Udayavni Special

ಜನತೆಗೆ ಕಾಂಗ್ರೆಸ್‌ ಜನಪರ ಯೋಜನೆ ತಿಳಿಸಿ


Team Udayavani, Mar 17, 2021, 11:47 AM IST

Untitled-1

ದೇವನಹಳ್ಳಿ: ಪುರಸಭೆ 14ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್‌ ತಿಳಿಸಿದರು.

ಮಾ.29ರಂದು 14ನೇ ವಾರ್ಡ್‌ಗೆ ನಡೆಯುತ್ತಿರುವ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಶಶಿಕಲಾ ಚಂದ್ರಶೇಖರ್‌ ಪರ ನಗರದ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿವು ಮುಕ್ತ ರಾಜ್ಯ ಮಾಡಿದ ಹೆಗ್ಗಳಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈಗಿನ ಬಿಜೆಪಿ ಸರ್ಕಾರ 7 ಕೇಜಿ ಇದ್ದ ಪಡಿತರ ಅಕ್ಕಿಯನ್ನು 5 ಕೇಜಿಗೆ ಇಳಿಸಿದೆ. ಈ ಮೂಲಕ ಬಡವರ ವಿರೋಧಿ ಸರ್ಕಾರವಾಗಿದೆ ಎಂದು ದೂರಿದರು.

ಶಶಿಕಲಾ ವಾರ್ಡ್‌ನಲ್ಲಿ ಉತ್ತಮ ಕೆಲಸ ಮಾಡುತ್ತಾ ರೆಂಬ ಭರವಸೆ ಇದೆ. ಹಲವು ಮಹಿಳಾ ಸಂಘಕ್ಕೆ ಅಧ್ಯಕ್ಷರಾಗಿ ಹಲವು ಜನಪರ ಕೆಲಸ ಮಾಡುತ್ತಿದ್ದಾರೆ. ಇವರನ್ನು ಈ ವಾರ್ಡ್‌ನ ಜನತೆ ಆಶೀರ್ವದಿಸಿದರೆ ಮತ್ತಷ್ಟು ವಾರ್ಡ್‌ ಅಭಿವೃದ್ಧಿಗೊಳ್ಳಲಿವೆ ಎಂದು ಹೇಳಿದರು.

ಅಭ್ಯರ್ಥಿ ಶಶಿಕಲಾ ಮಾತನಾಡಿ, ವಾರ್ಡ್‌ನ ಸರ್ವ ತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿ ಸುವ ಕೆಲಸ ಮಾಡಲಾಗು ವುದು. 14ನೇ ವಾರ್ಡ್‌ ಅನ್ನು ಮಾದರಿಯನ್ನಾಗಿಸು ತ್ತೇನೆ. ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಯಾಗಿ ಹಿರಿಯರ ಮಾರ್ಗದರ್ಶನ, ಮುಖಂಡರು ಮತ್ತು ಕಾರ್ಯಕರ್ತರ ಸಹಕಾರ ದೊಂದಿಗೆ ವಾರ್ಡ್‌ ನಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

ಕಸಬಾ ವಿಎಸ್‌ಎಸ್‌ಎನ್‌ ಅಧ್ಯಕ್ಷ ಜಿ.ಎನ್‌.ವೇಣು ಗೋಪಾಲ್‌ ಮಾತನಾಡಿ, ಈಗಾಗಲೇ ಪುರಸಭೆಯಲ್ಲಿ ಶೇ.50 ಮಹಿಳೆಯರಿಗೆ ಮೀಸಲಿಟ್ಟಿದೆ. ಆದರೆ, ಮಹಿಳೆಯರು ವಾರ್ಡ್‌ನಲ್ಲಿ ಉತ್ತಮ ಕೆಲಸ ಕಾರ್ಯ ನಿರ್ವಹಿಸುತ್ತಾರೆಂಬ ಭರವಸೆಯಿಂದ ಕಾಂಗ್ರೆಸ್‌ನಿಂದ ಶಶಿಕಲಾ ಚಂದ್ರಶೇಖರ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದರು.

ಈ ವೇಳೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಪುರಸಭಾಧ್ಯಕ್ಷೆ ರೇಖಾ, ಸದಸ್ಯ ವೇಣುಗೋಪಾಲ್‌, ಮುನಿಕೃಷ್ಣ, ಮಂಜುನಾಥ್‌, ಪುರಸಭಾ ಮಾಜಿ ಸದಸ್ಯ ಡಿ.ಎನ್‌.ವೆಂಕಟೇಶ್‌, ಮುಖಂಡರಾದ ಮುನಿಕೃಷ್ಣ, ಮುನಿರಾಜ್‌, ನವೀನ್‌, ನಾಗೇಶ್‌, ನಯೀಮ್‌, ಮಂಜುನಾಥ್‌, ಚಂದ್ರಶೇಖರ್‌, ಕೆಂಪರಾಜು, ಮಹಿಳೆಯರು ಮತ್ತಿತರರು ಇದ್ದರು.

ಟಾಪ್ ನ್ಯೂಸ್

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgtgte

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್

hfghyhtr

ಕೋವಿಡ್ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಬಿಚ್ಚಿಟ್ಟ ನಟಿ ಅನುಪ್ರಭಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New virus to overcome 2nd wave virus?

2ನೇ ಅಲೆ ವೈರಸ್‌ ಮೀರಿಸುವ ಹೊಸ ವೈರಸ್‌?

close Ghati temple till May 4

ಮೇ 4ರವರೆಗೆ ಘಾಟಿ ದೇಗುಲ ಬಂದ್‌

Horticulture Department Office Sealdown

ತೋಟಗಾರಿಕೆ ಇಲಾಖೆ ಕಚೇರಿ ಸೀಲ್‌ಡೌನ್‌

Outrage against the hospital

ರೋಗಿ ಸಾವು: ಆಸ್ಪತ್ರೆ ವಿರುದ್ಧ ಆಕ್ರೋಶ

ಕೋವಿಡ್  ನಿಯಂತ್ರಣದಲ್ಲಿ  ಲೋಪವಾಗದಿರಲಿ

ಕೋವಿಡ್ ನಿಯಂತ್ರಣದಲ್ಲಿ ಲೋಪವಾಗದಿರಲಿ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

22-23

ತರಾಸು ಜಯಂತಿ ಸರ್ಕಾರಿ ಆಚರಣೆಯಾಗಲಿ

22-22

ಈ ಬಾರಿಯೂ ಸರಳ ರಾಮನವಮಿ

Value_US_Degree

ಶಾಲೆಗೆ ಚಕ್ಕರ್‌ ಹೊಡೆದ ಸಾಹಸಗಾಥೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.