ಬಿಮ್ಸ್ ಅಭಿವೃದ್ಧಿಗೆ 22.26 ಲಕ್ಷ ರೂ. ಕೊಡುಗೆ
ಪ್ರಾದೇಶಿಕ ಆಯುಕ್ತರ ಮನವಿಗೆ ಸ್ಪಂದಿಸಿದ ಉದ್ಯಮಿಗಳು! ಸಮರ್ಪಕ ಬಳಕೆ ಭರವಸೆ
Team Udayavani, Jun 29, 2021, 8:14 PM IST
ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್) ಅಭಿವೃದ್ಧಿ ಕಾರ್ಯಕ್ಕಾಗಿ ವಿವಿಧ ಉದ್ಯಮಿಗಳು 22.26 ಲಕ್ಷ ರೂ. ಕೊಡುಗೆ ನೀಡಿದರು.
ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ. ಬೆಳಗಾವಿಯ ಜಿನಾಬಾಕುಲ್ ಫೋರ್ಜ ಪ್ರೈ. ಲಿ., ರೂ. 4,56,000, ಜೆ.ಪಿ.ಎಫ್ ಮೆಟಾಕ್ಯಾಸ್ಟ್ ಪ್ರೈ.ಲಿ. ರೂ. 1,25,000, ಯಂಕಾಯ್ಸ ಎಂಜಿನಿಯರಿಂಗ್ ಪ್ರೈ.ಲಿ. 1,20,000, ಏಕಸ್ 10,00,000, ನೆತಲ್ಕರ್ ಪವರ್ ಟ್ರಾನ್ಮಿಷನ್ 5,00,000 ರೂ., ಡೆ„ಮೆಂಡ್ ಮೆಟಲ್ ಸ್ಕ್ರೀನ್ಸ್ ಪ್ರೈ.ಲಿ. ರೂ. 25,000 ಸೇರಿ ಒಟ್ಟು 22.26 ಲಕ್ಷ ರೂ. ಸ್ವೀಕರಿಸಲಾಯಿತು.
ಕೊಡುಗೆ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಸನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿ, ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ| ಉಮೇಶ ಕುಲಕರ್ಣಿ, ಮುಖ್ಯ ಆಡಳಿತಾಧಿ ಕಾರಿ ಎಸ್.ಎಸ್, ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಇತರರು ಇದ್ದರು.