ಬಳ್ಳಾರಿ: ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
Team Udayavani, Jul 29, 2017, 4:07 PM IST
ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ 26 ವರ್ಷದ ಮಹಿಳೆಯೊಬ್ಬರು ತನ್ನ 2 ನೇ ಗರ್ಭದಲ್ಲಿ ಏಕಕಾಲಕ್ಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಾರೆ.
ಎಮ್ಮಿಗನೂರು ಎಂಬಲ್ಲಿನ ಗುಂಡೂರು ಹುಲಿಗೆಮ್ಮ ಎಂಬ ಮಹಿಳೆಶುಕ್ರವಾರಸಂಜೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಇರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳಿರುವುದು ಕಂಡು ಬಂದ ಹಿನ್ನಲೆಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಆರೈಕೆ ಮಾಡಲಾಗಿತ್ತು. ಹೆರಿಗೆ ದಿನಾಂಕದ ಒಂದು ತಿಂಗಳ ಮುಂಚೆ ಆಸ್ಪತ್ರೆಗೆ ದಾಖಲಾಗಿದ್ದರು.
ಸದ್ಯ ಶಿಶುಗಳನ್ನು ಎನ್ಐಸಿಯುನಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ.