ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆ ನಿಲ್ಲಿಸಲು ಮನವಿ

Team Udayavani, Aug 8, 2019, 3:00 AM IST

ದೊಡ್ಡಬಳ್ಳಾಪುರ: ನಗರದ ಗಗನಾರ್ಯಸ್ವಾಮಿ ಮಠದ ಕಲ್ಯಾಣಿ ಸೇರಿದಂತೆ ಕಲ್ಯಾಣಿಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡದಂತೆ ನಗರಸಭೆಗೆ ಸೂಚನೆ ನೀಡಬೇಕು ಎಂದು ಪರಿಸರ ಸಿರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ನೇತೃತ್ವದ ತಂಡ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದಲ್ಲಿ ಅತ್ಯಂತ ಪುರಾತನ ಹಾಗೂ ಸುಂದರ ಕಲ್ಯಾಣಿಗಳಲ್ಲಿ ಒಂದಾಗಿರುವ ಗಗನಾರ್ಯ ಮಠದ ಕಲ್ಯಾಣಿಯಲ್ಲಿ ಗಣೇಶನಮೂರ್ತಿಗಳನ್ನು ವಿಸರ್ಜನೆ ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಕಲ್ಯಾಣಿಯಲ್ಲಿ ಮಣ್ಣು ಹಾಗೂ ವಿಸರ್ಜನೆಗೆ ಬಳಸುವ ಪೂಜಾ ಸಾಮಗ್ರಿ, ಪ್ಲಾಸ್ಟಿಕ್‌ನಿಂದ ನೀರು ಮಲೀನ ಮತ್ತು ಹೂಳು ತುಂಬುತ್ತದೆ. ಇತ್ತೀಚೆಗಷ್ಟೇ ಶ್ರಮದಾನದಿಂದ‌ ಕಲ್ಯಾಣಿ ಹೂಳು ತೆಗೆಯಲಾಗಿದೆ.

ನಗರದಲ್ಲಿನ ಸಾಂಪ್ರದಾಯಿಕ ಜಲಮೂಲವಾಗಿರುವ ಕಲ್ಯಾಣಿ ಹಾಳಾಗಲು ಅವಕಾಶ ನೀಡಬಾರದು. ಗಣೇಶ ಮೂರ್ತಿ ವಿಸರ್ಜನೆಗೆ ಬೇರೆ ಸ್ಥಳ ಗುರುತಿಸಬೇಕು. ಗಗನಾರ್ಯ ಮಠದ ಕಲ್ಯಾಣಿ ಸೇರಿದಂತೆ ನಗರದಲ್ಲಿನ ಯಾವುದೇ ಕಲ್ಯಾಣಿಯಲ್ಲೂ ಗಣೇಶನ ಮೂರ್ತಿ ವಿಸರ್ಜನೆ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದರು. ಗಣೇಶ ಹಬ್ಬದ ಪ್ರಾರಂಭಕ್ಕೂ ಮುನ್ನವೇ ಗಣೇಶಮೂರ್ತಿಗಳ ತಯಾರಿ ಪ್ರಾರಂಭವಾಗಿದೆ.

ಗಣೇಶನ ಮೂರ್ತಿಗಳನ್ನು ತಯಾರಿ ಮಾಡುವ ಪ್ರತಿ ಸ್ಥಳಕ್ಕೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಸಾಧ್ಯವಾದಷ್ಟು ಬಣ್ಣ ಬಳಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸುವಂತೆ ಮನವೊಲಿಸಬೇಕು. ಬಣ್ಣದ ಹಾಗೂ ಪಿಒಪಿ ಗಣೇಶನ ಮೂರ್ತಿ ತಯಾರಿಸದಂತೆ ಮತ್ತು ಸಾರ್ವಜನಿಕರು ಸಹ ಇಂತಹ ಮೂರ್ತಿಗಳನ್ನು ಬಳಸುವುದರಿಂದ ಪರಿಸರ ಮೇಲೆ ಆಗುತ್ತಿರುವ ಹಾನಿಯ ಕುರಿತಂತೆ ಪ್ರಚಾರ ಕೈಗೋಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎಸ್‌. ಕರೀಗೌಡ, ಸಾಧ್ಯವಾದಷ್ಟು ಪರಿಸರ ಸ್ನೇಹಿ ಗಣೇಶನಮೂರ್ತಿಗಳನ್ನು ತಯಾರಿಸುವಂತೆ, ಪಿಒಪಿ ಮೂರ್ತಿಗಳನ್ನು ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಗ್ರಾಪಂ ಹಾಗೂ ನಗರಸಭೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗಣೇಶ ಮೂರ್ತಿ ತಯಾರಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವ ಬಣ್ಣಗಳನ್ನು ಬಳಸಿದರೆ ಕ್ರಮ ಕೈಗೊಳ್ಳುವಂತೆಯು ಸೂಚಿಸಲಾಗಿದೆ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊಸಕೋಟೆ: ಕೇಂದ್ರ ಸರಕಾರ ರೈತರ ಹಿತ ಕಾಪಾಡಲು ಬದ್ಧವಾಗಿದ್ದು ಜಾರಿಗೊಳಿಸಿರುವ ವಿಶಿಷ್ಟ ಯೋಜನೆಗಳಿಂದ ರಾಷ್ಟ್ರವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು...

  • ದೇವನಹಳ್ಳಿ: ಸರ್ಕಾರದಿಂದ ನೀಡುತ್ತಿರುವ ಲ್ಯಾಪ್‌ಟಾಪ್‌ ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು. ನಗರದ...

  • ದೊಡ್ಡಬಳ್ಳಾಪುರ:ನಗರದಲ್ಲಿ ತಲೆ ಎತ್ತುತ್ತಿರುವ ಮಾಲ್‌ಗ‌ಳು, ಆನ್‌ಲೈನ್‌ ಕಂಪನಿಗಳಿಂದ ವ್ಯಾಪಾರಸ್ಥರಿಗೆ ಹೊಡೆತ ಬೀಳುತ್ತಿದೆ. ಇದಕ್ಕೆ ಪೂರಕವಾದ ಸರ್ಕಾರದ...

  • ದೊಡ್ಡಬಳ್ಳಾಪುರ:  ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಪ್ರಸ್ತುತ ಖರೀದಿಸಲಾಗುತ್ತಿರುವ 10 ಕ್ವಿಂಟಲ್‌ ರಾಗಿ ಪ್ರಮಾಣವನ್ನು 15 ಕ್ವಿಂಟಲ್‌ಗೆ ಏರಿಸಬೇಕು....

  • ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಸಪ್ತಪದಿ ಯೋಜನೆಯ ಪ್ರಚಾರದ ಸಲುವಾಗಿ ತಾಲೂಕಿನ ಎಸ್‌.ಎಸ್‌ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ...

ಹೊಸ ಸೇರ್ಪಡೆ