Udayavni Special

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬೊಮ್ಮಾಯಿ ಸರ್ಕಾರದಲ್ಲಿ ಗಡಿ ಜಿಲ್ಲೆಗೆ ಪ್ರಾತಿನಿಧ್ಯದ ಲೆಕ್ಕಾಚಾರ| ­18ರಲ್ಲಿ 13 ಶಾಸಕರು ಬಿಜೆಪಿ

Team Udayavani, Jul 30, 2021, 6:53 PM IST

fgdrty

ವರದಿ: ಕೇಶವ ಆದಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಿಂಹಪಾಲು ಪಡೆದಿದ್ದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಪ್ರಾತಿನಿಧ್ಯದ ಲೆಕ್ಕಾಚಾರ ಆರಂಭವಾಗಿದೆ.

ಬಿಜೆಪಿ ಸರಕಾರದ ನಾಯಕತ್ವ ಬದಲಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಪದವಿ ಅಲಂಕರಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ನಾಲ್ವರು ಸಚಿವರ ಕತೆ ಏನು? ಹೊಸ ಸರಕಾರದಲ್ಲಿ ಯಾರೆಲ್ಲ ಸ್ಥಾನ ಪಡೆಯುತ್ತಾರೆ? ಜಿಲ್ಲೆಗೆ ಗರಿಷ್ಠ ಸ್ಥಾನ ಮತ್ತು ಉಪಮುಖ್ಯಮಂತ್ರಿ ಪಟ್ಟ ಸಿಗಬಹುದೇ? ಎಂಬೆಲ್ಲ ಲೆಕ್ಕಾಚಾರ, ಚರ್ಚೆ ಆರಂಭವಾಗಿದೆ.

ಸಚಿವ ಸ್ಥಾನಕ್ಕಾಗಿ ಬಹಳ ಜೋರಾದ ಪ್ರಯತ್ನಗಳೂ ಸಹ ನಡೆದಿವೆ. ಆದರೆ ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲರಿಗೂ ಸ್ಥಾನ ದೊರೆಯುವುದು ಅನುಮಾನ. ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಎಂಬುದು ಪಕ್ಷದ ಮೂಲಗಳ ಹೇಳಿಕೆ.

ಬೆಳಗಾವಿ ಜಿಲ್ಲೆಯ ಒಟ್ಟು 18 ಶಾಸಕರ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಯಡಿಯೂರಪ್ಪ ಸರಕಾರದಲ್ಲಿ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಶಶಿಕಲಾ ಜೊಲ್ಲೆ ಹಾಗೂ ಉಮೇಶ ಕತ್ತಿ ಸಚಿವರಾಗಿದ್ದರು. ಈಗ ಬೊಮ್ಮಾಯಿ ಸರಕಾರದಲ್ಲಿ ಈ ಐವರಲ್ಲದೆ ಶಾಸಕರಾದ ಆನಂದ ಮಾಮನಿ, ದುರ್ಯೋಧನ ಐಹೊಳೆ, ಪಿ ರಾಜೀವ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಮಹೇಶ ಕುಮಟಳ್ಳಿ ಸಚಿವ ಸ್ಥಾನಕ್ಕೆ ಪ್ರಯತ್ನ ಆರಂಭಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸರಕಾರದ ಪತನಕ್ಕೆ ಕಾರಣರಾದ ಜಿಲ್ಲೆಯ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಯಡಿಯೂರಪ್ಪ ಸರಕಾರದಲ್ಲಿ ನಿರೀಕ್ಷೆಯಂತೆ ಸಚಿವ ಸ್ಥಾನ ಪಡೆದಿದ್ದರು. ರಮೇಶ ಜಾರಕಿಹೊಳಿ ತಮ್ಮ ಬೇಡಿಕೆಯಂತೆ ನೀರಾವರಿ ಖಾತೆ ಸಹ ಪಡೆದಿದ್ದರು. ಲಕ್ಷ್ಮಣ ಸವದಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ತಮ್ಮ ಪ್ರಭಾವ ಬಳಸಿ ಸಚಿವರಾಗಿದ್ದಲ್ಲದೆ ಉಪಮುಖ್ಯಮಂತ್ರಿ ಹುದ್ದೆ ಪಡೆದು ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇದಾದ ಬಳಿಕ ಸತತ ಪ್ರಯತ್ನದಿಂದ ಉಮೇಶ ಕತ್ತಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇನ್ನೊಂದು ಕಡೆ ಮಹಿಳಾ ಕೋಟಾದಲ್ಲಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದರು. ಈಗ ಇವರೆಲ್ಲರ ಸ್ಥಾನ ಏನು ಎಂಬ ಕುತೂಹಲ ಮೂಡಿದೆ.

ಯಡಿಯೂರಪ್ಪ ಸರಕಾರದಲ್ಲಿ ಬೆಂಗಳೂರು ನಂತರ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಪ್ರಕರಣವೊಂದರಲ್ಲಿ ಸಿಲುಕಿದ್ದ ರಮೇಶ ಚಾರಕಿಹೊಳಿ ಅವರು ವಿರೋಧ ಪಕ್ಷದವರ ಒತ್ತಡ ಮತ್ತು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿ ರಮೇಶ ಜಾರಕಿಹೊಳಿ ಸಚಿವ ಸ್ಥಾನ ಪಡೆಯುವರೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಟಾಪ್ ನ್ಯೂಸ್

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಯೋಗ ಚಿಕಿತ್ಸೆಯಿಂದ ಹಲವು ರೋಗಗಳು ದೂರ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಬೆಳಗಾವಿ ವಿಭಾಗಕ್ಕೆ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಗರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

chikkamagalore news

ಸದಾನಂದ ನಾಯಕ್  ಅವರ ಶವ ಹುಡುಕಾಟದ ವೇಳೆ ಮತ್ತೊಂದು ಶವ ಪತ್ತೆ!

devaramane

ಪ್ರಕೃತಿ ರಮಣೀಯತೆಯ ತಾಣ ದೇವರಮನೆ

MUST WATCH

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

udayavani youtube

ವೈರಲ್ ಆಗುತ್ತಿರುವ ವಿಡಿಯೋ ನನ್ನದಲ್ಲ|UDAYAVANI NEWS BULLETIN|20/9/2021

udayavani youtube

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸ ಸೇರ್ಪಡೆ

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಅನುಕಂಪ ಹುದ್ದೆ ಆಕಾಂಕ್ಷಿಗಳಿಗೆ ಹೊಸಗನಸು!

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

ಸುಳ್ಳು ಪ್ರಚಾರವೇ ಬಿಜೆಪಿ ಅಜೆಂಡಾ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

goa news

ಸಿದ್ಧಿ ನಾಯ್ಕ ಸಾವಿನ ಪ್ರಕರಣ: ಸರ್ಕಾರವು ಯಾರನ್ನು ರಕ್ಷಿಸಲು ನೋಡುತ್ತಿದೆ…?

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.