ಬಸ್‌ ನಿಲ್ದಾಣದಲ್ಲಿ ಸುಲಿಗೆ!


Team Udayavani, Aug 9, 2017, 4:47 PM IST

bus copy.jpg

ಬೀದರ: ರಸ್ತೆ ಸಾರಿಗೆ ಸಂಸ್ಥೆ ಜನರ ಬದುಕಿನ ಬಹುಮುಖ್ಯ ಭಾಗವಾಗಿದ್ದು ಪ್ರಯಾಣಿಕರ ಸೇವೆಯೇ ಅದರ ಮೂಲ ಉದ್ದೇಶ.
ಆದರೆ, ಸಂಸ್ಥೆಯ ಬಸ್‌ ನಿಲ್ದಾಣಗಳ ಅಂಗಡಿಯಲ್ಲಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿದೆ. ಬಸ್ತುಗಳ ಮೇಲೆ ಎಂಆರ್‌ಪಿಗಿಂತ ಹೆಚ್ಚುವರಿ ಹಣ ಪಡೆದು ನಿರ್ಭೀತಿಯಿಂದ ಸುಲಿಗೆ ಮಾಡಲಾಗುತ್ತಿದ್ದು, ಗ್ರಾಹಕರು ಅನಿವಾರ್ಯವಾಗಿ ಹೆಚ್ಚು ಬೆಲೆಗೆ ವಸ್ತುಗಳನ್ನು ಖರೀದಿಸುವಂತಾಗಿದೆ. ಅಂಗಡಿಗಳಲ್ಲಿ ಗ್ರಾಹಕರಿಂದ ಯಾವುದೇ ವಸ್ತುಗಳಿಗೆ ಕನಿಷ್ಠ ಮಾರಾಟ ದರ (ಎಂಆರ್‌ಪಿ)ಕ್ಕಿಂತ ಹೆಚ್ಚು ಹಣ
ಪಡೆಯುವುದು ನಿಯಮದ ಪ್ರಕಾರ ಅಪರಾಧ. ಆದರೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಬೀದರ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಅಧಿಕ ಹಣ ಪಡೆಯುವುದು ಮಾಮೂಲು ಎಂಬಂತಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಅಂಗಡಿ ಮಾಲೀಕರದ್ದೇ ಆಟ, ಅವರು ಹೇಳಿದಷ್ಟೇ ದರ. ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬಸ್‌ ಪ್ರಯಾಣದ ವೇಳೆ ಪ್ರಯಾಣಿಕರು ತಿಂಡಿ ತಿನಿಸು, ನೀರು, ತಂಪು ಪಾನೀಯ ಸೇವನೆ ಸಾಮಾನ್ಯ. ನಿಲ್ದಾಣಗಳಲ್ಲಿ ಬಹುತೇಕ ಬಸ್‌ಗಳು ಕೆಲವೇ ನಿಮಿಷಗಳ ವರೆಗೆ ನಿಲುಗಡೆಯಾಗುತ್ತವೆ. ಇದನ್ನೇ ನೆಪ ಮಾಡಿಕೊಂಡ ಮಳಿಗೆ ಮಾಲೀಕರು ಮೋಸದಾಟಕ್ಕೆ ಇಳಿದಿದ್ದಾರೆ. ಕಡಿಮೆ ಸಮಯದಲ್ಲಿ ನಿಲ್ದಾಣದ ಹೊರಗಡೆ ಹೋಗಿ ಖರೀದಿಸುವು ಅಸಾಧ್ಯ. ಒಳಗಿನ ಅಂಗಡಿಗಲ್ಲೇ ಸಾಮಗ್ರಿಗಳನ್ನು ಖರೀದಿಸಬೇಕು. ಇಲ್ಲವಾದರೆ ಬಸ್‌ ಕಳೆದುಬೇಕಾದ ಅನಿವಾರ್ಯ ಇರುತ್ತದೆ.
ಆಗ ಎಂಆರ್‌ಪಿ ದರವನ್ನು ಗಮನಿಸಲೂ ಆಗದು. ಹಾಗಾಗಿ ಕೇಳಿದಷ್ಟು ಹಣ ಕೊಟ್ಟು ಬಸ್‌ ಹತ್ತುತ್ತಾರೆ. ಬಹುತೇಕ ವಸ್ತುಗಳ
ಮೇಲೆ ಕನಿಷ್ಠ ಒಂದೆರೆಡು ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಕೆಲವೊಮ್ಮೆ ಎಂಆರ್‌ಪಿ ದರಕ್ಕಿಂತ ಅಧಿಕ ಹಣ ಕೇಳಿದರೆ ಗ್ರಾಹಕರು ಅಂಗಡಿಯವರನ್ನು ಪ್ರಶ್ನಿಸಿ ಮಾತಿನ ಸಂಘರ್ಷವನ್ನೂ ನಡೆಸಿದ ಉದಾಹರಣೆಗಳಿವೆ. ಆದರೆ, ಮಾಲೀಕ ಬೇಕಾದರೆ ತೆಗೆದುಕೊಳ್ಳಬಹುದು ಇಲ್ಲವಾದರೆ ಬೇಡ ಎಂಬ ಒರಟು ಉತ್ತರ ನೀಡುತ್ತಾನೆ. ಕೊನೆಗೂ ಪುಡಿಗಾಸಿಗಾಗಿ ಇಲ್ಲದ ಉಸಾಬರಿ ನಮಗೇಕೆ ಎಂದು ಹೆಚ್ಚುವರಿ ಹಣ ತೆತ್ತು ಸಾಮಗ್ರಿಗಳನ್ನು ಖರೀದಿಸುತ್ತಾರೆ. ಇದರಿಂದ ಅಂಗಡಿಯವರಿಗೆ ಮತ್ತಷ್ಟು ಉತ್ತೇಜನ
ಸಿಕ್ಕಂತಾಗುತ್ತಿದೆ. ಸಾಮಾನ್ಯವಾಗಿ ತಿಂಡಿ- ತಿನಿಸುಗಳಿಗೆ ಒಂದೆರೆಡು ರೂಪಾಯಿ ಅ ಧಿಕ ದರ ಪಡೆದರೆ ಕುಡಿಯುವ ನೀರು, ತಂಪು ಪಾನೀಯಕ್ಕೆ ಅದಕ್ಕಿಂತ ಅಧಿ ಕ ಹಣ ಕೀಳಲಾಗುತ್ತಿದೆ. ನೀರು, ಕೂಲ್ಡ್ರಿಕ್ಸ್‌ನ್ನು ಪ್ರಿಜ್‌ನಲ್ಲಿಟ್ಟಿರುತ್ತೇವೆ. ಇದಕ್ಕೆ ವಿದ್ಯುತ್‌ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಹೇಳಿ ಎರಡೂಮೂರು ರೂಪಾಯಿ ಹೆಚ್ಚುವರಿ ದರ ಪಡೆಯಲಾಗುತ್ತಿದೆ. ಪ್ರಯಾಣಿಕರ ಸುಲಿಗೆ
ಅವ್ಯಾಹತವಾಗಿ ನಡೆಯುತ್ತಿದ್ದರೂ ಸಾರಿಗೆ ಸಂಸ್ಥೆ ಅಧಿ ಕಾರಿಗಳು ಮೌನ ವಹಿಸುತ್ತಾರೆ. ಈ ವಿಷಯವನ್ನು ಗಂಭೀರವಾಗಿ
ಪರಿಗಣಿಸಿದಲ್ಲಿ ಮಾತ್ರ ಅಂಗಡಿಯವರ ಉಪಟಳ ನಿಯಂತ್ರಿಸಲು ಸಾಧ್ಯ. ಎಂಆರ್‌ಪಿಗಿಂತ ಹೆಚ್ಚುವರಿ ಹಣ ಕೊಡುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಅಂಗಡಿಯವರನ್ನು ಪ್ರಶ್ನಿಸುವುದು ಹಕ್ಕು. ಸುಲಿಗೆ ಮಾಡುವುದು ಕಾನೂನು ರಿತ್ಯ ಅಪರಾಧ. ಇದರ ವಿರುದ್ಧ ಸಾರಿಗೆ ಸಂಸ್ಥೆ ಡಿಟಿಒ ಮತ್ತು ಗ್ರಾಹಕರ ವೇದಿಕೆಗೆ ದೂರು ನೀಡಲು ಅವಕಾಶ ಇದೆ. ಗ್ರಾಹಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕಿದೆ.

ಶಶಿಕಾಂತ ಬಂಬುಳಗೆ

ಗಮನ ಹರಿಸಲಿ ಬೀದರ ಬಸ್‌ ನಿಲ್ದಾಣದಲ್ಲಿ ವಸ್ತುಗಳಿಗೆ ಕನಿಷ್ಠ ಮಾರಾಟ ದರಕ್ಕಿಂತ ಅಧಿಕ ಹಣ ಪಡೆಯಲಾಗುತ್ತಿದೆ. ನಿಲ್ದಾಣದಲ್ಲಿ ಬಸ್‌ ಕೆಲವು ನಿಮಿಷ ಮಾತ್ರ ನಿಲ್ಲುವುದರಿಂದ ಅಂಗಡಿಯವರು ಕೇಳಿದಷ್ಟು ಹಣ ಕೊಡುವ ಅನಿವಾರ್ಯತೆ ಇದೆ. ಕೆಲವೊಮ್ಮೆ ಪ್ರಶ್ನಿಸಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವಾದರೆ ಹೋಗಿ ಎಂದು ಮೊಂಡುತನ ಪ್ರದರ್ಶಿಸುತ್ತಾರೆ. ಎನ್‌ ಈಕೆಆರ್‌ಟಿಸಿ ಅಧಿಕಾರಿಗಳು ಗಮನಹರಿಸಬೇಕು.  ಎನ್‌. ವಿಜಯಕುಮಾರ, ಪ್ರಯಾಣಿಕ

ಟಾಪ್ ನ್ಯೂಸ್

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

Untitled-1

ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15birthday

ಅದ್ದೂರಿ ಬರ್ತ್‌ಡೇ ನಿಷಿದ್ಧ

14brims

ವೈದ್ಯ ಪಿಜಿ ಕೋರ್ಸ್‌ ಆರಂಭಿಸಲು ಬ್ರಿಮ್ಸ್ ಸಿದ್ದತೆ

13water

ನೀರು ಕೊಡಿ ಹೋರಾಟಕ್ಕೆ ಬಾಬುಗೌಡ ಬಾದರ್ಲಿ ಧ್ವನಿ

12rain

ಭಾರಿ ಮಳೆಗೆ ನೆಲಕ್ಕುರುಳಿದ ಭತ್ತದ ಬೆಳೆ

12school

ಶಿಕ್ಷಣ ಕ್ಷೇತ್ರ ಸುಧಾರಣೆಗೆ ನಿರಂತರ ಶ್ರಮ: ಅಜಯ್‌ ಕಾಮತ್‌

MUST WATCH

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

ಹೊಸ ಸೇರ್ಪಡೆ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

16 ಪದವಿ ಕಾಲೇಜುಗಳ ಬಿಕಾಂ ಫಲಿತಾಂಶಕ್ಕೆ ತಡೆ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!

19ksrtc

ಕಾಗದ ರಹಿತ ಆಡಳಿತದತ್ತ ವಾಯವ್ಯ ಸಾರಿಗೆ ಸಂಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.