ಸಾಹಿತ್ಯದ ತಾಯಿಬೇರು ಜಾನಪದ


Team Udayavani, Jan 23, 2018, 3:59 PM IST

vij-4.jpg

ಇಂಡಿ: ಕರ್ನಾಟಕ ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ. ಕನ್ನಡ ನಾಡಿಗೆ ಅನೇಕ ಕವಿಗಳು,
ಸಾಹಿತಿಗಳು ದಿಗ್ಗಜರು ಸಾಹಿತ್ಯದ ರಸದೌತಣ ನೀಡಿ ನಾಡಿನ ಉಸಿರಾಗಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಹಳೆ ತಹಶೀಲ್ದಾರ್‌ ಕಚೇರಿಯಲ್ಲಿ ಕನ್ನಡ ಜಾನಪದ ಪರಿಷತ್‌ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಫೆಬ್ರವರಿ 25ರಂದು ಇಂಡಿ ತಾಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನ ಸಾಲೋಟಗಿಯಲ್ಲಿ ಹಮ್ಮಿಕೊಂಡಿದ್ದು ಶ್ಲಾಘನೀಯ. ಈ ಹಿಂದೆ ಕಸಾಪ ಸಮ್ಮೇಳನ ಮಾಡಿ ಕನ್ನಡದ ಸವಿಯನ್ನು ತಾಲೂಕಿನಾದ್ಯಂತ ಪಸರಿಸಿ ಕನ್ನಡದ ಭಾಷೆ ಬಗೆಗೆ ಜಾಗೃತ ಮಾಡಿರುವದು ತಾಲೂಕಿಗೆ ಸಂದಗೌರವ ಎಂದರು.

ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯಗಳ ತಾಯಿ ಬೇರು. ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಪ್ರತಿಯೊಂದು
ಕೆಲಸ ಮಾಡುವಾಗ ಹಾಡುವ ಮೂಲಕ ತಮ್ಮ ಆಯಾಸ ಕಳೆದುಕೊಳ್ಳುತ್ತಿದ್ದರು. ಇಂದು ಅಧುನಿಕ ಪ್ರಪಂಚದ ಸೆಳೆತಕ್ಕೆ ಸಿಕ್ಕು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ನಮ್ಮ ಶ್ರೀಮಂತ ಜಾನಪದ ಸಾಹಿತ್ಯ ಮರೀಚಿಕೆಯಾಗುತ್ತಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಜಾನಪದ ಗ್ರಾಮಿಣ ಭಾಗದಲ್ಲಿ ಹುಲಸಾಗಿ ಬೆಳೆದಿರುವ
ಸಾಹಿತ್ಯವಾಗಿದೆ. ಅಂದು ತಾಯಂದಿಯರು ತಮ್ಮ ಮಕ್ಕಳನ್ನು ಸಂತೈಸುವಾಗ ಸೊಗಸಾದ ಜಾನಪದಗಳನ್ನು ಹಾಡಿ
ಮಲಗಿಸುತ್ತಿದ್ದರು. ಇಂತಹ ಸಾಹಿತ್ಯ ಮತ್ತೆ ಬೆಳೆಸಬೇಕಾಗಿದೆ. ನಾಡು, ನುಡಿ, ಭಾಷೆ ಧಾರ್ಮಿಕತೆಗೆ ಯಾವತ್ತೂ ನನ್ನ ಸಹಾಯ ಸಹಕಾರವಿದೆ ಎಂದರು.

ಸಾಲೋಟಗಿ ಜಿಪಂ ಸದಸ್ಯ ಮತ್ತು ಕಜಾಪ ಕಾರ್ಯಾಧ್ಯಕ್ಷ ಶಿವಯೋಗೇಪ್ಪ ನೇದಲಗಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಬೇಕು. ಸಮ್ಮೇಳನ ಯಶಸ್ವಿಯಾಗಲು ಮೇಲಿಂದ ಮೇಲೆ ಸಭೆಗಳನ್ನು ನಡೆಸಬೇಕು. ಎಲ್ಲ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಿ ಜಾನಪದ ಮರು ಕುರುಹುಗಳನ್ನು ಮನ ಮುಟ್ಟುವಂತೆ ತಿಳಿ ಹೇಳಬೇಕು ಎಂದರು.

ಈ ಸಂದರ್ಭದಲ್ಲಿ ಕಜಾಪ ಅಧ್ಯಕ್ಷ ಆರ್‌.ವಿ. ಪಾಟೀಲ, ಗೌರವಾಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಕಾರ್ಯದರ್ಶಿ
ಸಿ.ಆರ್‌. ಮ್ಯಾಕೇರಿ, ಜಿಲ್ಲಾ ಸದಸ್ಯ ಎಂ.ಪಿ. ಭೈರಜಿ, ಆರ್‌.ಡಿ. ಕಂಡಾಳ, ಬಿ.ಐ. ಬಿರಾದಾರ, ಕೆ.ಎ. ತೆಲಸಂಗ,
ಎಸ್‌.ಎಸ್‌. ಈರನಕೇರಿ, ಆರ್‌.ಎಸ್‌. ಪಾಟೀಲ, ಎನ್‌.ಎ. ಬಿರಾದಾರ, ಎಂ.ಎಸ್‌. ಪಾಟೀಲ, ಎಸ್‌.ಬಿ.
ಜಮಾದಾರ, ಎನ್‌.ಎಲ್‌. ಹಚಡದ ಇದ್ದರು. 

ಟಾಪ್ ನ್ಯೂಸ್

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25protest

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

23goat

ವೈಜ್ಞಾನಿಕ ಆಡು ಸಾಕಾಣಿಕೆಗೆ ಸಲಹೆ

22white

ಹಂಪ್‌ಗೆ ಬಿಳಿ ಬಣ್ಣ ಬಳಿದು ಜಾಗೃತಿ

25sweets

ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಣೆ

24india

ವಿಶ್ವದಲ್ಲಿಯೇ ನಮ್ಮದು ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

sagara news

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.