ಪರಿಸರ ಸ್ನೇಹಿ ವಾಹನ ಸಂಚಾರ ಆರಂಭ

¬ಮಿನಿ ಬಸ್‌-ಬ್ಯಾಟರಿ ಚಾಲಿತ ವಾಹನ ಓಡಾಟಕ್ಕೆ ಅನುಮತಿ, ಖಾಸಗಿ ಸಹಭಾಗಿತ್ವದಲ್ಲಿ ಸಂಚಾರಕ್ಕೆ ಹಂಪಿ ಪ್ರಾಧಿಕಾರ ಒಪ್ಪಿಗೆ

Team Udayavani, Mar 9, 2021, 12:47 PM IST

ಪರಿಸರ ಸ್ನೇಹಿ ವಾಹನ ಸಂಚಾರ ಆರಂಭ

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ದುಬಾರಿ ಬೆಲೆಯ ಪರಿಸರ ಸ್ನೇಹಿ ವಾಹನಗಳು ಸಂಚಾರ ಆರಂಭವಾಗಲಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿವೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರಿನ ಪ್ರೀವ್ಯಾಲೆನ್ಸ್‌ ಗ್ರೀನ್‌ ಸಲ್ಯೂಶನ್ಸ್‌ ಪ್ರೈವೇಟ್‌ ಕಂಪನಿ, ಒಂದು ಮೆಟ್ರೋಟ್ರೈನ್‌ ಮಾದರಿಯ ಮಿನಿ ಬಸ್‌ (ಡೀಸಲ್‌ ವಾಹನ) ಹಾಗೂ ಎರಡು ಬ್ಯಾಟರಿಚಾಲಿತ ವಾಹನಗಳ ಪ್ರಾಯೋಗಿಕ ಓಡಾಟಕ್ಕೆ ಅನುಮತಿ ಪಡೆದಿದೆ.

ಪ್ರಾಯೋಗಿಕವಾಗಿ ಹಂಪಿಯಲ್ಲಿ ಸಂಚಾರ ಮಾಡಲಿರುವ ಮೂರು ವಾಹನಗಳು ಈಗಾಗಲೇ ಹಂಪಿಗೆ ಬಂದು ಸೇರಿದ್ದು ವಾಹನಗಳ ನಿರ್ವಹಣೆ, ಇತರೆ ಖರ್ಚುವೆಚ್ಚಗಳನ್ನು ಭರಿಸುವ ಕಂಪನಿ ತನ್ನ ಲಾಭದಲ್ಲಿ ಶೇ. 30ರಷ್ಟು ಆದಾಯವನ್ನು ಪ್ರಾ ಧಿಕಾರಕ್ಕೆ ನೀಡಿ,ಇನ್ನುಳಿದ ಶೇ. 70ರಷ್ಟು ಲಾಭಾಂಶವನ್ನು ಕಂಪನಿ ಉಳಿಸಿಕೊಳ್ಳಲು ಒಪ್ಪಿಕೊಂಡಿದೆ.

ಆಸನ: ಮೆಟ್ರೋಟ್ರೈನ್‌ ಮಾದರಿಯ ಮಿನಿ ಬಸ್‌ ಸುಮಾರು 20 ಜನ ಬ್ಯಾಟರಿಚಾಲಿತ ವಾಹನಗಳಲ್ಲಿ 15 ಜನ ಪ್ರವಾಸಿಗರು ಆಸೀನರಾಗಿ ಹಂಪಿ ಪರಿಸರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಎಲ್ಲೆಲ್ಲಿ: ವಿರೂಪಾಕ್ಷೇಶ್ವರ ಸ್ವಾಮಿ ದೇಗುಲ, ಎದುರು ಬಸವಣ್ಣ, ಸಾಸವಿ ಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಸ್ಥಾನ, ಲಕ್ಷ್ಮೀ ನರಸಿಂಹ, ಬಡವಿಲಿಂಗ, ಅಜಾರರಾಮ ದೇವಾಲಯ, ಕಮಲ ಮಹಲ್‌,ಗಜಶಾಲೆ, ಮಹಾನವಿಮಿ ದಿಬ್ಬ, ರಾಣಿ ಸ್ನಾನ ಗೃಹ ಹಾಗೂ ವಿಜಯ ವಿಠಲ ದೇವಾಲಯದ ಬಳಿ ವಾಹನಗಳು ತಮ್ಮ ಕಾರ್ಯಚರಣೆ ನಡೆಸಲಿವೆ.

ಪ್ಯಾಕೇಜ್‌: ಇಂಧನ ಚಾಲಿತ ಮಿನಿ ಬಸ್‌ನ್ನು ಪ್ರವಾಸಿಗರು ಇಡೀ ಒಂದು ಎಂಗೇಜ್‌ ಪಡೆದುಕೊಂಡು ಹಂಪಿ, ಕಮಲಾಪುರ, ಆನೆಗುಂದಿ, ಆಂಜನಾದ್ರಿ, ಅಟಲ್‌ ಬಿಹಾರಿ ಝೂಲಾಜಿಕಲ್‌ ಪಾರ್ಕ್‌, ಕರಡಿಧಾಮ, ಟಿ.ಬಿ. ಡ್ಯಾಂ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಪ್ರಸ್ತುತ ಹಂಪಿ ವಿಜಯವಿಠಲ ದೇವಾಲಯ ವೀಕ್ಷಣೆಗೆ ಮಾತ್ರ ಹಳೇ ಬ್ಯಾಟರಿ ಚಾಲಿತ ವಾಹನಗಳು ಚಾಲನೆಯಲ್ಲಿವೆ. ಇದರಲ್ಲಿ ಕೆಲ ವಾಹನಗಳು ಕೆಟ್ಟು ಮೂಲೆ ಸೇರಿವೆ. ವಾಹನಗಳ ನಿರ್ವಹಣೆ ಕಿರಿಕಿರಿಯಿಂದ ಹೊರ ಬರಲು ಖಾಸಗಿ ಸಹಭಾಗಿತ್ವದಲ್ಲಿ ಹಂಪಿಯಲ್ಲಿ ವಾಹನಗಳ ಓಡಾಟಕ್ಕೆ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.

ಅನುಕೂಲ :

ವಿಜಯವಿಠಲ ದೇವಾಲಯದ ಹತ್ತಿರ ಹೊರತುಪಡಿಸಿ ಇತರೆ ಪ್ರಮುಖ ಸ್ಮಾರಕಗಳಬಳಿ ತೆರಳಲು ಯಾವುದೇ ಬ್ಯಾಟರಿ ಚಾಲಿತ ವಾಹನಗಳ ಓಟಾಟ ಇದ್ದಿಲ್ಲ. ಹೀಗಾಗಿ ಎರಡೂ ಬ್ಯಾಟರಿ ಚಾಲಿತ ವಾಹನಗಳು, ಹಂಪಿ ಪರಿಸರ ಸುತ್ತಾಡಲಿವೆ. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಬೆಂಗಳೂರಿನ ಪ್ರೀವ್ಯಾಲೆನ್ಸ್‌ ಗ್ರೀನ್‌ ಸಲ್ಯೂಶನ್ಸ್‌ ಪ್ರೈವೇಟ್‌ ಕಂಪನಿ, 1 ಡೀಸೆಲ್‌ ವಾಹನ ಹಾಗೂ 2 ಬ್ಯಾಟರಿ ಚಾಲಿತ ವಾಹನಗಳ ಓಡಾಟ ಆರಂಭಿಸಲಿದೆ. ಮಂಗಳವಾರ ಹಂಪಿಗೆ ಬಂದು ಸೇರಲಿವೆ. –ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ ಹಾಗೂ ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ.

-ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.