Udayavni Special

ಡಿ. 5ಕ್ಕೆ ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ: ಡಿಸಿ


Team Udayavani, Nov 27, 2020, 5:24 PM IST

ಡಿ. 5ಕ್ಕೆ ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ: ಡಿಸಿ

ಬೀದರ: ಜಿಲ್ಲಾಡಳಿತ, ರೋಟರಿ ಕ್ಲಬ್‌ ಆಫ್‌ ಬೀದರ ನ್ಯೂ ಸಂಚ್ಯೂರಿ ಮತ್ತು ಗ್ಲೋಬಲ್‌ ಸೈನಿಕ ಅಕಾಡೆಮಿ ಆಶ್ರಯದಲ್ಲಿ ಡಿ.5ರಂದು ನಗರದ ರಂಗ ಮಂದಿರದಲ್ಲಿ ವಿನೂತನ “ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ’ ಆಯೋಜಿಸಲಾಗಿದೆ ಎಂದು ಡಿಸಿ ರಾಮಚಂದ್ರನ್‌ ಆರ್‌. ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತಾಗಿ ಬೀದರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸಲು ಈ ಹಿಂದೆ ಜಿಲ್ಲಾಡಳಿತ ನಡೆಸಿದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಈ ಕಾರ್ಯಕ್ರಮವನ್ನೂ ನಡೆಸಬೇಕೆನ್ನುವ ಸಲಹೆ ಮೇರೆಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಬೆಳಗ್ಗೆ 9.30ಕ್ಕೆಈ ಕಾರ್ಯಕ್ರಮ ಜರುಗಲಿದೆ ಎಂದರು.

ಬೀದರನಲ್ಲಿ ಹೆಮ್ಮೆಯ ವಾಯು ನೆಲೆಯಿದೆ. ಇಂತಹ ವಾಯುನೆಲೆಯಲ್ಲಿ ಬೀದರನವರು ಇರಬೇಕು. ಸೈನಿಕರಾಗಿ ಸೇರಬಯಸುವ ಬೀದರನಯುವಕರು ಅಲ್ಲಿನ ದೊಡ್ಡ ದೊಡ್ಡ ಹುದ್ದೆಗಳಿಗೆ ಸೇರಲು ನೋಂದಣಿ ಆಗಬೇಕು. ಅಲ್ಲಿ ಉತ್ತೀರ್ಣರಾಗಿ ತರಬೇತಪಡೆಯಬೇಕು ಎಂಬುದು ನಮ್ಮ ಆಶಯ. ಆರ್ಮಿ, ನೇವಿ ಇಂತಹ ಕೋರ್ಸ್‌ಗಳಲ್ಲಿ ಬೀದರ ವಿದ್ಯಾರ್ಥಿಗಳು  ಸೇರ್ಪಡೆಯಾಗಬೇಕೆನ್ನುವ ಆಲೋಚನೆ ಮಾಡಿ ನಾವುಗಳು ಈ ಅರಿವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ಆರ್ಮಿ, ನೇವಿಯಂತಲ್ಲಿ ಹೇಗೆ ಸೇರಬೇಕು. ಅಲ್ಲಿ ಯಾವ ಯಾವ ರೀತಿಯ ಪರೀಕ್ಷೆಗಳು ಇರುತ್ತವೆ. ಈಪರೀಕ್ಷೆಗೆ ಸಿದ್ಧರಾಗಲು ವಿದ್ಯಾರ್ಥಿಗಳು ಹೇಗೆ ವ್ಯಕ್ತಿತ್ವರೂಪಿಸಿಕೊಳ್ಳಬೇಕು. ಹೇಗೆ ಸಿದ್ಧರಾಗಬೇಕು ಎನ್ನುವ ಬಗ್ಗೆ ಈ ಭಾಗದ ಬಹುತೇಕ ವಿದ್ಯಾರ್ಥಿಗಳಲ್ಲಿ ಮಾಹಿತಿ ಕೊರತೆ ಇದೆ. ಹೀಗಾಗಿ ಇಂತಹ ಮಾಹಿತಿ ಎಲ್ಲರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಯೋಚಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ಅರಿವು ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ಮಾಹಿತಿ ಪಡೆದು ಇಂತಹ ಪರೀಕ್ಷೆಗಳಿಗೆ ಹೆಸರು ನೋಂದಾಯಿಸಿಕೊಂಡು, ಪರೀಕ್ಷೆ ಪಾಸಾಗಿ ದೇಶಸೇವೆಯಲ್ಲಿ ಸೇರಬೇಕೆಂಬುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.

ಲೆಫ್ಟಿನಂಟ್‌ ಜನರಲ್‌ ರಮೇಶ ಹಲ್ಗಲಿ ಕಾರ್ಯಕ್ರಮ ಉದ್ಘಾಟಿಸುವರು. ಏರ್‌ ಕಮಾಂಡರ್‌ ಜಿ.ಎಲ್‌. ಹಿರೇಮಠ, ಕಮಾಂಡರ್‌ ನವೀತ್‌ ಬಾಳಿ, ಕೊಲೊನೆಲ್‌ ರೋಹಿತ್‌ ದೇವ್‌., ಕ್ಯಾ. ನವೀನ್‌ ನಾಗಪ್ಪ, ಕ್ಯಾ. ಮಾರ್ಟಿನ್‌ ಜಾರ್ಜ್‌ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುವರು ಎಂದು ಜಿಲ್ಲಾಧಿ ಕಾರಿಗಳು ಮಾಹಿತಿ ನೀಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ರೂಪಿಸಲಾಗುತ್ತಿದೆ. ಅಂತರ್ಜಾಲದ ಮೂಲಕ ಬಹಳಷ್ಟು ವಿದ್ಯಾರ್ಥಿಗಳಿಗೆ, ಯುವಜನರಿಗೆಕಾರ್ಯಕ್ರಮದ ಮಾಹಿತಿ ಪ್ರಸಾರವಾಗಲು ವ್ಯವಸ್ಥೆ ಮಾಡಲಾಗುತ್ತಿದೆ. ಆನ್‌ಲೈನ್‌ದಲ್ಲಿ 300 ಸೀಟುಗಳಿಗೆನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇತರರು ಅಂತರ್ಜಾಲ ಮೂಲಕ ನೇರ ವೀಕ್ಷಣೆಗೆ ಅವಕಾಶವಿದೆ ಎಂದು ತಿಳಿಸಿದರು.

ಪೋಸ್ಟರ್‌ ಬಿಡುಗಡೆ: ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ ಕುರಿತು ಮುದ್ರಿಸಿದ ಪೋಸ್ಟರ್‌ಗಳನ್ನು ಇದೆ ವೇಳೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಎಸ್‌ಪಿ ನಾಗೇಶ ಡಿ.ಎಲ್‌., ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಾಟೀಲ, ರೋಟರಿ ಕ್ಲಬ್‌ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ| ಕಪೀಲ್‌ ಪಾಟೀಲ, ಅಕಾಡೆಮಿ ಸ್ಕೂಲ್‌ನ ಕರ್ಣಲ್‌ ಶರಣಪ್ಪ ಚಿಕೇನಪುರ ಇತರರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

Amazon Republic Day sale offers: Discounts on Apple iPhones, Xiaomi, OnePlus, Samsung smartphones

‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

POLICE

ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ

Untitled-1

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

mandaya

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

Ramesh-jaraki

ಕರ್ನಾಟಕದ ಗಡಿ ಭಾಗಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ: ರಮೇಶ್ ಜಾರಕಿಹೊಳಿ‌

RCB

2020ರ 12 ಆಟಗಾರರನ್ನು ಉಳಿಸಿಕೊಂಡ RCB: 2021ರಲ್ಲಿ ಬೆಂಗಳೂರು ಪರ ಯಾರೆಲ್ಲಾ ಆಡಲಿದ್ದಾರೆ ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kadalooru Satyanarayanacharya speech

ಸಮಸ್ಯೆಗೆ ಸ್ವಯಂ ಸೇವಕರು ಸಂಜೀವಿನಿಯಾಗಲಿ

Constitution is the mother of all laws: Sidram

ಸಂವಿಧಾನ ಎಲ್ಲ  ಕಾನೂನುಗಳ ತಾಯಿ: ಸಿದ್ರಾಮ್‌

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಬಸವಕಲ್ಯಾಣ-ಹುಲಸೂರ ಮೀಸಲಾತಿ ಪಟ್ಟಿ

ಬಸವಕಲ್ಯಾಣ-ಹುಲಸೂರ ಮೀಸಲಾತಿ ಪಟ್ಟಿ

ಬಸವಣ್ಣ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ; ಸಿಎ ರುದ್ರಮೂರ್ತಿ

ಬಸವಣ್ಣ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ; ಸಿಎ ರುದ್ರಮೂರ್ತಿ

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

Amazon Republic Day sale offers: Discounts on Apple iPhones, Xiaomi, OnePlus, Samsung smartphones

‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

POLICE

ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ

Untitled-1

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

mandaya

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.