ವೋಟರ್ ಐಡಿಗೆ ಆಧಾರ್ ಜೋಡಿಸಲು ಆಗ್ರಹ
Team Udayavani, Feb 1, 2018, 6:40 AM IST
ಬೆಂಗಳೂರು: ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು. ಇವಿಎಂಗಳ ಬದಲಿಗೆ ಹಿಂದಿನ ಸಾಂಪ್ರದಾಯಿಕ ಪೇಪರ್ ಬ್ಯಾಲೆಟ್ಗಳನ್ನು ಮತದಾನಕ್ಕೆ ಬಳಕೆ ಮಾಡಬೇಕು ಎಂದು ವಿಧಾನಪರಿಷತ್ ಜೆಡಿಎಸ್ ಸದಸ್ಯ ರಮೇಶ್ಬಾಬು ಆಗ್ರಹಿಸಿದ್ದಾರೆ.
ಮೂರು ವರ್ಷಕ್ಕೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿದ್ದು, ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಹಾಗೂ ಇತರ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಅಲ್ಲದೆ, ಮೂರ್ನಾಲ್ಕು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಅಧಿಕಾರಿಗಳ ಪಟ್ಟಿಯನ್ನು ತಾವೇ ಸಿದ್ಧಪಡಿಸಿ ಒಂದೆರಡು ದಿನಗಳಲ್ಲಿ ಆಯೋಗಕ್ಕೆ ಕಳಿಸುವುದಾಗಿ ತಿಳಿಸಿದರು.