ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Team Udayavani, Nov 3, 2019, 3:02 PM IST

ಹುಮನಾಬಾದ: ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿ ಕೈಗೊಂಡ ನಂತರ ಕಳಪೆ ಆಗಿದೆ ಎಂದು ದೂರುವ ಬದಲಿಗೆ ಸಾರ್ವಜನಿಕರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಡದಂತೆ ಮೆನ್ನೆಚ್ಚರಿಕೆ ವಹಿಸಿ, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಸಲಹೆ ನೀಡಿದರು.

ಹುಮನಾಬಾದ- ಮಾಣಿಕನಗರ- ಘೋಡವಾಡಿ ಮಾರ್ಗದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ1.50 ಕಿ.ಮೀ. ಜಂಕ್ಷನ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನವೇನು ವಿಧಾನಸೌಧದಲ್ಲಿ ಪ್ರಿಂಟ್‌ ಆಗುವುದಿಲ್ಲ. ಪ್ರತಿಯೊಬ್ಬರಿಂದ ಸಂಗ್ರಹಿಸಲಾಗುವುವ ತೆರಿಗೆ ಹಣವನ್ನೇ ಸರ್ಕಾರ ಅಭಿವೃದ್ಧಿಗಾಗಿ ಅನುದಾನ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸದಿರುವ ಕಾರಣ ಬಹುತೇಕ ಕಾಮಗಾರಿಗಳು ಪೂರ್ಣಾವಧಿ ಸೇವೆ ಒದಗಿಸುವ ಮುನ್ನವೇ ಹಾಳಾಗುತ್ತವೆ. ಇಂಥದಕ್ಕೆ ಸಾರ್ವಜನಿಕರು ಅವಕಾಶ ಕಲ್ಪಿಸಬಾರದು ಎಂದು ಸಲಹೆ ನೀಡಿದರು.  ಗುಣಮಟ್ಟ ವಿಷಯದಲ್ಲಿ ಯಾವುದೇ ಮುಲಾಜಿಲ್ಲ. ಗುತ್ತಿಗೆದಾರ ಯಾರಾಗಿದ್ದರೂ ಸರಿ, ಕಳಪೆಯಾದರೆ ಬಿಲ್‌ ತಡೆಹಿಡಿಯಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ|ಚಂದ್ರಶೇಖರ ಬಿ.ಪಾಟೀಲ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಸದಸ್ಯ ಪ್ರಕಾಶ ಕಾಳಮದರಗಿ, ಮಾಣಿಕನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಪೊಲೀಸ್‌ ಪಾಟೀಲ, ಅಣ್ಣಾರಾವ್‌ ಪಾಟೀಲ, ದತ್ತಕುಮಾರ ಚಿದ್ರಿ, ಓಂಕಾರ ತುಂಬಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಹ್ಮದ್‌ ಮೈನೋದ್ದಿನ್‌ ಅಪ್ಸರಮಿಯ್ಯ, ರಾಜಪ್ಪ ಇಟಗಿ, ಎಸ್‌.ಡಿ.ವಾಗ್ಮಾರೆ, ಈಶ್ವರ ಬಿ.ಕಲಬುರ್ಗಿ, ವಾಹೇದ್‌ ಬೇಗ್‌, ಮಲ್ಲಿಕಾರ್ಜುನ ಮಾಳಶೆಟ್ಟಿ, ಸಚ್ಚಿನ ಘವಾಳ್ಕರ್‌ ಮತ್ತಿತರರು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • „ಶಶಿಕಾಂತ ಬಂಬುಳಗೆ ಬೀದರ: ಮುಂಗಾರು ಮಳೆ ವಿಳಂಬ ನಡುವೆಯೂ ಔಷಧೀಯ ಗುಣವುಳ್ಳ ಸೀತಾಫಲ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೆಲೆ ದುಬಾರಿಯಾಗಿಸಿದೆ. ಚಳಿಗಾಲ ಆರಂಭವಾಗುತ್ತಲೇ...

  • ಬೀದರ: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರಿಗೆ ಸ್ವಲ್ಪಮಟ್ಟಿಗೆ ಇದರಿಂದ ತೊಂದರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಂತಹ ತೊಂದರೆಗಳನ್ನು...

  • ಬೀದರ: ಜನವಾಡಾ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ- ಪಂಗಡದ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ|ಜಯಶ್ರೀ ಹಾಗೂ...

  • ಬೀದರ: ಜಿಲ್ಲೆಯಲ್ಲಿ ನ. 25ರಿಂದ ಡಿ.10ರ ವರೆಗೆ ನಡೆಯಲಿರುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ ನಿಮಿತ್ತ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ...

  • ಬೀದರ: ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನ.23 ಮತ್ತು 24ರಂದು ವಿಶ್ವ ಬಸವ ಧರ್ಮ ಟ್ರಸ್ಟ್‌ ವತಿಯಿಂದ 40ನೇ ಶರಣ ಕಮ್ಮಟ-ಅನುಭವ ಮಂಟಪ ಉತ್ಸವ-2019 ಆಯೋಜಿಸಲಾಗಿದೆ. ಎರಡು...

ಹೊಸ ಸೇರ್ಪಡೆ