Udayavni Special

ಸಮೀಕ್ಷೆ ನಡೆಸದೆ ವಸತಿ ಶಾಲೆಗಳ ಸ್ಥಾಪನೆ


Team Udayavani, Mar 28, 2017, 3:45 AM IST

boarding-schools.jpg

ವಿಧಾನಸಭೆ:ರಾಜ್ಯದಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸುವ ಮುನ್ನ ಸಮೀಕ್ಷೆ, ಅಗತ್ಯತೆ, ಹಿಂದುಳಿಯುವಿಕೆ, ಆಯಾ ಪ್ರವರ್ಗದ ಜನಸಂಖ್ಯೆಯ ಸಾಕ್ಷರತೆ ಪ್ರಮಾಣ ಮಾಹಿತಿ ಸಂಗ್ರಹಿಸದೆ ವಸತಿ ಶಾಲೆ ಸ್ಥಾಪಿಸಿರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ತಿಳಿಸಿದೆ.

ಸೋಮವಾರ ಸದನದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಆರ್‌.ಅಶೋಕ್‌ ವರದಿ ಮಂಡಿಸಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಉಲ್ಲೇಖೀಸಿ ವಸತಿ ಶಾಲೆಗಳ ಸ್ಥಾಪನೆಯಲ್ಲಿ ಭೌಗೋಳಿಕವಾಗಿ ಸಮಾನತೆ ಅನುಸರಿಸಿಲ್ಲ ಎಂದು ತಿಳಿಸಲಾಗಿದೆ.

ವಸತಿ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡ ನಂತರ ಶಾಲೆಗಳಿಗೆ ಕಲ್ಪಿಸಬೇಕಾದ ಮೂಲಸೌಕರ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಶಾಲಾ ಕಟ್ಟಡ, ವಿದ್ಯಾರ್ಥಿ ನಿಲಯ, ಶೌಚಾಲಯ, ಗ್ರಂಥಾಯ, ಪ್ರಯೋಗ ಶಾಲೆ, ಆಟದ ಮೈದಾನ, ಕುಡಿಯುವ ನೀರು, ಹಾಸಿಗೆ, ದಿಂಬು, ಹೊದಿಕೆ ನೀಡದೆ ಶಾಲೆಗಲನ್ನು ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.

ವಸತಿ ಶಾಲೆಗಳ ಸ್ಥಾಪನೆಗೆ ಭೂಮಿ ಲಭ್ಯತೆ ಮತ್ತು ಹಣಕಾಸಿನ ಲಭ್ಯತೆ ಖಚಿತಪಡಿಸಿಕೊಲÛದೆ ಮೂಲಸೌಕರ್ಯ ಒದಗಿಸಲು ಬಿಡುಗೆ ಮಾಡಿದ ಆನುದಾನದಲ್ಲಿ 3.47 ಕೋಟಿ ರೂ. ಬಳಸದೆ ಜಿಲ್ಲಾಧಿಕಾರಿಗಳ ಬಳಿ ಉಳಿದಿದೆ. ಬ್ಯಾಂಕುಗಳಲ್ಲಿ ಬಡ್ಡಿ ದರ ಪರಿಶೀಲಿಸದ ಕಾರಣ 39 ಲಕ್ಷ ರೂ. ನಷ್ಟವುಂಟಾಗಿದೆ.ಶಾಲೆಗಳ ಕಟ್ಟಡ  ಕಾಮಗಾರಿ ಒಬ್ಬ ಗುತ್ತಿಗೆದಾರ ಮತ್ತು ಮೇಲ್ವಿಚಾರಣೆ ಒಬ್ಬರೇ ಸಮಾಲೋಚಕರಿಗೆ ನೀಡಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. 135.60 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲು ಪಾರದರ್ಶಕ ಕಾಯ್ದೆಯಂತೆ ಕ್ರಮ ಕೈಗೊಂಡಿಲ್ಲ

ವಸತಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು ಕೆಲವು ಶಾಲೆಗಳಲ್ಲಿ ಒಂದೇ ವಿಷಯಕ್ಕೆ ಹಲವು ಶಿಕ್ಷಕರ ನಿಯೋಜನೆ ಹಾಗೂ ಬಾಲಕಿಯರ ರಕ್ಷಣೆ ಮತ್ತು ಭದ್ರತೆ ಖಚಿತಪಡಿಸಿಕೊಲುÛವ ಯಾವುದೇ ಮಾರ್ಗಸೂತ್ರ ಪಾಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕುಷ್ಠಗಿ ಅಕ್ರಮ
ಅದೇ ರೀತಿ ಸಣ್ಣ ನೀರಾವರಿ ಇಲಾಖೆಯ ಕುಷ್ಠಗಿ ವಿಭಾಗದಲ್ಲಿ ತುಂಡುಗುತ್ತಿಗೆ ಕಾಮಗಾರಿಯಲ್ಲಿ 34.55 ಕೋಟಿ ರೂ. ದುರ್ಬಳಕೆಯಾಗಿರುವುದನ್ನೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಪತ್ತೆ ಹಚ್ಚಿದೆ.

ತುಂಡು ಗುತ್ತಿಗೆ ಆಧಾರದ ಮೇಲೆ ನಿಯಮ ಬಾಹಿರವಾಗಿ 1 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 3,938 ಕಾಮಗಾರಿಗಳನ್ನು 39.38 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಲಲಾಗಿದೆ. ಕಾಮಗಾರಿಗಳ ಅಂದಾಜು, ತುಂಡು ಗುತ್ತಿಗೆ ಪ್ರಸ್ತಾವನೆ, ಬಿಲ್ಲು ಪಾವತಿಸುವ ಪ್ರಕ್ರಿಯೆಗಳನ್ನು ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿಯೇ ನಿರ್ವಹಿಸಲಾಗಿದೆ.

ಸಮಿತಿಯ ನಿರ್ದೇಶನಂದಂತೆ ಇಲಾಖೆಯ ಅಧಿಕಾರಿಗಳು 2,504 ಕಾಮಗಾರಿಗಳ ಅನುಷ್ಟಾನದ ಬಗ್ಗೆ ಸ್ಥಳ ಪರಿವೀಕ್ಷಣೆ ನಡೆಸಿದಾಗ ಯಾವುದೇ ಕಾಮಗಾರಿ ಕೈಗೊಂಡಿಲ್ಲದಿರುವುದು ಪತ್ತೆಯಾಗಿದೆ.

ಕಾಮಗಾರಿ ಕೈಗೊಳ್ಳದೆ ಬಿಲ್‌ಗ‌ಳನ್ನು ಬಂಡವಾಳ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ನಗದೀಕರಿಸಲಾಗಿದೆ. ಹಗರಣದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಾತ್ರವಿದ್ದು, ಕಾಮಗಾರಿ ಅನುಷ್ಟಾನಗೊಳಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಹಣ ವಸೂಲಾತಿಗಾಗಿ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಟಾಪ್ ನ್ಯೂಸ್

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

rgsfaew

ಮೂರ್ತಿ ತಯಾರಕರಿಗೆ 3ನೇ ಅಲೆ ಭೀತಿ

fhgdfghtrytr

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ : ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ಸ್ಫೋಟಕಗಳು ವಶಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

dfgry5ryr

ಕೋವಿಡ್ : ರಾಜ್ಯದಲ್ಲಿ ಸೋಂಕಿನ ಸಂಖ‍್ಯೆ ಇಳಿಕೆ : ಇಂದು 1285 ಹೊಸ ಪ್ರಕರಣ ಪತ್ತೆ  

Siddaramaiha Published Book Against On BJP named as Narapeedaka

BJPಯ ಜನ ವಿರೋಧಿ ನೀತಿಯ ಬಗ್ಗೆ ‘ನರಪೀಡಕ’ ಎಂಬ ಪುಸ್ತಕ ಹೊರ ತಂದಿದ್ದೆನೆ : ಸಿದ್ದರಾಮಯ್ಯ

dinesh gundu rao

ರಾಜ್ಯದ ಜನರಿಗೆ ಈ ನೂತನ ಸರ್ಕಾರ ಇದ್ದೂ ಸತ್ತಂತೆ ಭಾಸವಾಗುತ್ತಿದೆ: ದಿನೇಶ್ ಗುಂಡೂರಾವ್

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ಕುಳಿತ ಉಪ್ಪರಪೇಟ ಗ್ರಾಪಂ ಅಧಿಕಾರಿಗಳು

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು

MUST WATCH

udayavani youtube

ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ :ತಲಪಾಡಿಯಲ್ಲಿ ಬಿಗು ಬಂದೋಬಸ್ತ್

udayavani youtube

273 ದಿನಗಳು 8300 ಕಿ.ಮೀ ಪಾದಯಾತ್ರೆ !

udayavani youtube

ಅಪರೂಪದಲ್ಲಿ ಅಪರೂಪ ಈ ಬಿಳಿ ಹೆಬ್ಬಾವು!

udayavani youtube

ಎಲ್ಲಾ ಶಾಸಕರನ್ನು ಸಚಿವರನ್ನಾಗಿಸಲು ಸಾಧ್ಯವಿಲ್ಲ : ಬೊಮ್ಮಾಯಿ

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

ಹೊಸ ಸೇರ್ಪಡೆ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

3ಡಿಯಲ್ಲಿ “ಬೆಲ್‌ ಬಾಟಂ’ ನೋಡಿ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ: ಗೌರವ್‌ ಗುಪ್ತ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಕಡಿಮೆ ಸೀಟು ಬಂದರೂ ನಿತೀಶ್‌ಗೆ ಸಿಎಂ ಸ್ಥಾನ: ಚೌಧರಿ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

ಅಭಿಷೇಕ್‌ ಬ್ಯಾನರ್ಜಿ ಬೆಂಗಾವಲು ಪಡೆ ಮೇಲೆ ದಾಳಿ: ಬಿಜೆಪಿ ವಿರುದ್ಧ ಆರೋಪ

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.