ಆಲೂಗಡ್ಡೆ ಬೆಲೆ ದಿಢೀರ್‌ ಕುಸಿತ


Team Udayavani, Apr 16, 2023, 1:52 PM IST

tdy-10

ಹೊಸಕೋಟೆ: ಕೆಲವು ತಿಂಗಳಗಳ ಹಿಂದೆ ಆಲೂಗಡ್ಡೆಗೆ 30 ರಿಂದ 40 ರೂಪಾಯಿ ದರ ಇದ್ದು, ದಿಢೀರನೆ ಕುಸಿತವಾಗಿದೆ. ಕೆಜಿಗೆ ಮಾರುಕಟ್ಟೆಯಲ್ಲಿ 5ರಿಂದ 6ರೂ ಮಾತ್ರ ಬೆಲೆಯಿದೆ. ಇದರಿಂದ ರೈತ ಬಂಪರ್‌ ಬೆಳೆ ಬೆಳೆದರು ಕಷ್ಟಪಡುವ ಸ್ಥಿತಿ ತಲುಪಿದ್ದಾರೆ.

ಹೊಸಕೋಟೆ ತಾಲೂಕಿನಾದ್ಯಾಂತ ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ನಂದಗುಡಿ ಹೋಬಳಿಯ ತಾವರೆಕೆರೆ, ಯಳಚಹಳ್ಳಿ, ಕಾಳಪ್ಪನಹಳ್ಳಿ, ಮಂಚಪ್ಪನಹಳ್ಳಿ, ಕಾರಹಳ್ಳಿ, ನೆಲ ವಾಗಿಲು ಹೀಗೆ ಅನೇಕ ಗ್ರಾಮಗಳಲ್ಲಿ ಕಳೆದ ಭಾರಿಗಿಂತಲೂ ಉತ್ತಮ ಬೆಳೆ ಬೆಳೆದಿದ್ದು. ಕೆಲವು ತಿಂಗಳಗಳ ಹಿಂದೆ ಅಕಾಲಿಕ ಮಳೆ ಬಿದ್ದು, ಆಲಿಕಲ್ಲು ಬಿದ್ದ ಪರಿಣಾಮ ಇದರಿಂದ ಆಲೂಗಡ್ಡೆ ಕೆಟ್ಟು ರೈತರ ಕೈಗೆ ಅರ್ಧ ಬೆಳೆ ಸಿಕ್ಕಿದೆ. ಬೇಡಿಕೆ ಕುಸಿತದಿಂದ ಬಂಡವಾಳ ಕೂಲಿಯು ಬರದ ಸ್ಥಿತಿಯಿಂದ ರೈತರು ಕಂಗಲಾಗಿದ್ದಾರೆ.

ಪ್ರತಿನಿತ್ಯ ಮಹಿಳೆಗೆ 400ರೂ ಪುರುಷರಿಗೆ 700ರೂ ಗಡ್ಡೆ ಹಗೆಯಲು ಮತ್ತು ಕೀಳಲು ಕೂಲಿ ಕೊಡಬೇಕಾಗುತ್ತದೆ. ಸುಮಾರು 2 ಎಕರೆ ಜಮೀನುನಲ್ಲಿ ಬೆಳೆದ ಬೆಳೆ ಕೇವಲ 50 ಸಾವಿರ ರೂಗಳಿಗೆ ಮಾರಾಟವಾಗಿದೆ. ಇದಕ್ಕೆ ತಗಲುವ ಖರ್ಚು 3 ಲಕ್ಷ ಸಾಲ ಮಾಡಿ ಹಾಕಿದ ಬಂಡವಾಳ ಪುನಃ ತಿರುಗಿ ಬಂದಿಲ್ಲ.

ತಿಂಗಳುಗಟ್ಟಲೇ ಶ್ರಮ ಮಣ್ಣು ಪಾಲು: ತಾಲೂಕಿನದ್ಯಾಂತ ಸುಮಾರು ಹೆಕ್ಟರ್‌ ಬೆಳೆ ಬೆಳೆದಿದ್ದು, ಲಕ್ಷಾಂತರ ರೂ ಖರ್ಚು ಮಾಡಿರುವ ಜೊತೆಗೆ ತಿಂಗಳು ಗಟ್ಟಲೇ ಶ್ರಮ ಮಣ್ಣು ಪಾಲಾಗುವ ಪರಿಸ್ಥಿತಿ ಎದುರಾಗಿದೆ. ಈ ಭಾರಿ ಹೆಚ್ಚಿನ ದರ ಸಿಗುವ ನಿರೀಕ್ಷೆಯಲ್ಲಿದ್ದ ರೈತರ ಲೆಕ್ಕಚಾರ ತಲೆ ಕೆಳಗಾಗಿದ್ದು. ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ.

ಸಮರ್ಪಕ ಬೆಲೆ ಸಿಗುತ್ತಿಲ್ಲ: ಆಲೂಗಡ್ಡೆ ಹಗಿದು ರಾಶಿಗಳು ಮಾಡಲಾಗಿದೆ. ಇವುಗಳನ್ನ ಮಾರುಕಟ್ಟೆಗೆ ಸಾಗಿಸಿದರೆ ಅಲ್ಲಿ ಸಮರ್ಪಕ ಬೆಲೆ ಸಿಗುತ್ತಿಲ್ಲ. ಅಡಕತ್ತರಿಯಲ್ಲಿ ಸಿಲುಕಿರುವ ರೈತರು ಕಂಗಲಾಗಿದ್ದಾರೆ. ತಾಲೂಕಿನಲ್ಲಿ ಹಲವು ಕಡೆ ಆಲೂಗಡ್ಡೆ ಭರ್ಜರಿ ಫ‌ಸಲು ಬಂದಿದೆ. ಆದರೆ, ಆಲೂಗಡ್ಡೆ ಖರೀದಿಸುವವರೆ ಇಲ್ಲದಂತಾಗಿದೆ.

ಜಮೀನಿನಲ್ಲೇ ಕೊಳೆಯುತ್ತಿರುವ ಆಲೂ ಗಡ್ಡೆ: ಬಹುತೇಕ ಕಡೆ ಬಿಸಿಲು ಹೆಚ್ಚಾದ ಕಾರಣ ಜಮೀನಿನಲ್ಲೇ ಕೊಳೆಯುವಂತಾಗಿದೆ. ಬಿತ್ತನೆಗೆ ರಸಗೊಬ್ಬರಕ್ಕೆ ಹಾಕಿದ ಬಂಡವಾಳವು ವಾಪಸ್‌ ಬರುವ ಲಕ್ಷಣ ಕಾಣದ ಕಾರಣ ರೈತರು ಕಂಗಲಾಗಿದ್ದಾರೆ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ 1600 ರೂವರೆಗೆ ಖರ್ಚು ಮಾಡಿದ್ದ ರೈತರು ಈಗ ಒಂದು ಮೂಟೆಗೆ ಕೇವಲ 250 ರಿಂದ 300 ರೂಪಾಯಿಗೆ ಮಾರುವ ಅನಿವಾರ್ಯತೆ ಎದುರಾಗಿದೆ.

ಪರಿಶ್ರಮಕ್ಕೂ ಸಿಗದ ಬಂಡವಾಳ: ಆಲೂಗಡ್ಡೆ ಬೆಲೆ ಕುಸಿತದಿಂದ ಕುಟುಂಬದವರೆಲ್ಲ ಬೆಳಗ್ಗೆ ಮಾಡಿದ ಪರಿಶ್ರಮಕ್ಕೂ ಸಿಗದೇ ಬಂಡ ವಾಳಕ್ಕೂ ಕುತ್ತು ಬಂದಿದೆ. ನಮ್ಮ ಮುಂದೆಯೆ ಆಲೂಗಡ್ಡೆ ಕೆಡುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಾವು ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲದೆ ಮಧ್ಯೆವರ್ತಿಗಳಿಗೆ ಹಾಗೂ ಮಾರಾಟಗಾರರಿಗಷ್ಟೇ ಲಾಭ. ಬೆಳೆ ಹೀಗೆ ಕೈ ಕೊಟ್ಟರೆ ನಾವು ಮಾಡಿದ ಸಾಲ ತೀರಿಸಲು ಆಗದೇ ಕಷ್ಟ ಅನುಭಸಬೇಕಾಗುತ್ತದೆ ಎಂದು ರೈತ ತಾವರೆಕೆರೆ ರೈತ ರವಿಕುಮಾರ್‌ ತಿಳಿಸಿದರು.

ಸ್ಥಳೀಯ ಮಾರುಕಟ್ಟೆ ಸಿಗದ ಬೆಲೆ: ಹೊರ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಲವು ಜಿಲ್ಲೆಗಳಿಂದ ಮಾರುಕಟ್ಟೆಗೆ ಹೆಚ್ಚಿನ ಆಲೂಗಡ್ಡೆ ಬರುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೆಲೆಯಿಲ್ಲದಂತಾಗಿದ್ದು. ಆದ್ದರಿಂದ ಸ್ಥಳೀಯ ರೈತರಿಗೆ ಸರ್ಕಾರದಿಂದ ಶೈತ್ಯಾಗಾರ ನಿರ್ಮಿಸಿ ಆಲೂಗಡ್ಡೆ ಇಡಲು ಅನುಕೂಲ ಮಾಡಿದರೆ ರೈತ ಬೆಳೆದ ಬೆಳೆ ಸುರಕ್ಷಿತ ವಾಗಿದ್ದು. ದರ ಸಿಗುವವರೆಗೂ ಇಡಲು ಅನುಕೂಲವಾಗುತ್ತದೆ ಎಂದು ನಂದಗುಡಿ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಜೆ.ಎನ್‌. ಸುನೀಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

5-

Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

1-wqewqeqw

Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.