Udayavni Special

ಅಕಾಲಿಕ ಮಳೆಗೆ ನೆಲಕಚ್ಚಿದ ದ್ರಾಕ್ಷಿ

ಸುಮಾರು 950 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿ | ಒಣದ್ರಾಕ್ಷಿ ತಯಾರಿಕೆಗೆ ಹಿನ್ನಡೆ

Team Udayavani, Apr 7, 2020, 2:42 PM IST

07-April-15

ಕೋಹಳ್ಳಿ: ಅಥಣಿ ತಾಲೂಕಿನಲ್ಲಿ ರವಿವಾರ ಸಂಜೆ ಸುರಿದ ಅಕಾಲಿಕ ಮಳೆಗೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳು ನೆಲಕ್ಕಚ್ಚಿದ್ದು, ಗೋವಿನ ಜೋಳ ಹಾನಿಗಿಡಾಗಿದೆ. ಇದರಿಂದಾಗಿ ರೈತರು ವರ್ಷದಿಂದ ಬೆಳೆದ ಬೆಳೆಯೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಥಣಿ ತಾಲೂಕಿನಲ್ಲಿ ಸುಮಾರು 2,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಅದರಲ್ಲಿ ತಾಲೂಕಿನ ಪೂರ್ವ ಭಾಗದ ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಕೋಹಳ್ಳಿ, ಐಗಳಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಗ್ರಾಮಗಳಲ್ಲಿ ರವಿವಾರ ಸಂಜೆ ಸುರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ದ್ರಾಕ್ಷಿ, ದಾಳಿಂಬೆ, ಗೋವಿನ ಜೋಳ ಬೆಳೆಗಳು ಹಾನಿಗೊಂಡಿವೆ. ಈ ಎಲ್ಲ ಗ್ರಾಮಗಳ ಸುಮಾರು 950 ಹೆಕ್ಟೇರ್‌ ಪ್ರದೇಶ ದ್ರಾಕ್ಷಿ ಹಾಗೂ ದಾಳಿಂಬೆ ನಾಶವಾಗಿದ್ದು, ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಈ ಭಾಗದ ಅನೇಕ ರೈತರು ದ್ರಾಕ್ಷಿಯನ್ನು ಮಾರುಕಟ್ಟೆಯಲ್ಲಿಯೂ ಮಾರುತ್ತಾರೆ. ಜತೆಗೆ ಒಣದ್ರಾಕ್ಷಿ (ಮನುಕ) ತಯಾರಿಸುತ್ತಾರೆ. ಹಣ್ಣಾದ ದ್ರಾಕ್ಷಿಯನ್ನು ಕಟಾವು ಮಾಡಿ ಶೆಡ್‌ನ‌ಲ್ಲಿ ಒಣಗಿಸುತ್ತಾರೆ. ರವಿವಾರ ಸಂಜೆ ಆಕಸ್ಮಿಕವಾಗಿ ಸುರಿದ ಮಳೆಗೆ ಕೋಟ್ಯಂತರ ಮೌಲ್ಯದ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣು ಹಾನಿಗೊಂಡಿದೆ. ಕೋಹಳ್ಳಿಯ ಕಲ್ಯಾಣ ನಗರದಲ್ಲಿ ಒಣದ್ರಾಕ್ಷಿ (ಮನುಕ) ಮಳೆಗೆ ತೊಯ್ದು ಹಾಳಾಗಿದೆ. ಅಥಣಿ ತಾಲೂಕಿನ ಪೂರ್ವ ಭಾಗದ ರೈತರಾದ ಕೋಹಳ್ಳಿಯ ಉಮ್ಮಯ್ಯ ಪೂಜಾರಿ, ಮೈನುದ್ದೀನ್‌ ಡೊಂಗರಗಾಂವ, ನೂರಅಹ್ಮದ್‌ ಡೊಂಗರಗಾಂವ, ಕೊಟ್ಟಲಗಿಯ ಗುರಬಸು ಬಂಡಗೊಟ್ಟಿ ಸೇರಿದಂತೆ ವಿವಿಧ ಹಳ್ಳಿಗಳ ಅನೇಕ ರೈತರ ಒಣ ದ್ರಾಕ್ಷಿ (ಬೆದಾಣಿ) ಹಾಗೂ ದ್ರಾಕ್ಷಿ ಹಣ್ಣು ಹಾಳಾಗಿದೆ.

ಬೆಲೆ ಕುಸಿತ: ರೈತ ಬೆಳೆದ ಒಣ ದ್ರಾಕ್ಷಿಯೂ ಹವಾಮಾನ ಆಧಾರಿತವಾಗಿ ತಯಾರಾಗುತ್ತದೆ. ಇದರ ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಬೆಲೆಯೂ
ನಿರ್ಧಾರವಾಗುತ್ತದೆ. ಗುಣಮಟ್ಟವಿದ್ದರೆ ಮಾತ್ರ ರೈತರಿಗೆ ಹೆಚ್ಚಿನ ದರ ಸಿಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿ ಬೆದಾಣಿಯೂ ಕೆಜಿಗೆ 150 ರಿಂದ 200 ರೂ. ವರೆಗೆ ಮಾರಾಟವಾಗುತ್ತಿದೆ. ಆದರೆ ಶನಿವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಒಣದ್ರಾಕ್ಷಿಯ ಗುಣಮಟ್ಟ ಹಾಳಾಗಿದೆ. ಇದರಿಂದ ಇದರ ಬೆಲೆ ಮಾರುಕಟ್ಟೆಯಲ್ಲಿ 80 ರಿಂದ 100 ರೂ. ವರೆಗೆ ಮಾತ್ರ ಮಾರಾಟವಾಗುತ್ತದೆ. ಒಂದು ಎಕರೆ ದ್ರಾಕ್ಷಿ ಬೆಳೆಯಲೂ ಸುಮಾರು 2 ಲಕ್ಷದವರೆಗೂ
ಖರ್ಚವಾಗುತ್ತದೆ. ಆದರೆ ಅಕಾಲಿಕ ಮಳೆಯಿಂದ ಬೆಳೆಯೂ ಹಾಳಾಗಿದ್ದು, ಮುಂದೆ ದರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ಟಾಪ್‌ ಸೀಡ್‌ ಓಪನ್‌ ಟೆನಿಸ್‌: ವೀನಸ್‌ಗೆ ಸೋಲುಣಿಸಿದ ಸೋದರಿ ಸೆರೆನಾ

ಟಾಪ್‌ ಸೀಡ್‌ ಓಪನ್‌ ಟೆನಿಸ್‌: ವೀನಸ್‌ಗೆ ಸೋಲುಣಿಸಿದ ಸೋದರಿ ಸೆರೆನಾ

ತುಂಗಾ ನದಿಗೆ ಹಾರಿದ ಪ್ರೇಮಿಗಳು: ಯುವತಿಯ ರಕ್ಷಣೆ, ಯುವಕ ನೀರುಪಾಲು

ತುಂಗಾ ನದಿಗೆ ಹಾರಿದ ಪ್ರೇಮಿಗಳು: ಯುವತಿಯ ರಕ್ಷಣೆ, ಯುವಕ ನೀರುಪಾಲು

ಐಪಿಎಲ್ ಅಭ್ಯಾಸಕ್ಕಾಗಿ ಚೆನ್ನೈಗೆ ತೆರಳಿದ ರೈನಾ, ಚಹರ್‌, ಚಾವ್ಲಾ

ಐಪಿಎಲ್ ಅಭ್ಯಾಸಕ್ಕಾಗಿ ಚೆನ್ನೈಗೆ ತೆರಳಿದ ರೈನಾ, ಚಹರ್‌, ಚಾವ್ಲಾ

ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್‌ ತಂಡ ಪ್ರಕಟ: ಮರಳಿದ ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌

ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್‌ ತಂಡ ಪ್ರಕಟ: ಮರಳಿದ ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌

ಬಂಡಾಯ ಶಮನ; ವಿಶ್ವಾಸಮತ ಗೆದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಬಂಡಾಯ ಶಮನ; ವಿಶ್ವಾಸಮತ ಗೆದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

ಫೇಸ್ ಬುಕ್ ಪೋಸ್ಟ್ ದೊಡ್ಡ ಕಾರಣವೇನು ಅಲ್ಲ, ರಾಜಕೀಯ ತಂತ್ರವಿದೆ: ಆರೋಪಿ ನವೀನ್ ತಂದೆ

ಫೇಸ್ ಬುಕ್ ಪೋಸ್ಟ್ ದೊಡ್ಡ ಕಾರಣವೇನು ಅಲ್ಲ, ರಾಜಕೀಯ ತಂತ್ರವಿದೆ: ಆರೋಪಿ ನವೀನ್ ತಂದೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಡರಕಟ್ಟಿಯಲ್ಲಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ

ಬುಡರಕಟ್ಟಿಯಲ್ಲಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ

ರಾಜ್ಯದಲ್ಲೂ ನಿಯಂತ್ರಣಕ್ಕೆ ಬರಲಿದೆ ಕೋವಿಡ್

ರಾಜ್ಯದಲ್ಲೂ ನಿಯಂತ್ರಣಕ್ಕೆ ಬರಲಿದೆ ಕೋವಿಡ್ : ಸಚಿವ ಸುರೇಶ ಅಂಗಡಿ

ಮಂದಿರ-ಮನೆಯಲ್ಲಿ ಗಣಪ ಕೂಡಿಸಿ : ಮಾರ್ಗಸೂಚಿ ಪ್ರಕಟ

ಮಂದಿರ-ಮನೆಯಲ್ಲಿ ಗಣಪ ಕೂಡಿಸಿ : ಮಾರ್ಗಸೂಚಿ ಪ್ರಕಟ

ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ಸೂಚನೆ

ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲು ಸೂಚನೆ

ಕನ್ನಡ ಮಾದ್ಯಮದಲ್ಲಿ ಕಲಿತು ಸಿಎಲ್ಇ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ಕುಮಾರಿ ಸಹನಾ

ಕನ್ನಡ ಮಾದ್ಯಮದಲ್ಲಿ ಕಲಿತು ಸಿಎಲ್ಇ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ಕುಮಾರಿ ಸಹನಾ

MUST WATCH

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Makingಹೊಸ ಸೇರ್ಪಡೆ

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ವೈದ್ಯರು

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

ಟಾಪ್‌ ಸೀಡ್‌ ಓಪನ್‌ ಟೆನಿಸ್‌: ವೀನಸ್‌ಗೆ ಸೋಲುಣಿಸಿದ ಸೋದರಿ ಸೆರೆನಾ

ಟಾಪ್‌ ಸೀಡ್‌ ಓಪನ್‌ ಟೆನಿಸ್‌: ವೀನಸ್‌ಗೆ ಸೋಲುಣಿಸಿದ ಸೋದರಿ ಸೆರೆನಾ

ಕ್ರಿಕೆಟಿಗ ಸ್ವಪ್ನಿಲ್‌-ಟೆನಿಸ್‌ ಆಟಗಾರ್ತಿ ಋತುಜಾ ನಿಶ್ಚಿತಾರ್ಥ

ಕ್ರಿಕೆಟಿಗ ಸ್ವಪ್ನಿಲ್‌-ಟೆನಿಸ್‌ ಆಟಗಾರ್ತಿ ಋತುಜಾ ನಿಶ್ಚಿತಾರ್ಥ

ತುಂಗಾ ನದಿಗೆ ಹಾರಿದ ಪ್ರೇಮಿಗಳು: ಯುವತಿಯ ರಕ್ಷಣೆ, ಯುವಕ ನೀರುಪಾಲು

ತುಂಗಾ ನದಿಗೆ ಹಾರಿದ ಪ್ರೇಮಿಗಳು: ಯುವತಿಯ ರಕ್ಷಣೆ, ಯುವಕ ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.