲ್ಲಿ ಮೀನುಗಾರರು ಅತಿ ಸುಲಭವಾಗಿ ಮೀನು ಹೆಚ್ಚಿರುವ ಜಾಗದಲ್ಲಿ ಬಲೆ ಹಾಕಿ ಮೀನು ಹಿಡಿಯಲು ಸಹಕಾರಿಯಾಗ ಲಿದೆ. ಅಲ್ಲದೆ, ಹವಾಮಾನ ವೈಪರಿತ್ಯದ ಬಗ್ಗೆ ಮೀನುಗಾರರ ಮಾತೃಭಾಷೆಯಲ್ಲೇ ಎಚ್ಚರಿಕೆಯ ಸಂದೇಶ ಬರಲಿದೆ.. ಸಮುದ್ರದಲ್ಲಿರುವ ವಿದೇಶದ ಗಡಿರೇಖೆ ತಲುಪುತ್ತಿದ್ದಂತೆಯೂ ಎಚ್ಚರಿಕೆ ಸಂದೇಶ ಮೀನುಗಾರಿಕೆ ತಲುಪುತ್ತದೆ. ಮೊಬೈಲ್‌ ಆ್ಯಪ್‌ ಮೂಲಕ ಇದೆಲ್ಲವೂ ಸಾಧ್ಯವಾಗುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

ಟಾಪ್ ನ್ಯೂಸ್

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.