Udayavni Special

ಸಕಲ ಸಿದ್ಧತೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ


Team Udayavani, Jul 10, 2021, 10:10 AM IST

ಸಕಲ ಸಿದ್ಧತೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ

ಸಿರುಗುಪ್ಪ: ಜು. 19 ಮತ್ತು 22ರಂದು ನಡೆಯುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಸಕಲ ಸಿದ್ಧತೆ ಮಾಡಿಕೊಂಡು ನಡೆಸಬೇಕೆಂದು ಶಾಸಕ ಎಂ.ಎಸ್‌. ಸೋಮಲಿಂಗಪ್ಪ ತಿಳಿಸಿದರು.

ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ 2021ನೇ ಸಾಲಿನ ಎಸ್‌ಎಸ್‌ ಎಲ್‌ಸಿ ವಾರ್ಷಿಕ ಪರೀûಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳಿಗೆ ಏರ್ಪಡಿಸಿದ್ದ ಪರೀûಾ ಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕಡಿಮೆಯಾಗುತ್ತಿದ್ದು, ಮೂರನೇ ಅಲೆ ಸೋಂಕು ವಿದ್ಯಾರ್ಥಿಗಳಿಗೆ ಸೋಕದಂತೆ ಎಚ್ಚರವಹಿಸಬೇಕು. ಪರೀಕ್ಷೆ ನಡೆಯುವ ಪ್ರದೇಶದ ಸುತ್ತ 144 ಸೆಕ್ಸ್‌ನ ಜಾರಿಗೊಳಿಸಬೇಕು. ಸರ್ಕಾರದ ಆದೇಶದ ಅನ್ವಯ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಯಾವುದೇ ಅಡ್ಡಿ ಆಂತಕಗಳಿಲ್ಲದಂತೆ ಪರೀಕ್ಷೆ ನಡೆಸಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಬಿಇಒ ಪಿ.ಡಿ. ಭಜಂತ್ರಿ ಮಾತನಾಡಿ, ಜು. 19 ಮತ್ತು 22ರಂದು ನಡೆಯುವ ಎಸ್‌ಎಸ್‌ ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಾಲೂಕಿನಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಲ್ಲಿ 2265 ವಿದ್ಯಾರ್ಥಿಗಳು. 1807 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 4072 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 8 ಮಾರ್ಗಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಗುತ್ತದೆ.

ಪರೀಕ್ಷಾ ಕಾರ್ಯದಲ್ಲಿ ಮುಖ್ಯ ಅಧೀಕ್ಷಕರಾಗಿ 26 ಜನ, ಕಸ್ಟೋಡಿಯನ್‌ ಆಗಿ 26 ಜನ, ಮೊಬೈಲ್‌ ಸ್ವಾ ಧೀನಾಧಿ ಕಾರಿಗಳು 26 ಜನ, ಸ್ಥಾನಿಕ ಜಾಗೃತ ದಳದಲ್ಲಿ 26ಜನ, ದೈಹಿಕ ಶಿಕ್ಷಕರು 26 ಜನ, ಸ್ಕೌಟ್ಸ್‌ ಮತ್ತು ಗೈಡ್ಸ್‌ನ 78 ಜನ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆಗಾಗಿ 30 ಥರ್ಮಲ್‌ ಸ್ಕ್ಯಾನರ್‌ ಲಭ್ಯವಿರುತ್ತವೆ. ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 346 ಕೊಠಡಿಗಳನ್ನು ಗುರುತಿಸಲಾಗಿದ್ದು, ಒಟ್ಟು 3035 ಡೆಸ್ಕ್ಗಳ ವ್ಯವಸ್ಥೆ ಮಾಡಲಾಗಿದೆ. 26 ವಿಶೇಷ ಕೊಠಡಿಗಳು ಮತ್ತು 2 ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದ್ದು, ಹೊರರಾಜ್ಯದಿಂದ ಪರೀಕ್ಷೆ ಬರೆಯಲು 19 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

ಪರೀಕ್ಷಾ ಸಿಬ್ಬಂದಿಯಲ್ಲಿ 621 ಜನಕ್ಕೆ ಕೋವಿಡ್‌ ಲಸಿಕೆಯನ್ನು ಹಾಕಿಸಲಾಗಿದೆ. ಇನ್ನೂ 16 ಜನ ಸಿಬ್ಬಂ ಗೆ ಕೋವಿಡ್‌ ಲಸಿಕೆ ಹಾಕಿಸುವ ಕಾರ್ಯ ಬಾಕಿ ಇದೆ. ನಮ್ಮ ಕಚೇರಿಯಿಂದ 2000 ಮತ್ತು ತಾಲೂಕು ಸ್ಕೌಟ್‌ ಮತ್ತು ಗೈಡ್ಸ್‌ ಘಟಕದಿಂದ 3000 ಮಾಸ್ಕ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಆರ್‌ಸಿ ಚಾಗಪ್ಪ, ಉಪಪ್ರಾಚಾರ್ಯ ಪಂಪಾಪತಿಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕ ಖಾದರ್‌ ರಹೆಮತ್ತ್ ಉಲ್ಲಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಡಲ್‌ ಅ ಧಿಕಾರಿ ಚೆನ್ನಬಸವನಗೌಡ, ಶಿಕ್ಷಕರಾದ ವಿಜಯ ರಂಗರೆಡ್ಡಿ, ಎಂ.ಸುರೇಶ ಇದ್ದರು.

ಟಾಪ್ ನ್ಯೂಸ್

Untitled-1

ನೋಟು ಮುದ್ರಣ ಇಲ್ಲ 

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

Untitled-1

ಆತ್ಮೀಯತೆಯ ತಾಯಿ ಹೃದಯಿ ಯಡಿಯೂರಪ್ಪ

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ 

ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-10

ತಾಳೆ ಬೆಳೆಯತ್ತಅನ್ನದಾತರ ಚಿತ್ತ

25-9

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ

jghjyy

ತುಂಬಿದ ತುಂಗಭದ್ರಾ: ಮುಳುಗಿದ ವಿಶ್ವವಿಶ್ಯಾತ ಹಂಪಿ

25-12

ಟಿ.ಬಿ.ಡ್ಯಾಂ ಭರ್ತಿಗೆ 8 ಅಡಿ ಬಾಕಿ

Untitled-4

ತುಂಗಭದ್ರಾ ಜಲಾಶಯ ಭರ್ತಿ: 6635 ಕ್ಯೂಸೆಕ್  ನೀರು ನದಿಗೆ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

Untitled-1

ನೋಟು ಮುದ್ರಣ ಇಲ್ಲ 

ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ!

ಕೊಟ್ಟ ಮಾತಿಗೆ ತಪ್ಪುತ್ತಿರಲಿಲ್ಲ!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ನನ್ನ ತಂದೆ ಸೆಲ್ಫ್  ಮೇಡ್‌ ಪರ್ಸನ್‌!

ಟಿ20 ಸರಣಿ ಮೇಲೂ ಭಾರತ ಕಣ್ಣು

ಟಿ20 ಸರಣಿ ಮೇಲೂ ಭಾರತ ಕಣ್ಣು

Untitled-1

ಛಲದಂಕಮಲ್ಲ ಬಿಎಸ್‌ವೈಗೆ ಗೌರವಯುತ ನಿರ್ಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.