ನಿಂಗಪ್ಪ ಗುಂಪಿಗೆ ಭರ್ಜರಿ ಗೆಲುವು

ನೌಕರರ ಸಂಘದ ಚುನಾವಣೆ•ನಿರೀಕ್ಷಿತ ಅಭ್ಯರ್ಥಿಗಳಿಗೆ ಸೋಲು•34 ಸ್ಥಾನಗಳ ಫಲಿತಾಂಶ ಪ್ರಕಟ

Team Udayavani, Jun 15, 2019, 11:51 AM IST

15-June-13

ಬಳ್ಳಾರಿ: ಮುನಿಸಿಪಲ್ ಕಾಲೇಜಿನಲ್ಲಿ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳು ಸಂಭ್ರಮ.

ಬಳ್ಳಾರಿ: ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಹುನಿರೀಕ್ಷಿತ ಅಭ್ಯರ್ಥಿಗಳೆಲ್ಲರೂ ಪರಾಭವಗೊಂಡಿದ್ದು, ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಬೇಕೆಂಬ ಹಾಲಿ ಅಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಈ ಬಾರಿಯಾದರೂ ಅಧ್ಯಕ್ಷರಾಗಬೇಕೆಂಬ ಪ್ರಯತ್ನದಲ್ಲಿದ್ದ ಡಾ.ರಾಜಶೇಖರ್‌ ಗಾಣಿಗೇರ ಅವರ ಕನಸು ಕಮರಿ ಹೋಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಲ್ಲೇಶರ ಗುಂಪು ಸೋಲು ಕಂಡಿದ್ದು, ನಿಂಗಪ್ಪ ಅವರ ಗುಂಪು ಭರ್ಜರಿ ಜಯಗಳಿಸಿದೆ. ಎನ್‌.ಪಿ.ಎಸ್‌ ನೌಕರರ ಪ್ರಯತ್ನ ಫಲ ನೀಡಿಲ್ಲ.

ಜಿಲ್ಲಾ ಸಂಘದ ಒಟ್ಟು 62 ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ 28 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 34 ಸದಸ್ಯ ಸ್ಥಾನಗಳಿಗೆ 86 ಜನ ಸ್ಪರ್ಧಾ ಕಣದಲ್ಲಿದ್ದರು. ಬುಧವಾರ ನಗರದ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಏರ್ಪಡಿಸಲಾಗಿದ್ದ 26 ಮತಗಟ್ಟೆಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ನಂತರ ನಡೆದ ಎಣಿಕೆ ಕಾರ್ಯದಲ್ಲಿ 34 ಸ್ಥಾನಗಳ ಫಲಿತಾಂಶ ಪ್ರಕಟವಾಯಿತು.

ಗೆದ್ದವರು; ಪಶು ಸಂಗೋಪನಾ ಇಲಾಖೆ ಕ್ಷೇತ್ರಕ್ಕೆ ಯು.ತಿಮ್ಮಪ್ಪ, ಆರ್ಥಿಕ ಮತ್ತು ಸಾಂಖೀಕ್ಯ ಇಲಾಖೆಗೆ ರಾಕೇಶ್‌, ವಾಣಿಜ್ಯ ತೆರಿಗೆ ಇಲಾಖೆಯ ಎರಡು ಸ್ಥಾನಗಳಿಗೆ ಈ.ಗುರುಸ್ವಾಮಿ, ಎಸ್‌.ಡೊಮಾನಿಕ್‌, ಲೊಕೋಪಯೋಗಿ ಇಲಾಖೆಯ ಎರಡು ಸ್ಥಾನಗಳಿಗೆ ಆಸಿಫ್‌, ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆಗೆ ಎಂ.ಬಸವರಾಜ್‌ ಹಿರೇಮಠ, ಅಬಕಾರಿ ಇಲಾಖೆಗೆ ಡಿ.ಗುರುರಾಜ್‌, ಅರಣ್ಯ ಇಲಾಖೆಗೆ ಸಿ.ನಾಗರಾಜ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂರು ಸ್ಥಾನಗಳಿಗೆ ನಾಗರಾಜ್‌, ಕೆ.ಶ್ರೀನಿವಾಸಲು, ಜ್ಯೋತಿ ಲಕ್ಷ್ಮಿ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಯ ಎರಡು ಸ್ಥಾನಗಳಿಗೆ ಹನುಮಂತರಾಯ, ಮಾರೆಪ್ಪ, ಆಯುಷ್‌ ಎಸ್‌ಐ ತಾರಾನಾಥ್‌ ಶರಣಪ್ಪ ಎಸ್‌.ಜಿನಗಾ, ತೋಟಗಾರಿಕೆ ಇಲಾಖೆ ವಿಭಾಗದಲ್ಲಿ ಡಿ.ಪ್ರವೀಣ ಕುರ್ಮಾ ಅವರು ಗೆಲುವು ಸಾಧಿಸಿದ್ದಾರೆ.

ಪ್ರಾಥಮಿಕ ಶಾಲೆ ಶಿಕ್ಷಕರ ನಾಲ್ಕು ಸ್ಥಾನಗಳಿಗೆ ಸಿ.ನಿಂಗಪ್ಪ, ಡಿ.ರಾಘವೇಂದ್ರ, ವಾಸುದೇವ, ಚೆನ್ನಬಸಪ್ಪ, ಪ್ರೌಢ ಶಾಲಾ ವಿಭಾಗದ ಎರಡು ಸ್ಥಾನಗಳಿಗೆ ಹರಿಪ್ರಸಾದ, ಮೊಹ್ಮದ್‌ ರಿಜ್ವಾನ್‌ ಉಲ್ಲಾ, ಸರ್ಕಾರಿ ಕಿರಿಯ ಶಾಲಾ ವಿಭಾಗದಲ್ಲಿ ಎಸ್‌.ಶ್ರೀಧರ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಅಬ್ದುಲ್ ರೆಹಮಾನ್‌, ಭೂ ಮಾಪನ, ಕಂದಾಯ ಹಾಗೂ ಭೂ ದಾಖಲೆ ಇಲಾಖೆ ರಮೇಶ್‌, ಎನ್‌ಸಿಸಿ ಹಾಗೂ ಕಾರಾಗೃಹ ಇಲಾಖೆಯಿಂದ ವೆಂಕಟೇಶ್‌, ಖಜಾನೆ ಇಲಾಖೆಯಿಂದ ಅಲ್ಲಾಬಕ್ಷ, ಕಾರ್ಖಾನೆ ಹಾಗೂ ಬಾಯ್ಲರ್‌ ಇಲಾಖೆಯಿಂದ ಕೆ.ಧರ್ಮರೆಡ್ಡಿ, ನ್ಯಾಯಾಂಗ ಇಲಾಖೆಯ ಎರಡು ಸ್ಥಾನಗಳಿಗೆ ಮಲ್ಲಿಕಾರ್ಜುನ ಗೌಡ ಹೊಸಮನಿ, ಭಾಸ್ಕರ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಎಂ.ಸಿ.ಶಂಕರಮೂರ್ತಿ, ಡಯಟ್ ಶಿಕ್ಷಣ ಸಂಸ್ಥೆ, ಲಿಪಿಕ್‌ ನೌಕರರ ಶಿಕ್ಷಣ ಇಲಾಖೆಯಿಂದ ಮಹೇಶ್‌, ಪ್ರಾದೇಶಿಕ ಔಷಧ ನಿಯಂತ್ರಣ ಇಲಾಖೆ ಶ್ರೀನಿವಾಸ್‌ ರೆಡ್ಡಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನು ಮುಂದೆ ತಾಲೂಕು ಅಧ್ಯಕ್ಷರ ಚುನಾವಣೆ ನಡೆದು ಜಿಲ್ಲಾ ಘಟಕಕ್ಕೆ ಸದಸ್ಯರಾಗಲಿದ್ದಾರೆ. ಇದರಿಂದ ಜಿಲ್ಲಾ ಘಟಕದ ಸದಸ್ಯರ ಸಂಖ್ಯೆ 72ಕ್ಕೆ ಏರಲಿದ್ದು, ಇವರು ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ, ರಾಜ್ಯ ಘಟಕದ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.