ಆಸ್ತಿ ತೆರಿಗೆಯಲ್ಲೇ 6 ಸಾವಿರ ಕೋಟಿ ಆದಾಯವಿದೆ

Team Udayavani, Jun 11, 2019, 3:04 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದರೆ ಪಾಲಿಕೆಗೆ ವಾರ್ಷಿಕ ಆರು ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗುತ್ತದೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ತಿಳಿಸಿದ್ದಾರೆ.

ನಗರದಲ್ಲಿರುವ ಆಸ್ತಿಗಳ ಸಮಗ್ರ ಮಾಹಿತಿಯನ್ನು ಕಲೆಹಾಕಿ ಅವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವದರಿಂದ ಆಸ್ತಿ ತೆರಿಗೆ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಹೀಗಾಗಿ ಕೂಡಲೇ ಎಲ್ಲ ಆಸಿಗಳನ್ನು ತೆರಿಗೆ ವ್ಯಾಪ್ತಿಗೆ ತರುವಂತೆ ಆಯುಕ್ತರಿಗೆ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಅಧಿಕಾರಿಗಳೇ ಸಂಗ್ರಹ ಮಾಡಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿ 16 ಲಕ್ಷ ವಸತಿ ಕಟ್ಟಡ, 6 ಲಕ್ಷ ವಾಣಿಜ್ಯ ಕಟ್ಟಡ, 1.10 ಲಕ್ಷ ಕೈಗಾರಿಕಾ ಕಟ್ಟಡ, 3,800 ಶಾಲಾ ಕಟ್ಟಡ, 50ಕ್ಕಿಂತ ಹೆಚ್ಚು ಯುನಿಟ್‌ ಹೊಂದಿರುವ 22 ಸಾವಿರ ವಸತಿ ಸಮುತ್ಛಯ, 12,860 ಪಿಜಿ ಹಾಸ್ಟೆಲ್‌,

3,758 ಐಟಿ ಕಂಪೆನಿಗಳು, 94 ಬಿಟಿ ಕಂಪೆನಿಗಳು, 79 ಟೆಕ್‌ಪಾರ್ಕ್‌, 157 ಮಾಲ್‌ಗ‌ಳು, 2,446 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, 3,350 ಲಾಡ್ಜ್, 684 ಸ್ಟಾರ್‌ ಹೊಟೇಲ್‌, 1,300 ಕಲ್ಯಾಣ ಮಂಟಪಗಳು, 1600 ಪಾರ್ಟಿ ಹಾಲ್‌ಗ‌ಳು ಹಾಗೂ 13,860 ಟೆಲಿಕಾಂ ಟವರ್‌ಗಳಿವೆ ಎಂದರು.

ಈ ಎಲ್ಲ ಆಸ್ತಿಗಳಿಂದ ನ್ಯಾಯಯುತವಾಗಿ ಆಸ್ತಿ ತೆರಿಗೆ ಸಂಗ್ರಹಿಸಿದರೆ ಪ್ರತಿ ವರ್ಷ ಕನಿಷ್ಠ 6 ಸಾವಿರ ಕೋಟಿಗೂ ಹೆಚ್ಚಿನ ಆದಾಯ ಬರಲಿದೆ. ಅಲ್ಲದೆ, ಕೆಲವು ಅಪಾರ್ಟ್‌ಮೆಂಟ್‌ಗಳು, ಟೆಕ್‌ಪಾರ್ಕ್‌ಗಳು ತಮ್ಮ ಕಟ್ಟಡಗಳ ವಿಸ್ತೀರ್ಣದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ.

ಈ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಿದರೆ ಅವುಗಳಿಂದಲೂ ಕನಿಷ್ಠ 6 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಬಹುದಾಗಿದೆ ಎಂದು ಹೇಳಿದರು. 2014-15ನೆ ಸಾಲಿನಲ್ಲಿ ಮೂರು ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೆಗೆ ಒಳಪಡಿಸಿದಾಗ ಸುಮಾರು 8 ಕೋಟಿಯಷ್ಟು ತೆರಿಗೆ ವಂಚನೆ ಮಾಡಿರುವುದು ಬಹಿರಂಗಗೊಂಡಿತ್ತು.

ಹೀಗಾಗಿ ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಚಾಟಿ ಬೀಸುವ ಬದಲಿಗೆ, ಎಲ್ಲ ಆಸ್ತಿಗಳಿಂದ ಕಾನೂನು ರೀತಿ ತೆರಿಗೆ ಸಂಗ್ರಹಿಸಲು ದಿಟ್ಟ ಹೆಜ್ಜೆ ಇಡಬೇಕು. ಜತೆಗೆ ಕಂದಾಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಚಿತಾವಣೆಯಿಂದ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ 3 ಲಕ್ಷ ಹೆಚ್ಚು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಗಮನ ಹರಿಸಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಮೋಟಾರು ಕಂಪನಿ ಶೋರೂಂ ಮಾಲೀಕ ಎಂ.ಸಿದ್ದರಾಜು ಅವರ ಪುತ್ರ ಹೇಮಂತ್‌ ಹಾಗೂ ಅವರ ಕಾರು ಚಾಲಕ ಕೇಶವರೆಡ್ಡಿಯನ್ನು 23 ದಿನಗಳ ಹಿಂದೆ ಅಪಹರಿಸಿ ಮೂರು ಕೋಟಿ...

  • ಬೆಂಗಳೂರು: ಹಸಿತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯು 2015ರಲ್ಲಿ ನಿರ್ಮಾಣ ಮಾಡಿರುವ ಸಿಗೇಹಳ್ಳಿಯ ಹಸಿತ್ಯಾಜ್ಯ ಸಂಸ್ಕರಣಾ ಘಟಕವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ....

  • ಬೆಂಗಳೂರು: ಕಾಂಗ್ರೆಸ್‌ನಲ್ಲಿ ರಾಜನಂತಿದ್ದ ಅನರ್ಹ ಶಾಸಕರು ಬಿಜೆಪಿ ಬಾಗಿಲಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷಕ್ಕೆ...

  • ಬೆಂಗಳೂರು: ಶಾಲೆ ಆರಂಭವಾಗಿ ಎರಡು-ಮೂರು ತಿಂಗಳಾದರೂ ಸಮವಸ್ತ್ರ, ಪಠ್ಯಪುಸ್ತಕ ನಮಗೆ ಸಿಗುವುದಿಲ್ಲ. ಪರೀಕ್ಷೆ ಶುಲ್ಕ ಪಾವತಿಸುವಾಗ ಸಾಮಾನ್ಯವರ್ಗ, ಎಸ್ಸಿ, ಎಸ್ಟಿ...

  • ಬೆಂಗಳೂರು: ಬಿಬಿಎಂಪಿಯಲ್ಲಿ ಕೊನೆಯ ಅವಧಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ...

ಹೊಸ ಸೇರ್ಪಡೆ