ಪೌರ ಸೇವಾ ನೌಕರರನ್ನಾಗಿಸಲು ಸರ್ಕಾರದ ಸಮ್ಮತಿ: ಪಾಟೀಲ

Team Udayavani, Jan 20, 2020, 3:08 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಗ್ರಾಪಂ ವತಿಯಿಂದ ಮೇಲ್ದರ್ಜೆಗೇರಿದ ಪಟ್ಟಣ ಪಂಚಾಯತಿ ಮತ್ತು ಪುರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಪಂ ನೌಕರರನ್ನು ಪೌರ ಸೇವಾ ನೌಕರರೆಂದು ರಾಜ್ಯ ಸರ್ಕಾರ ಪರಿಗಣಿಸಿದೆ ಎಂದು ಬೋರಗಾಂವ ಪಟ್ಟಣ ಪಂಚಾಯತಿ ಮುಖಂಡ ಉತ್ತಮ ಪಾಟೀಲ ತಿಳಿಸಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಳಗಾವಿಜಿಲ್ಲೆಯ ನಾಲ್ಕು ಪುರಸಭೆ ಮತ್ತು 10 ಪಟ್ಟಣದ ಪಂಚಾಯತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ 74 ಜನ ಗ್ರಾಪಂ ನೌಕರರಿಗೆ ಪೌರಾಡಳಿತ ಇಲಾಖೆಯು ಪೌರಸೇವಾ ನೌಕರರೆಂದು ಪರಿಗಣಿಸಿ ಅವರಿಗೆ ಆಯಾ ಹುದ್ದೆಗೆ ಅನ್ವಯವಾಗುವಂತೆ ವೇತನ ಶ್ರೇಣಿ, ರಜೆ ಸೌಲಭ್ಯ, ಇನ್ನಿತರ ಸೌಲಭ್ಯಗಳನ್ನು ನೀಡಲು ಅನುಮತಿ ನೀಡಿದೆ ಎಂದು ತಿಳಿಸಿದರು.

ಬೋರಗಾಂವ ಪಟ್ಟಣ ಪಂಚಾಯತಿ ಸದಸ್ಯ ಜೀವಂಧರ ಪಾಟೀಲ ಮಾತನಾಡಿ, ಗ್ರಾಪಂ ವತಿಯಿಂದ ಮೇಲ್ದಜೇìಗೇರಿದ ಜಿಲ್ಲೆಯ ಎಲ್ಲ ಪಪಂ ಮತ್ತು ಪುರಸಭೆಯಲ್ಲಿ ಗ್ರಾಪಂ ನೌಕರರಿಗೆ ಸಮರ್ಪಕ ವೇತನ ಇಲ್ಲದೇ ಕಳೆದ ವರ್ಷ ಐದು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು. ಬೋರಗಾಂವ ಪಟ್ಟಣ ಒಂದು ದಿನ ಬಂದ್‌ ಮಾಡಿ ನೌಕರರಿಗೆ ಬೆಂಬಲ ನೀಡಲಾಗಿತ್ತು. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡಾ ಪ್ರಯೋಜನವಾಗಿರಲಿಲ್ಲ. ಆದರೂ ನಾವು ನಮ್ಮ ಹೋರಾಟ ಬಿಡದೇ ಸತತ ಪ್ರಯತ್ನ ಮಾಡಿ ನೌಕರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ನಮ್ಮ ಪ್ರಯತ್ನಕ್ಕೆ ಜಿಲ್ಲೆಯ ಎಲ್ಲ ಶಾಸಕರು, ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ,ಚೆನ್ನಮ್ಮ ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಕುಡಚಿ ಶಾಸಕ ಪಿ.ರಾಜೀವ ಸಹಾಯ ಸಹಕಾರನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಭಾಷ ಜಗರಿ, ಪಪಂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಯಶವಂತ ಕರಬನ್ನವರ, ಉಪಾಧ್ಯಕ್ಷ ಲಕ್ಮಣ ಕೇಲಗುಡೆ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  •  ಆಗ್ನೇಯ, ಪಶ್ಚಿಮ, ಕೇಂದ್ರ, ದಕ್ಷಿಣ ಭಾರತದ ಕೆಲವೆಡೆ ಅತಿ ಬಿಸಿ  ಪ್ರತೀ ವರ್ಷಕ್ಕಿಂತ ಹೆಚ್ಚು ತಾಪ ಇರಲಿದೆ ಎಂದ ಇಲಾಖೆ  ತೆಲಂಗಾಣ, ಆಂಧ್ರ ಕರಾವಳಿಗಳಲ್ಲಿ ಬಿಸಿಗಾಳಿ...

  • ನಾನೇ ನನಗೆ ಗೌರವ/ಮೌಲ್ಯ ಕೊಟ್ಟುಕೊಳ್ಳುವುದಿಲ್ಲ ಎಂದರೆ, ನನ್ನನ್ನು ನಾನೇ ಪ್ರೀತಿಸುವುದಿಲ್ಲ ಎಂದರೆ, ಬೇರೆಯವರ್ಯಾಕೆ ನನ್ನನ್ನು ಗೌರವಿಸುತ್ತಾರೆ? ಪ್ರೀತಿಸುತ್ತಾರೆ?...

  • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...