16ನೇ ಚಿತ್ರಸಂತೆ ಇಂದು

Team Udayavani, Jan 6, 2019, 6:49 AM IST

16ne-chitra.jpg

ಬೆಂಗಳೂರು: ರಜಾ ದಿನವಾದ ಭಾನುವಾರ (ಜ.6) ನಡೆಯಲಿರುವ 16ನೇ ಚಿತ್ರಸಂತೆಗೆ ನಗರದ ಕುಮಾರ ಕೃಪಾ ರಸ್ತೆ  ಸಜ್ಜಾಗಿದೆ. ಈ ಬಾರಿ “ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಚಿತ್ರ ಸಂತೆ ನಡೆಯುತ್ತಿದ್ದು, ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜನ್ಮದಿನಾಚರಣೆಗೆ ಈ ಚಿತ್ರ ಸಂತೆಯನ್ನು ಸಮರ್ಪಿಸಲಾಗಿದೆ.

ಈ ಬಾರಿ ಚಿತ್ರಸಂತೆಯಲ್ಲಿ 16 ರಾಜ್ಯಗಳ 1,500 ಕಲಾವಿದರು ಭಾಗವಹಿಸುತ್ತಿದ್ದು, ನಾಲ್ಕು ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಪರಿಷತ್ತಿನ ವತಿಯಿಂದ ಸಂತೆಗೆ ಬರುವ ಕಲಾಸಕ್ತರಿಗೆ ಹಾಗೂ ಗ್ರಾಹಕರಿಗೆ ಡಿಜಿಟಲ್‌ ಹಣಪಾವತಿ, ನಾಲ್ಕು ಸಂಚಾರಿ ಎಟಿಎಂ, ಪ್ರತ್ಯೇಕವಾಗಿ ಫುಡ್‌ ಕೋರ್ಟ್‌ನಂತಹ ಸೂಕ್ತ ವ್ಯವಸ್ಥೆ ಮಾಡಲಾಗಿದೆ. 100 ರೂ.ನಿಂದ 1ಲಕ್ಷ ರೂ. ಬೆಲೆಯ ಚಿತ್ರಕಲಾಕೃತಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ.

ಕಳೆದ ವರ್ಷದ ಚಿತ್ರ ಸಂತೆಯಲ್ಲಿ  2 ಕೋಟಿ ರೂ ವಹಿವಾಟು ನಡೆದಿದ್ದು, ಈ ಬಾರಿ 4 ಕೋಟಿ ವಯಿವಾಟು ನಿರೀಕ್ಷಿಸಲಾಗಿದೆ. ಪ್ರಮುಖವಾಗಿ ಗಾಂಧೀಜಿಯವರ ಕುರಿತ ಕಲಾಕೃತಿಗಳ ಜತಗೆ ಮೈಸೂರಿನ ಸಾಂಪ್ರದಾಯಕ ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬಿನಿಯ ಶೈಲಿ, ತೈಲ ಜಲವರ್ಣಗಳ ಕಲಾಕೃತಿಗಳು, ಅಕ್ರಿಲಿಕ್‌, ಕೊಲಾಜ್‌, ಲಿಥೋಗ್ರಾಫ್ ಕಲಾಕೃತಿಗಳು ಪ್ರದರ್ಶನದಲ್ಲಿ ಇವೆ. 

ವಿಶೇಷವಾಗಿ ಪ್ರದರ್ಶನಕ್ಕೆ ಆಗಮಿಸುವ ಕಲಾರಸಿಕರ ಭಾವಚಿತ್ರಗಳನ್ನು ಸ್ಥಳದಲ್ಲಿಯೇ ರಚಿಸಿ ಕೊಡುವ ಕಲಾವಿದರ ದಂಡು ಈ ಬಾರಿ ಚಿತ್ರ ಸಂತೆಯಲ್ಲಿದೆ. ಇವರ ಜತೆಗೆ ವ್ಯಂಗಚಿತ್ರಕಾರರು ಇರಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮುಖ್ಯ.ಮಂತ್ರಿ ಎಚ್‌.ಡಿ ಕುಮಾರ ಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌, ಮೇಯರ್‌ ಗಂಗಾಬಿಕೆ ಸೇರಿದಂತೆ ಮತ್ತಿತ್ತರ ಭಾಗವಹಿಸುತ್ತಿದ್ದಾರೆ. 

ಗಾಂಧಿ ಕುಟೀರ: ಹಿಂದೆ ಮಹಾತ್ಮ ಗಾಂಧೀಜಿ ಅವರು ಬೆಂಗಳೂರಿಗೆ ಬಂದಾಗ ಕುಮಾರ ಕೃಪಾದಲ್ಲಿ ವಾಸ್ತವ್ಯ ಹೂಡುತ್ತಿದ್ದು, ಚಿತ್ರಕಲಾ ಪರಿಷತ್ತಿನ ಆವರಣದಲ್ಲಿನ ಕಲ್ಲು ಬಂಡೆ ಮೇಲೆ ಧ್ಯಾನ ಮಾಡುತ್ತಿದ್ದರು. ಅದರ ನೆನಪಿಗಾಗಿ ಚಿತ್ರ ಸಂತೆಯಲ್ಲಿ ಆ ಬಂಡೆ ಮೇಲೆ ಬಿದಿರಿನಿಂದ ಗಾಂಧಿ ಕುಟೀರವನ್ನು ವಿನ್ಯಾಸಪಡಿಸಿದ್ದು, ಅದರ ಒಳಗೆ ದೃಶ್ಯ ಕಲೆಯ ಮೂಲಕ ಗಾಂಧೀಜಿ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ. ಗಾಂಧೀಜಿ ಅವರ ಕೆಲವು ಪ್ರಮುಖ ಫೋಟೊಗಳನ್ನು ಗಾಂಧಿ ಭವನ ನೀಡಲಿದೆ.

ಬೃಹತ್‌ ಚರಕ ಆಕರ್ಷಣೆ: ಚಿತ್ರಸಂತೆ ಗಾಂಧೀಜಿಯವರಿಗೆ ಸಮರ್ಪಿಸಿರುವುದರಿಂದ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಬೃಹತ್‌ ಗಾತ್ರದ ಗಾಂಧೀ ಕನ್ನಡ ಮತ್ತು ಚರಕವನ್ನು ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಿರ್ಮಿಸಲಾಗಿದೆ. ಈ ಎರಡು ಕಲಾಕೃತಿಗಳು ಚಿತ್ರ ಸಂತೆಯ ಪ್ರಮುಖ ಆಕರ್ಷಣೆಯಾಗಿವೆ.

ಸಂಚಾರ ನಿರ್ಬಂಧ: ಕುಮಾರಕೃಪ ರಸ್ತೆ, ಶಿವಾನಂದ ಸರ್ಕಲ್‌, ವಿಂಡ್ಸರ್‌ ಮ್ಯಾನರ್‌ ಹಾಗು ಕ್ರಿಸೆಂಟ್‌ ರಸ್ತೆಯ ಸೇರಿದಂತೆ ಚಿತ್ರ ಸಂತೆ ನಡೆಯುವ ಸ್ಥಳಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ರಸ್ತೆಗಳಲ್ಲಿ 25 ಅಡಿ ಅಂತರದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಟಾಪ್ ನ್ಯೂಸ್

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ದಾನ ಧರ್ಮದ ರಾಯಭಾರಿ ಪುನೀತ್ ರಾಜಕುಮಾರ್: ಆರ್ ಅಶೋಕ್

ದಾನ ಧರ್ಮದ ರಾಯಭಾರಿ ಪುನೀತ್ : ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಪಣಜಿ: 52 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ತೆರೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾನ ಧರ್ಮದ ರಾಯಭಾರಿ ಪುನೀತ್ ರಾಜಕುಮಾರ್: ಆರ್ ಅಶೋಕ್

ದಾನ ಧರ್ಮದ ರಾಯಭಾರಿ ಪುನೀತ್ : ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

ಎಂಟು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಎಂಟು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಸೆರೆ

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

araga

ಐವರು ಬಾಂಗ್ಲಾ ಪ್ರಜೆಗಳ ಬಂಧನ..!

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನ ಬಂಧನ

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಆಕ್ಸ್‌ಫ‌ರ್ಡ್‌ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ

ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಐದನೆ ಆವೃತ್ತಿಯಲ್ಲಿ ವ್ಹಿ.ಕೆ.ಟೈಗರ್ಸ್ ಪ್ರಥಮ

ಸಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಐದನೆ ಆವೃತ್ತಿಯಲ್ಲಿ ವ್ಹಿ.ಕೆ. ಟೈಗರ್ಸ್ ಪ್ರಥಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.