ಮೊಬೈಲ್ ಕೊಡಿಸಲಿಲ್ಲವೆಂದು ಬಾಲಕ ಆತ್ಮಹತ್ಯೆ
Team Udayavani, Feb 8, 2021, 6:20 PM IST
ಅಡಹಳ್ಳಿ: ಸಮೀಪದ ಕೊಕಟನೂರ ಗ್ರಾಮದ ಬಾಲಕನೊಬ್ಬ ಮನೆಯವರು ಮೊಬೈಲ್ ಕೊಡಿಸಲಿಲ್ಲವೆಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಸಮೀರ್ ಶೇಖ (14) ಮೃತ ಬಾಲಕ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಐಗಳಿ ಪಿಎಸ್‌ಐ ವರಾಜ ನಾಯಕವಾಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.