ರೌಡಿಸಂ ನಡೆಸಿದರೆ ಗಡಿಪಾರು: ಬಿರಾದಾರ


Team Udayavani, May 16, 2022, 5:15 PM IST

20police

ಇಂಡಿ: ಚುನಾವಣೆ ಅಥವಾ ಇನ್ನಿತರೆ ಯಾವುದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದಾಗಲಿ, ಬೆದರಿಕೆ ಹಾಕುವುದಾಗಲಿ ಮಾಡಿದರೆ ಗೂಂಡಾ ಕಾಯ್ದೆಯಡಿ ಕೇಸ್‌ ದಾಖಲಿಸಿ ಗಡಿಪಾರು ಮಾಡಬೇಕಾಗುತ್ತದೆ ಎಂದು ನಗರ ಸಿಪಿಐ ಭೀಮನಗೌಡ ಬಿರಾದಾರ ಖಡಕ್‌ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ರವಿವಾರ ರೌಡಿಗಳಿಗೆ ಪರೇಡ್‌ ನಡೆಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ಇನ್ನು ಮುಂದೆ ಯಾವುದೇ ರೌಡಿಸಂ ನಡೆಯುವುದಿಲ್ಲ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ವ್ಯಕ್ತಿ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಹಾಗೂ ಸಮಾಜ ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದವರು ಎಂತಹ ಪ್ರಭಾವಿಗಳೇ ಇದ್ದರೂ ಅವರ ಹೆಡೆಮುರಿ ಕಟ್ಟಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸಾರ್ವಜನಿಕರು ಭಯಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಹಿಂದೆ ಪೊಲೀಸ್‌ ಇಲಾಖೆ ಇದೆ. ಪಟ್ಟಣದಲ್ಲಿ ಯಾವುದೇ ರೀತಿಯ ತೊಂದರೆ ನೀಡುವ ವ್ಯಕ್ತಿಗಳು ಇದ್ದರೂ ಅಂಥವರ ಮಾಹಿತಿ ನೀಡಬೇಕು. ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಸಾರ್ವಜನಿಕರ ಸಹಕಾರ ಪೊಲೀಸ್‌ ಇಲಾಖೆಗೆ ಅಗತ್ಯವಾಗಿದೆ ಎಂದು ಹೇಳಿದರು. ಪಟ್ಟಣದಲ್ಲಿ ಗೂಂಡಾಗಿರಿ, ಬೆದರಿಕೆ ಹಾಕುವುದು, ಇಸ್ಪೀಟ್‌-ಮಟ್ಕಾ ಹಾಗೂ ಮರಿ ರೌಡಿಗಳ ಹಾವಳಿ ಕಂಡು ಬಂದರೆ ಅಂಥವನ್ನು ಹಿಡಿದು ಗೂಂಡಾ ಕಾಯ್ದೆಗೆ ಒಳಪಡಿಸಲು ಹಿಂಜರಿಯುವುದಿಲ್ಲ. ಒಂದು ವೇಳೆ ಗೂಂಡಾಗಿರಿ ಮುಂದುವರಿಸಿದರೆ ಅಂಥವರನ್ನು ಪಟ್ಟಣದಲ್ಲಿ ಇರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿ 3 ತಿಂಗಳಿಗೊಮ್ಮೆ ಪೊಲೀಸರು ಕರೆದಾಗ ಠಾಣೆಗೆ ಬರಬೇಕು. ಯಾವುದೇ ನೆಪ ಹೇಳಿದರೆ ನಡೆಯುವುದಿಲ್ಲ. ಮುಂದೆ ಇದೇ ರೀತಿ ಪಟ್ಟಣದಲ್ಲಿ ನಡೆದುಕೊಂಡರೆ ಮತ್ತೆ ಕೇಸ್‌ ಹಾಕಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಈ ವೇಳೆ ಇಲಾಖೆ ಸಿಬ್ಬಂದಿ ಪಾಂಡು ರಾಠೊಡ, ಭೀಮರಾಯ ಕ್ಷತ್ರಿ, ನಜೀರ್‌ ಶ್ಯಾಮಣ್ಣನವರ, ಬಸವರಾಜ ಗಡಗಲಿ, ಚಂದ್ರು ರಾಠೊಡ, ಜಟ್ಟೆಪ್ಪ ದೊಡಮನಿ ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

dr-sdk

ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

7landsilde—–1

ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುದ್ದೇಬಿಹಾಳ: ಶಿಕ್ಷಕರ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು

ಮುದ್ದೇಬಿಹಾಳ: ಶಿಕ್ಷಕನ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು

18roadblock

ಜನರಿಂದ ಮರಾಠಿ ವಿದ್ಯಾಲಯ ಬಳಿ ದಿಢೀರ್‌ ರಸ್ತೆ ತಡೆ

17protest

ಮಳಖೇಡ ಮೂಲ ವೃಂದಾವನದ ಅಪಪ್ರಚಾರಕ್ಕೆ ಖಂಡನೆ

22water

ಸಾತಪುರ: ಕಲುಷಿತ ನೀರು ಕುಡಿದು 35 ಜನರು ಅಸ್ವಸ್ಥ

21central-government

ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗಳಿಗೆ ತಲುಪಿಸಿ

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

1-sffsf-sfs

ಚಿಕ್ಕೋಡಿ: ವಿದ್ಯುತ್ ಅವಘಡದಿಂದ ವಿದ್ಯಾರ್ಥಿನಿ ಸಾವು: ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆ

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿ

dr-sdk

ಫ್ರೀಡಂ ಪಾರ್ಕ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ; ಪೂರಕ ಸ್ಪಂದನೆ ಎಂದ ಸಚಿವ

8theft

ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು

ಡಿಕೆಶಿ

ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಿದ್ದತೆ ಮುಖ್ಯವೆಂದ ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.