Udayavni Special

ಅಕ್ರಮ ಖಾತೆ: ಒಕ್ಕೊರಲಿನಿಂದ ಶಾಸಕರಿಗೆ ಸದಸ್ಯರಿಂದ ಒತ್ತಾಯ


Team Udayavani, Apr 9, 2021, 8:07 PM IST

dfbsdf

ಮಾಗಡಿ: ಪುರಸಭೆ ಖಾತೆಗಳಲ್ಲಿ ಭಾರೀ ಗೋಲ್‌ಮಾಲ್‌ ನಡೆದಿದ್ದು, ಎಲ್ಲವೂ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಶಾಸಕ ಎ.ಮಂಜುನಾಥ್‌ ಅವರಲ್ಲಿ ಒತ್ತಾಯಿಸಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಣ ಪಡೆದು ಒಂದೇ ದಿನದಲ್ಲಿ ಬಾಲಕೃಷ್ಣ ಉದ್ಯಾನವನದ ಮುಂದಿನ ಕಂದಾಯ ಭೂಮಿಯನ್ನು ಪುರಸಭೆಯಲ್ಲಿ ಇ-ಖಾತೆ ಮಾಡಲಾಗಿದೆ. ಕೂಡಲೇ ಖಾತೆಯನ್ನು ವಜಾಗೊಳಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಸದಸ್ಯರಾದ ಎಚ್‌. ಜೆ.ಪುರುಷೋತ್ತಮ್‌, ಶಿವಕುಮಾರ್‌, ಕಾಂತರಾಜ್‌ ಒತ್ತಾಯಿಸಿದರು.

ಇದಕ್ಕೆ ಶಾಸಕ ಮಂಜುನಾಥ್‌ ಸಹ ಸಾಥ್‌ ನೀಡಿ ಇಂದೇ ಖಾತೆ ವಜಾಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮನೆ ನಿರ್ಮಾಣ: ನಟರಾಜ ಬಡಾವಣೆಯಲ್ಲಿ ಗೋ ಕಟ್ಟೆ ಮತ್ತು ಗೋಮಾಳ ಭೂಮಿಯನ್ನು ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ. ಈಗಾಗಲೇ ಖಾತೆ ಮಾಡಿಸಿಕೊಂಡಿರುವ ವ್ಯಕ್ತಿಗಳಿಂದ ಅಕ್ರಮವಾಗಿ ಮನೆಯನ್ನೂ ಸಹ ಕಟ್ಟಲಾಗುತ್ತಿದೆ ಎಂದು ಸಭೆಯಲ್ಲಿ ಪುರಸಭಾ ಸದಸ್ಯ ಅಶ್ವತ್ಥ್, ನಾಗರತ್ನಮ್ಮ ಆರೋಪಿಸಿ ಅಲ್ಲಿನ ಉದ್ಯಾನವನ, ಸಿಎ ಜಾಗವನ್ನು ಪುರಸಭೆ ಗೆ ವರ್ಗಾಯಿಸಿಕೊಳ್ಳಬೇಕೆಂದು ಆಗ್ರಹಿಸಿದರು.

ಹೊಸಹಳ್ಳಿ ವಡ್ಡರಹಳ್ಳಿ ಬಳಿ ಸಹ ಕಂದಾಯ ಭೂಮಿಗೆ ಇ ಖಾತೆ ಮಾಡಲಾಗಿದೆ ಎಂದು ಹೇಮಲತಾ ಸಭೆಯ ಗಮನಕ್ಕೆ ತಂದರು. ಕೆಶಿಫ್ ರಸ್ತೆ ಭೂಸ್ವಾಧೀನದಲ್ಲೂ ಅವ್ಯವಹಾರ: ಪುರಸಭಾ ವ್ಯಾಪ್ತಿಯ ತಿರುಮಲೆ, ಹೊಸಪೇಟೆ, ಪಟ್ಟಣ, ಸೋಮೇಶ್ವರ ವೃತ್ತದವರೆಗೆ ಕೆಶಿಫ್ ಚತುಷ್ಪಥ ರಸ್ತೆ ಕಾಮಗಾರಿಗೆ ಭೂಸ್ವಾಧೀನಪಡಿಸಲು ಅಕ್ರಮವಾಗಿ ಪುರಸಭಾ ಸ್ವತ್ತನ್ನೇ ವ್ಯಕ್ತಿಗಳ ಹೆಸರಿಗೆ ಇ ಖಾತೆ ಮಾಡಿ, ಹೆಚ್ಚಿನ ಹಣ ಕೊಡಿಸಿ ಸರ್ಕಾರಕ್ಕೂ ವಂಚಿಸಿದ್ದಾರೆ. ಇದನ್ನು ಹಿಂಪಡೆಯಬೇಕೆಂದು ಸದಸ್ಯ ರಂಗಹನುಮಯ್ಯ ಆಗ್ರಹಿಸಿದರು.

ಪುರಸಭಾ ಸ್ವತ್ತು ವಾಪಸ್‌: ಸರ್ವೆ 69 ರಲ್ಲಿನ 5 ಗುಂಟೆ ಪುರಸಭಾ ಸ್ವತ್ತನ್ನು ವ್ಯಕ್ತಿಗೆ ಖಾತೆಯಾಗಿದ್ದು, ಕೂಡಲೇ ಸ್ಥಳ ತನಿಖೆ ನಡೆಸಿ ಸ್ವತ್ತನ್ನು ವಶಕ್ಕೆ ಪಡೆದು ಬೇಲಿ ಹಾಕಬೇಕೆಂದು ಶಾಸಕರು ಸೂಚಿಸಿದರು. ಖಾತೆಯನ್ನು ಸಹ ರದ್ದುಗೊಳಿಸಬೇಕೆಂದರು. ಕೋರ್ಟ್‌ ತಡೆಯಾಜ್ಞೆ ಇದ್ದರೂ ಸಹ ಇ ಖಾತೆ ಮಾಡಿಕೊಡಲಾಗುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಲಮ್‌ ಬೋರ್ಡ್‌ ಮನೆಗಳ ಮಾಹಿತಿಯೇ ಇಲ್ಲ: ಯಾವೊಬ್ಬ ಸದಸ್ಯರ ಗಮನಕ್ಕೆ ತರದೆ ಅಧಿಕಾರಿಗಳೇ ಫ‌ಲಾನುಭವಿಗಳಿಂದ ಅರ್ಜಿ ಹಾಗೂ ದಾಖಲೆ ಪಡೆದು ಪಟ್ಟಣದಲ್ಲಿ ಮೂರು ಕಾಲೋನಿಗಳಲ್ಲಿ ಸುಮಾರು 60 ಕೋಟಿ ರೂ.ಗೂ ಹೆಚ್ಚು ಅನುದಾನದಡಿ ಸ್ಲಮ್‌ ಬೋರ್ಡ್‌ ವತಿಯಿಂದ ಮನೆ ಕಟ್ಟಲಾಗುತ್ತಿದೆ. ಈ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಸದಸ್ಯರು ಆಗ್ರಹಿಸಿದರು.

ತೆರಿಗೆ ಸಂಗ್ರಹಿಸಿ: ಪಟ್ಟಣದಲ್ಲಿ ಯುಜಿಡಿ ಪಡೆದುಕೊಂಡಿರುವ ಫ‌ಲಾನುಭವಿಗಳಿಂದ ತೆರಿಗೆ ಸಂಗ್ರಹಿಸಲು ಅಧಿಕಾರಿಗೆ ಸದಸ್ಯರ ಸೂಚನೆ ಸೂಚನೆ ನೀಡಿದರು. ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಹಮತ್‌, ಸದಸ್ಯರಾದ ಅನಿಲ್‌ಕುಮಾರ್‌, ರಿಯಾಜ್‌, ರೇಖಾ, ವಿಜಯ, ಮಮತಾ,ಶಿವರುದ್ರಮ್ಮ ಮತ್ತು ಮುಖ್ಯಾಧಿಕಾರಿ ಮಹೇಶ್‌, ಹಾಗೂ ಸಿಬ್ಬಂದಿ ವರ್ಗ ಇತರರು ಇದ್ದರು.
ಪುರಸಭೆ,

ಟಾಪ್ ನ್ಯೂಸ್

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಕೋವಿಡ್ ಲಸಿಕೆ ಪೇಟೆಂಟ್‌ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್‌ ಬೆಂಬಲ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಮೀಸಲು ಮಿತಿ ವಿವಾದ: ರಾಜ್ಯ ಸರಕಾರಗಳಿಗೇ ಸಿಗಲಿ ಅಧಿಕಾರ

ಪಂಚ ಸಚಿವರು ಫುಲ್‌ ಬ್ಯುಸಿ

ಪಂಚ ಸಚಿವರು ಫುಲ್‌ ಬ್ಯುಸಿ

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

ನವಜಾತ ಶಿಶು ಸಹಿತ 238 ಮಂದಿಗೆ ಚಿಕಿತ್ಸೆ, 121 ಸುರಕ್ಷಿತ ಹೆರಿಗೆ

ನವಜಾತ ಶಿಶು ಸಹಿತ 238 ಮಂದಿಗೆ ಚಿಕಿತ್ಸೆ, 121 ಸುರಕ್ಷಿತ ಹೆರಿಗೆ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ವ್ಯಾಕ್ಸಿನ್‌ ವೇಗಕ್ಕೆ ಬ್ರೇಕ್‌ ಹಾಕದಿರಿ

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಇನ್ನೂ ಹಲವು ವಿಶೇಷ ರೈಲುಗಳ ಸಂಚಾರ ರದ್ದು

ಧಾಬೋಲ್ಕರ್‌ ಹತ್ಯೆ ಆರೋಪಿಗೆ ಜಾಮೀನು

ಧಾಬೋಲ್ಕರ್‌ ಹತ್ಯೆ ಆರೋಪಿಗೆ ಜಾಮೀನು

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಸಚಿವರ ಜತೆ ಚರ್ಚಿಸಿ ತೀರ್ಮಾನ:  ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.