ಬೆಳೆಗಾರರಿಗೆ ಮೆಣಸಿನಕಾಯಿ ಖಾರ

Team Udayavani, Jun 11, 2020, 3:55 PM IST

Bg-tdy-4

ಖಾನಾಪುರ: ತಾಲೂಕಿನಲ್ಲಿ ಈ ವರ್ಷ ಅಂದಾಜು ಎರಡು ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಸಬ್ಸಿಡಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಿದೆ.

ಉತ್ತಮ ಇಳುವರಿ ಬಂದಿದ್ದರೂ ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ. ಮಾ. 23ರಿಂದ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಕುಸಿದಿತ್ತು. ನಂತರ ಒಂದಿಷ್ಟು ಚೇತರಿಸಿಕೊಂಡು 8 ರೂ. ದರ ದೊರಕಿತು. ಆದರೆ ರೈತರಿಗೆ ಕೂಲಿ ಹಣ ಮತ್ತು ರಸಗೊಬ್ಬರ ಖರ್ಚು ಕೂಡ ಮರಳಲಿಲ್ಲ. ಇದೀಗ ಕೆಜಿಗೆ 14 ರೂ. ದರ ಇದ್ದರೂ ರೈತರಿಗೆ ಸಂತೃಪ್ತಿಯಾಗಿಲ್ಲ. ಈ ವರ್ಷ 4 ಸಾವಿರ ರೈತರು ಮೆಣಸಿನ ಬೆಳೆ ಬೆಳೆದಿದ್ದು, ಸರ್ಕಾರದ ಘೋಷಿಸಿದ ಸಬ್ಸಿಡಿ ಮರೀಚಿಕೆಯಾಗಿದೆ.

ಸರ್ಕಾರದ ನಿಯಮಾವಳಿಯಲ್ಲಿ 462 ಹೆಕ್ಟೇರ್‌ ಮೆಣಸಿನ ಬೆಳೆಯ ಫಲಾನುಭವಿಗಳು ಇದ್ದು, ಕೇವಲ 450 ಜನರು ಮಾತ್ರ ಫಲಾನುಭವಿಗಳು ಆಗುತ್ತಾರೆ. ಮಾ. 23ರಿಂದ ಹತ್ತು ದಿನಗಳ ಕಾಲ ಮಾರುಕಟ್ಟೆ ಇಲ್ಲದ ಸಮಯದಲ್ಲಿ ಮೆಣಸಿನ ಬೆಳೆ ಮಾರಾಟ ಮಾಡುತ್ತಿದ್ದ ರೈತರು ಮಾತ್ರ ಸಬ್ಸಿಡಿ ಪಡೆಯಲು ಅರ್ಹರಾಗುತ್ತಾರೆ ಎನ್ನುವುದು ತೋಟಗಾರಿಕೆ ಇಲಾಖೆ ಅಭಿಪ್ರಾಯ.

ರೈತರ ಬಗ್ಗೆ ಅಧಿಕಾರಿಗಳ ನೀತಿ ಕೂಡ ಗೊಂದಲಮಯವಾಗಿದೆ. ತೋಟಗಾರಿಕೆ ಇಲಾಖೆ ಖಾಸಗಿ ವ್ಯಕ್ತಿಗಳಿಂದ ಜನವರಿ-ಫೆಬ್ರವರಿಯಲ್ಲಿ ಮೆಣಸಿನಕಾಯಿ ಬೆಳೆದ ರೈತರ ಗದ್ದೆಗಳ ಸರ್ವೇ ಮಾಡಿಸಿದೆ. ಸರ್ವೇಯಲ್ಲಿ ಸಾಕಷ್ಟು ಲೋಪಗಳಿದ್ದು, ಗೊಂದಲಗಳಿಂದ ರೈತರು ಫಲಾನುಭವಿಗಳಾಗುತ್ತಿಲ್ಲ. ರೈತರು ಕಬ್ಬು ಮತ್ತು ಭತ್ತ ಫಸಲು ಮಾತ್ರ ತೋರಿಸಿ ಕೃಷಿ ಸಾಲ ಪಡೆಯುತ್ತಾರೆ. ಮೆಣಸಿನ ಬೆಳೆ ಪ್ರತ್ಯೇಕವಾಗಿ ತೋರಿಸುವುದಿಲ್ಲ. ಭತ್ತ ಮತ್ತು ಕಬ್ಬು ಕಟಾವು ನಂತರ ಮೆಣಸಿನ ಬೆಳೆ ಬೆಳೆಯಲಾಗುತ್ತದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರಕಾರ ರೈತರು ಮೆಣಸಿನ ಬೆಳೆ ಕುರಿತು ಫಸಲು ತೋರಿಸದೇ ಇರುವುದರಿಂದ ಇವರಿಗೆ ಸಬ್ಸಿಡಿ ದೊರೆಯುವುದು ಕಷ್ಟ ಎನ್ನುತ್ತಾರೆ. ಖಾನಾಪುರ, ಬೀಡಿ ಮತ್ತು ಜಾಂಬೋಟಿ ಹೋಬಳಿಗಳಲ್ಲಿ ಅಧಿಕ ಮೆಣಸಿನ ಬೆಳೆ ಬೆಳೆಯಲಾಗುತ್ತಿದೆ. ಲಾಕ್‌ ಡೌನ್‌ ಸಂದರ್ಭದಲ್ಲಿ ಚಿಕ್ಕದಿನಕೊಪ್ಪ ಮತ್ತು ಕಡತನಬಾಗೇವಾಡಿ ಗ್ರಾಮಗಳಲ್ಲಿ ಮೆಣಸಿನ ಬೆಳೆಗೆ ಮಾರುಕಟ್ಟೆ ಕಲ್ಪಿಸಲಾಗಿದ್ದರೂ ದಲ್ಲಾಳಿಗಷ್ಟೇ ಲಾಭವಾಗಿದೆ.

ಮೆಣಸಿನ ಬೆಳೆ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಯಾವ ಹಸ್ತಕ್ಷೇಪವೂ ಇಲ್ಲ. ನಿಯಮಾವಳಿ ಪ್ರಕಾರವೇ ಫಲಾನುಭವಿಗಳ ಆಯ್ಕೆ ಇಲ್ಲಿ ನಡೆಯುತ್ತದೆ. ಶಮಂತ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಮೆಣಸಿನ ಬೆಳೆ ಬೆಳೆದ ರೈತ ಫಲಾನುಭವಿಗಳ ಆಯ್ಕೆ ಅವೈಜ್ಞಾನಿಕವಾಗಿದೆ. ಮೆಣಸಿನ ಬೆಳೆ ಬೆಳೆದ ರೈತರೆಲ್ಲರೂ ಫಲಾನುಭವಿಗಳಾಗಬೇಕು. ಯಶವಂತ ಕೊಡೋಳ್ಳಿ, ನಿರ್ದೇಶಕ ಟಿಎಪಿಸಿಎಂಎಸ್‌ ನಂದಗಡ -ಮೆಣಸಿನ ಬೆಳೆ ಬೆಳೆದ ರೈತರು

ಸಂಕಷ್ಟದಲ್ಲಿದ್ದು ಸರ್ಕಾರ ನೆರವಿಗೆ  ಬರಬೇಕು. ಸರ್ಕಾರದ ನಿಯಮಗಳು ರೈತರಿಗೆ ಅನ್ಯಾಯ ಮಾಡುವಂತಿವೆ. -ಹಣಮಂತ ಪಾಟೀಲ, ಬಿಜೆಪಿ ಮುಖಂಡ  

-ಜಗದೀಶ ಹೊಸಮನಿ

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.