Udayavni Special

ಕೊಯಿರಾ ಬೆಟ್ಟಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು


Team Udayavani, Mar 16, 2021, 11:12 AM IST

ಕೊಯಿರಾ ಬೆಟ್ಟಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

ದೇವನಹಳ್ಳಿ: ಇತಿಹಾಸ ಪ್ರಸಿದ್ಧ ಕೊಯಿರಾ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿಯನ್ನಿಟ್ಟಿದ್ದ ಪರಿಣಾಮ ಅಪಾರ ಸಂಪತ್ತು ನಷ್ಟವಾಗಿದೆ.

ಈ ಕೊಯಿರಾ ಬೆಟ್ಟವು ಇತಿಹಾಸ ಪ್ರಸಿದ್ಧವಾಗಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿರುವ ವಿಧಾನಸೌಧಕ್ಕೆ ಇಲ್ಲಿನ ಕಲ್ಲನ್ನೇ ಬಳಸಲಾಗಿತ್ತು. ದೇಶ-ವಿದೇಶಗಳಿಗೆ ಹಾಗೂ ಕಲೆ, ಕೆತ್ತನೆಗಳಿಗೆ ಇಲ್ಲಿನ ಕಲ್ಲುಗಳನ್ನೇ ಬಳಸುತ್ತಿದ್ದಾರೆ. ಆದರೆ, ಈ ಬೆಟ್ಟಕ್ಕೆ ಕಳೆದ 2 ದಿನಗಳಿಂದ ಕಿಡಿಗೇಡಿಗಳು ಬೆಟ್ಟದ ಸುತ್ತಮುತ್ತಲಿನಲ್ಲಿ ಬೆಂಕಿಯನ್ನು ಹಚ್ಚಿ 3 ಎಕರೆಯಷ್ಟು ಬೆಟ್ಟವು ಸುಟ್ಟು ಕರಕಲಾಗಿದೆ. ಪ್ರಾಣಿ-ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಜೀವ ಸಂಕುಲಕ್ಕೆ ಬೆಟ್ಟವು ಹೇಳಿ ಮಾಡಿಸಿದಂತಿತ್ತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಬೆಟ್ಟಕ್ಕೆ ಬೆಂಕಿ ಬಿದ್ದಿರುವುದರಿಂದ ಪ್ರಾಣಿ-ಪಕ್ಷಿಗಳು ನಶಿಸಿ ಹೋಗುತ್ತಿವೆ ಎಂದು ಕೊಯಿರಾ ಸುತ್ತಮುತ್ತಲಿನಗ್ರಾಮಸ್ಥರು ಹೇಳುತ್ತಿದ್ದಾರೆ.

ಅರಣ್ಯ ಇಲಾಖೆಗೆ ಹಸ್ತಾಂತರಿಸಿ: ಬೆಂಕಿ ಅನಾಹುತಗಳು ಆಗುತ್ತಿರುವುದರಿಂದ ಹಸುಗಳನ್ನು ಮೇಯಿ ಸಲು ಹೋಗುತ್ತಾರೆ. ಒಂದು ಬಾರಿ ಈ ಪ್ರದೇಶದಲ್ಲಿ ಚಿರತೆ ಕಂಡುಬಂದಿತ್ತು. ಗ್ರಾಮಸ್ಥರಲ್ಲಿ ಆತಂಕವೂ ಸಹ ಮನೆ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಬೋನಿಟ್ಟು ಚಿರತೆ ಬೋನಿಗೆ ಬಿದ್ದಿರುವ ಉದಾಹರಣೆ ಇದೆ. ಈ ಬೆಟ್ಟದಲ್ಲಿ ಅಳಿಲು, ನವಿಲು, ಮೊಲ, ಗಿಳಿ, ಹೀಗೆ ಹತ್ತು ಹಲವಾರು ಪ್ರಭೇದದ ಪ್ರಾಣಿ, ಪಕ್ಷಿಗಳು ಸೇರಿದಂತೆ ಔಷಧ ಗುಣದ ಸಸಿಗಳು ಸಹ ಇದ್ದವು. ಬೆಟ್ಟದ ರಕ್ಷಣೆ ಮಾಡುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಕಂದಾಯ ಇಲಾಖೆಗೆಒಳಪಡುವ ಈ ಬೆಟ್ಟವು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

ಬೆಟ್ಟದ ಸುತ್ತಲೂ ತಡೆಗೋಡೆ ನಿರ್ಮಿಸಿ ಕಿಡಿಗೇಡಿಗಳು ಕಳೆದ ಎರಡು ದಿನಗಳಿಂದಕೊಯಿರಾ ಬೆಟ್ಟದ ಸುತ್ತಲು ಬೆಂಕಿಹಾಕುತ್ತಿದ್ದಾರೆ. ದಟ್ಟ ಹೊಗೆ ಆವರಿಸುತ್ತಿರುವುದರಿಂದ ಸುತ್ತಮುತ್ತಲಿನಗ್ರಾಮಸ್ಥರು ಸಮಸ್ಯೆ ಎದುರಿಸುವಂತೆ ಆಗಿದೆ.ಕೂಡಲೇ ಅರಣ್ಯ ಇಲಾಖೆ ಮತ್ತು ಕಂದಾಯಇಲಾಖೆ ಜತೆಗೂಡಿ ಸರ್ವೆ ಕಾರ್ಯ ಕೈಗೊಂಡುಬೆಟ್ಟದ ಸುತ್ತಲು ತಡೆಗೋಡೆ ನಿರ್ಮಿಸಬೇಕು.ಅರಣ್ಯ ಇಲಾಖೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೆಟ್ಟ ಮತ್ತು ಕಾಡುಗಳಿಗೆ ಬೆಂಕಿ ತಗುಲದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸ ಬೇಕು. ಬೆಂಕಿಯಿಂದ ಪರಿಸರ ನಾಶವಾದರೆ ಮತ್ತೆ ಅಂತಹ ವಾತಾವರಣಸೃಷ್ಟಿಸುವುದು ಅಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಚಿಕ್ಕೇಗೌಡ ಹೇಳಿದ್ದಾರೆ.

ಕೊಯಿರಾ ಬೆಟ್ಟಕ್ಕೆ ಬೆಂಕಿ ತಗುಲಿದೆ ಎಂಬ ಮಾಹಿತಿ ಬಂದ ತಕ್ಷಣ ಅರಣ್ಯ ಸಿಬ್ಬಂದಿ ಕಳುಹಿಸಿ ರಬ್ಬರ್‌ ಪ್ಯಾಡ್‌ ಮೂಲಕ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಲಾಯಿತು. ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ಹೆಚ್ಚು ನಡೆಯುತ್ತದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಧನಲಕ್ಷ್ಮೀ, ತಾಲೂಕು ವಲಯ ಅರಣ್ಯಾಧಿಕಾರಿ

 

ಟಾಪ್ ನ್ಯೂಸ್

ಸಾರಿಗೆ ನೌಕರರು ಮತ್ತು ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

ಸಾರಿಗೆ ನೌಕರರು – ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

dgsdgsgf

ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ

ಜ್ಗಹ್‍‍ದಸ

ರಾಜ್ಯದಲ್ಲಿ ಇಂದು 15785 ಜನರಿಗೆ ಕೋವಿಡ್ ಸೋಂಕು : 146 ಮಂದಿ ಸಾವು!

fgdfgsddf

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ಗೆ ಕೋವಿಡ್ ಪಾಸಿಟಿವ್ ದೃಢ

fhfghdghdf

48 ಗಂಟೆಯೊಳಗೆ ಲಾಕ್ ಡೌನ್ ಘೋಷಿಸುವಂತೆ ತೆಲಂಗಾಣ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಗಹ್ಗ್ಸದಸ

ರಾಯಚೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

ಗಹ್ಗದಸದ

ಕೋವಿಡ್ ಆತಂಕ : ರಾಜ್ಯಸರ್ಕಾರದಿಂದ ಯಾವುದೇ ಮಾರ್ಗಸೂಚಿ ಪ್ರಕಟ ಇಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid: Flight passenger numbers dwindle

ಕೋವಿಡ್: ವಿಮಾನ ಪ್ರಯಾಣಿಕರ ಸಂಖ್ಯೆ ಕ್ಷೀಣ

adBVC

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಪ್ರಶಂಸಾ ಪತ್ರ

Take action to vaccinate

ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಿ

Central Guidelines for Covoid Control

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮಾರ್ಗಸೂಚಿ

Charged with assault by police

ಪೊಲೀಸರಿಂದ ಹಲ್ಲೆ ಆರೋಪ: ಠಾಣೆಗೆ ಮುತ್ತಿಗೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಸಾರಿಗೆ ನೌಕರರು ಮತ್ತು ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

ಸಾರಿಗೆ ನೌಕರರು – ಸರಕಾರದ ನಡುವೆ ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ: ಡಿಸಿಎಂ ಸ್ಪಷ್ಟನೆ

hfgtryhr

ಪ್ರೀತಿಗೆ ಎದುರಾಗಿದ್ದಕ್ಕೆ ಉಸಿರಡಗಿಸಿದ ಕಿರಾತಕರು

dgsdgsgf

ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ

ಜ್ಗಹ್‍‍ದಸ

ರಾಜ್ಯದಲ್ಲಿ ಇಂದು 15785 ಜನರಿಗೆ ಕೋವಿಡ್ ಸೋಂಕು : 146 ಮಂದಿ ಸಾವು!

fgdfgsddf

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ಗೆ ಕೋವಿಡ್ ಪಾಸಿಟಿವ್ ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.