Udayavni Special

ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ


Team Udayavani, Dec 2, 2020, 4:17 PM IST

ಕ್ಷಯ ರೋಗ ನಿರ್ಮೂಲನೆಗೆ ಸಹಕರಿಸಿ

ಬಳ್ಳಾರಿ: ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಆಂದೋಲನ ನಿಮಿತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳು ಮನೆ ಮನೆಗೆ ಬಂದಾಗ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್‌.ಎಲ್‌. ಜನಾರ್ಧನ್‌ ಹೇಳಿದರು.

ನಗರದ ಬಂಡಿಹಟ್ಟಿಯಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ 1529 ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಒಟ್ಟು 14,04,672ಜನರನ್ನು ತಪಾಸಣೆಗೆ ಒಳಪಡಿಸಲು ಗುರಿ ಹೊಂದಲಾಗಿದೆ. 3,43,675 ಮನೆಗಳಿಗೆ ಭೇಟಿ ನೀಡಲು1017 ಮನೆ ಬೇಟಿ ತಂಡಗಳನ್ನು ರಚಿಸಲಾಗಿದೆ. 182 ಜನರು ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ.ಡಿ.1ರಿಂದ 30ರವರೆಗೆ ಒಟ್ಟು 30 ದಿನಗಳ ಕಾಲ ಈ ಆಂದೋಲನ ಜರುಗಲಿದೆ ಎಂದರು.

ಕ್ಷಯರೋಗವು ಞ ಕ್ರೋ ಬ್ಯಾಕ್ಟಿರೀಯಂ ಟ್ಯೂಬರ್‌ ಕ್ಯುಲೋಸಿಸ್‌ ಎಂಬ ಸೂಕ್ಷ್ಮಣು ಜೀವಿಯಿಂದ ಬರುತ್ತದೆ. ಕ್ಷಯರೋಗವು ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ಕ್ಷಯರೋಗದಲ್ಲಿ ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶೇತರ ಕ್ಷಯ ಎಂಬ ಎರಡು ವಿಧಗಳಿವೆ. ಕ್ಷಯರೋಗಿ ಕೆಮ್ಮಿದಾಗ, ಸೀನಿದಾಗ ಹೊರಬರುವ ತುಂತುರುಗಳಿಂದರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಕ್ಷಯರೋಗದ ಸೋಂಕು ಉಂಟುಮಾಡುತ್ತದೆ ಎಂದು ಅವರು ವಿವರಿಸಿದರು.

ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ. ಸಂಜೆವೇಳೆ ಜ್ವರ ಬರುವುದು ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬೀಳುವುದು. ಹಸಿವಾಗದಿರುವುದುಮತ್ತು ತೂಕ ಕಡಿಮೆಯಾಗುವುದು. ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಬೇಧಿ, ಕುತ್ತಿಗೆಬಗುಲುಗಳಲ್ಲಿ ಗಡ್ಡೆ ಕ್ಷಯರೋಗದ ಲಕ್ಷಣಗಳಾಗಿವೆ. ಈರೀತಿಯ ಲಕ್ಷಣಗಳಿದ್ದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ 2 ಬಾರಿ ಕಫ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ ಮಾತನಾಡಿ, ಕ್ಷಯರೋಗವನ್ನು ನೇರ ನಿಗಾವಣಾ ಅಲ್ಪಾವ  ಚಿಕಿತ್ಸೆ (ಡಾಟ್ಸ್‌) ಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. 6-8 ತಿಂಗಳು ತಪ್ಪದೇ ಚಿಕಿತ್ಸೆಯನ್ನು ಪಡೆಯಬೇಕು ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ| ಇಂದ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಶೇ. 40ರಷ್ಟು ಯುವಜನಾಂಗವು ಕ್ಷಯರೋಗದ ಸೋಂಕಿತರಾಗಿದ್ದು ಜೀವಿತಾವಧಿಯಲ್ಲಿ ರೋಗಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಪ್ರತಿದಿನ 6 ಸಾವಿರ ಜನ ಹೊಸ ಕ್ಷಯರೋಗಿಗಳಾಗುತ್ತಿದ್ದಾರೆ. ಪ್ರತಿ ಎರಡೂವರೆ ನಿಮಿಷಕ್ಕೆ ಒಬ್ಬರು (ಪ್ರತಿ ದಿನ 600) ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅವರು ವಿವರಿಸಿದರು.

ಟಿ.ಬಿಯನ್ನು ಸೋಲಿಸಿ-ದೇಶವನ್ನು ಗೆಲ್ಲಿಸಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ-ರೋಗಿಯನ್ನು ನಿಮ್ಮ ಮಿತ್ರನಂತೆ ಕಾಣಿರಿ, ಕ್ಷಯರೋಗ ಸಂಪೂರ್ಣ ಗುಣಮುಖ ವಾಗುವಂತ ರೋಗ, ಕ್ಷಯರೋಗಿಯನ್ನು ಮುಟ್ಟುವುದರಿಂದ ಕೈಕುಲುಕುವುದರಿಂದ ಕ್ಷಯರೋಗ ಹರಡುವುದಿಲ್ಲ. ರೋಗವನ್ನು ದೂರವಿಡಿ, ರೋಗಿಯನ್ನು ಅಲ್ಲ. ಕ್ಷಯರೋಗವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ| ಮೋಹನ್‌ಕುಮಾರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಶೇಖರ ರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣಾಕಾರಿ ಡಾ| ವಿಜಯಲಕ್ಷ್ಮೀ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅನಿಲಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮರಿಯಂಬಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಅಬ್ದುಲ್ಲಾ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್‌ ದಾಸಪ್ಪನವರ್‌ ಮತ್ತಿತರರು ಇದ್ದರು. ಕ್ಷಯರೋಗದಿಂದಗುಣಮುಖರಾದ ಮೆಹಬೂಬ್‌ಸಾಬ್‌ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-2

ಬೆಳಗಾವಿಯಲ್ಲಿ ಐಟಿ ಪಾರ್ಕ್‌ ಯೋಜನೆ ಕಾರ್ಯಗತವಾದರೆ 60 ಲಕ್ಷ ಉದ್ಯೋಗ ಸೃಷ್ಟಿ

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್‍ಆರ್.ಪಾಟೀಲ

00

51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ

Principal’s insistence on starting Frist PUC: Suresh Kumar

ಪ್ರಥಮ ಪಿಯುಸಿ ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್

Landline users must add zero before making calls to mobile numbers from today

ಲ್ಯಾಂಡ್ ಲೈನ್ ಬಳಕೆದಾರರ ಗಮನಕ್ಕೆ: ಇನ್ನು ಮುಂದೆ ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ

If we don’t stop this now, it will continue to happen in other sectors too, says Rahul Gandhi on new farm laws

ಮೋದಿ ಸರ್ಕಾರ ರೈತರನ್ನು ಗೌರವಿಸುತ್ತಿಲ್ಲ, ಬದಲಾಗಿ ಕಡೆಗಣಿಸುತ್ತಿದೆ: ರಾಹುಲ್ ಗಾಂಧಿ

basana

ಭದ್ರತೆ ಹಿಂಪಡೆದ ಸರ್ಕಾರ: BSY ಗೆ ಧಿಕ್ಕಾರದ ಪತ್ರ ಬರೆದ ಯತ್ನಾಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RANGOLI

ಗಣಿನಾಡಿನಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

A fascinating Rangabharati park

ಮನಸೆಳೆವ ರಂಗಭಾರತಿ ಉದ್ಯಾನವನ

Historic Hampi place

ಐತಿಹಾಸಿಕ ಹಂಪಿ ಕ್ಷೇತ್ರಕ್ಕೆ ಹರಿದು ಬಂತು ಜನಸಮೂಹ

Crop clearance using JCB machine

ಜೆಸಿಬಿ ಯಂತ್ರ ಬಳಸಿ ಬೆಳೆ ತೆರವು

Free Mask Distribution for School Children

ಶಾಲಾ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

MUST WATCH

udayavani youtube

ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್‌ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ

udayavani youtube

ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ

udayavani youtube

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

udayavani youtube

ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani

udayavani youtube

ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು

ಹೊಸ ಸೇರ್ಪಡೆ

ಸ್ವಯಂಪ್ರೇರಿತ ನಿಯಂತ್ರಣ ಅಗತ್ಯಕ್ಕೆ  ವಿಜ್ಞಾನಿಗಳ ಸಲಹೆ

ಸ್ವಯಂಪ್ರೇರಿತ ನಿಯಂತ್ರಣ ಅಗತ್ಯಕ್ಕೆ ವಿಜ್ಞಾನಿಗಳ ಸಲಹೆ

ಜಿಲ್ಲೆಯಲ್ಲಿ ಡಿಪಿಆರ್‌ ಸಿದ್ಧ

ಜಿಲ್ಲೆಯಲ್ಲಿ ಡಿಪಿಆರ್‌ ಸಿದ್ಧ

ಪುತ್ತೂರು, ಸುಳ್ಯಕ್ಕೆ ಅಂಗಾರ ಭೇಟಿ

ಪುತ್ತೂರು, ಸುಳ್ಯಕ್ಕೆ ಅಂಗಾರ ಭೇಟಿ

ಪಾರ್ಕಿಂಗ್‌, ನೋ-ಪಾರ್ಕಿಂಗ್‌ ವ್ಯವಸ್ಥೆಯೇ ಗೊಂದಲಮಯ!

ಪಾರ್ಕಿಂಗ್‌, ನೋ-ಪಾರ್ಕಿಂಗ್‌ ವ್ಯವಸ್ಥೆಯೇ ಗೊಂದಲಮಯ!

ಫೆಬ್ರವರಿ ಅಂತ್ಯದೊಳಗೆ ವಾರ್ಡ್‌ ಕಮಿಟಿ ರಚನೆ ಸಾಧ್ಯತೆ

ಫೆಬ್ರವರಿ ಅಂತ್ಯದೊಳಗೆ ವಾರ್ಡ್‌ ಕಮಿಟಿ ರಚನೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.