27ರಿಂದ 3ರವರೆಗೆ ದೇಶಾದ್ಯಂತ ಪ್ರತಿಭಟನೆ

Team Udayavani, Jun 16, 2020, 1:44 PM IST

27ರಿಂದ 3ರವರೆಗೆ ದೇಶಾದ್ಯಂತ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ವಿಜಯಪುರ: ಬಿಜೆಪಿ ರಾಜ್ಯ-ಕೇಂದ್ರ ಸರ್ಕಾರಗಳು ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸಲು ಮುಂದಾಗಿವೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ಸೇರಿ ಪ್ರಮುಖ ಮೂರು ಕಾಯ್ದೆಗಳನ್ನು ತಿದ್ದುಪಡಿ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿಗಳು ಭೂಮಿ ಕಬಳಿಸುವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದೆ. ಇದನ್ನು ವಿರೋಧಿ ಸಿ ಜೂ. 27ರಿಂದ ದೇಶದಲ್ಲಿ ಒಂದು ವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂಡವಾಳಶಾಹಿಗಳು ಕೃಷಿಭೂಮಿ ಹೊಂದುವುದಕ್ಕೆ ಮುಕ್ತ ಅವಕಾಶ ಕಲ್ಪಿಸಲು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ಕ್ರಮ ರೈತದ್ರೋಹಿ, ಕೃಷಿ ವಿರೋಧಿ ನಿರ್ಧಾರ. ಭವಿಷ್ಯದಲ್ಲಿ ಕೃಷಿ ಮೇಲೆ ಮಾರಕ ಪರಿಣಾಮ ಬೀರುವ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ರಾಜ್ಯ ಗ್ರಾಮೀಣ ಬದುಕನ್ನು ಸ್ಮಶಾನ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ. ಸಣ್ಣ ಹಿಡುವಳಿದಾರರು, ಗೇಣಿದಾರರು, ಕೃಷಿಕೂಲಿ ಕಾರ್ಮಿಕರು, ಕಸಬುದಾರರು ಕೃಷಿ ಅವಲಂಬಿತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸರ್ಕಾರ ಹೊಸ ನಿರ್ಧಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾರಕವಾಗಿದೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಸರ್ಕಾರ ಕೃಷಿಯೇತರ ವಾರ್ಷಿಕ 20 ಲಕ್ಷ ರೂ. ಆದಾಯ ಹೊಂದಿರುವ ಯಾರಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿರುವುದು ರಾಜ್ಯದ ಕೃಷಿ ವ್ಯವಸ್ಥೆಯನ್ನೇ ದುರ್ಬಲಗೊಳಿಸಿತ್ತು. ಈಗ ಬಿಜೆಪಿ ಸರ್ಕಾರ ಈ ಕಲಂ ಕಿತ್ತು ಹಾಕುವ ಮೂಲಕ ರಾಜ್ಯದ ಕೃಷಿ ವ್ಯವಸ್ಥೆಗೆ ಮರಣ ಶಾಸನ ಬರೆದಿದೆ. ಭವಿಷ್ಯದಲ್ಲಿ ಕೃಷಿ ಉತ್ಪನ್ನಗಳ ಮೇಲೆ ಗಂಭಿರ ಪರಿಣಾಮ ಬೀರಲಿದ್ದು ಅನ್ನದಾತರೊಂದಿಗೆ ಜನ ಸಾಮಾನ್ಯರೂ ಇದರ ಪರಿಣಾಮ ಎದುರಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಕಥೆ ಹೀಗಾದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಥೆ ಮತ್ತೂಂದು ರೀತಿಯದು. ಮೋದಿ ಸರ್ಕಾರ ಕೂಡ ರೈತರು ಹಾಗೂ ಕೃಷಿ ಆಧಾರಿತ ವ್ಯವಸ್ಥೆಯನ್ನೇ ನಂಬಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಿದ್ದು ಅಗತ್ಯ ಸೇವಾ ನಿರ್ವಹಣೆ ಕಾಯ್ದೆ, ಗುತ್ತಿಗೆ ಬೇಸಾಯಕ್ಕೆ ಅವಕಾಶ ಸೇರಿದಂತೆ ಈ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಇದರೊಂದಿಗೆ ರೈತ ವಿರೋಧಿ  ನೀತಿಗಳನ್ನು ಜಾರಿಗೆ ತಂದಿವೆ ಎಂದು ಟೀಕಾ ಪ್ರಹಾರ ನಡೆಸಿದರು.

ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಿದ್ದಕ್ಕೆ ಎರಡು ತಿಂಗಳಾದರೂ ಹಣ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಅಣ್ಣಾರಾಯ ಈಳಿಗೇರ ಇದ್ದರು.

ಟಾಪ್ ನ್ಯೂಸ್

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

Rain ಮೇ 11ರ ವರೆಗೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.