ಶಾಸಕರಿಂದ ಪ್ರತಿಭಟನೆಯ ಹೈಡ್ರಾಮಾ: ಬಿಜೆಪಿ

Team Udayavani, Jan 22, 2022, 3:00 PM IST

20hydrama

ಇಂಡಿ: ನಮ್ಮ ಪಕ್ಷದ ಮುಖಂಡರು ಯಾವುದೇ ಸದಸ್ಯರನ್ನು ಅಪಹರಣ ಮಾಡಿಲ್ಲ. ಸ್ಥಳೀಯ ಶಾಸಕರೇ ನಮ್ಮ ಸದಸ್ಯರನ್ನು ಒಂದು ತಿಂಗಳಿನಿಂದ ನಮ್ಮ ಸಂಪರ್ಕಕ್ಕೆ ಬರದಂತೆ ನೋಡಿಕೊಂಡು, ಕೊನೆಗೆ ತಮ್ಮ ಕೆಲಸ ಆಗಲ್ಲ ಎಂದು ಗೊತ್ತಾದ ತಕ್ಷಣ ಮಿನಿ ವಿಧಾನಸೌದ ಮುಂದೆ ಪ್ರತಿಭಟನೆಯ ಹೈಡ್ರಾಮಾ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ನಾವು ನಮ್ಮ ಪಕ್ಷದ ಸದಸ್ಯ ಭೀಮನಗೌಡ ಪಾಟೀಲರ ಮನವೊಲಿಸಿ ಪಕ್ಷ ನಿಷ್ಠರಾಗಿರಿ, ನಿಮಗೆ ಕಾಂಗ್ರೆಸ್‌ ಪಕ್ಷದವರು ಟಿಕೆಟ್‌ ನೀಡದಿದ್ದಾಗ ನಾವು ಕರೆದು ಟಿಕೆಟ್‌ ನೀಡಿ ನಿಮ್ಮ ಮನೆತನಕ್ಕೆ ಗೌರವ ನೀಡಿದ್ದೇವೆ ಎಂದು ಅವರಿಗೆ ತಿಳುವಳಿಕೆ ಹೇಳಿ ಕರೆದುಕೊಂಡು ಬಂದಿದ್ದೇವೆ ಎಂದರು.

ಶಾಸಕರು ದಾದಾಗೌಡರ ಮನೆತನದ ಮೇಲೆ ವಿಶೇಷ ಕಾಳಜಿ ಇದೆ ಎಂದು ಹೇಳಿದ್ದಾರೆ. ಆದರೆ ಪುರಸಭೆ ಚುನಾವಣೆಯಲ್ಲಿ ಭೀಮನಗೌಡರಿಗೆ ಏಕೆ ಟಿಕೆಟ್‌ ನೀಡಲಿಲ್ಲ? ಸೋಲನ್ನು ಒಪ್ಪಿಕೊಳ್ಳದ ಶಾಸಕರು ಯಾರನ್ನೋ ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಅದನ್ನು ಒಪ್ಪಿಕೊಳ್ಳಬೇಕು ಎಂದರು.

ನಮ್ಮ ಸದಸ್ಯರು ಹೆಚ್ಚಿಗೆ ಇದ್ದರೂ ಸಹಿತ ಶಾಸಕರು ಪಕ್ಷೇತರ, ಜೆಡಿಎಸ್‌ ಹಾಗೂ ನಮ್ಮ ಪಕ್ಷದ ಓರ್ವ ಸದಸ್ಯರಿಗೂ ಪ್ರೀತಿ ವಿಶ್ವಾಸದಿಂದಲೋ, ಹಣದ ಆಮಿಷ ತೋರಿಸಿ ಅಧಿಕಾರ ಹಿಡಿದರು. ಆದರೆ ನಾವು ಯಾವುದಕ್ಕೂ ಪ್ರತಿಭಟನೆ ಮಾಡಲಿಲ್ಲ. ಬಿಜೆಪಿಯವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ. ಯಾರು ಗೂಂಡಾಗಿರಿ ಮಾಡುತ್ತಾರೆ, ಯಾರು ಹೆದರಿಸಿ ರಾಜಕಾರಣ ಮಾಡುತ್ತಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಶಿವಯೋಗೆಪ್ಪ ನೇದಲಗಿ, ಹನುಮಂತ್ರಾಯಗೌಡ ಪಾಟೀಲ, ಅನಿಲ ಜಮಾದಾರ, ರವಿ ವಗ್ಗೆ, ಯಲ್ಲಪ್ಪ ಹದರಿ, ರಾಜಶೇಖರ ಯರಗಲ್‌ ಇದ್ದರು.

ಟಾಪ್ ನ್ಯೂಸ್

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ಯೋಜನೆಗಳ ಮೇಲೆ ಮೋದಿ ಡ್ರೋನ್‌ ಕಣ್ಣು; ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ

ಯೋಜನೆಗಳ ಮೇಲೆ ಮೋದಿ ಡ್ರೋನ್‌ ಕಣ್ಣು; ಯೋಜನೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ

ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶ

ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsfdsf

ಈ ದೇಶ ಹಾಳಾಗಿದ್ದು ಜವಾಹರ್ ಲಾಲ್ ನೆಹರು ಅವರಿಂದಲೇ : ಯತ್ನಾಳ್

18demand

ವಿವಿಧ ಬೇಡಿಕೆ ಈಡೇರಿಕೆಗೆ ಬಿಸಿಯೂಟ ಕಾರ್ಮಿಕರ ಆಗ್ರಹ

17seller

ದೂರು ಬಂದರೆ ಮಾರಾಟಗಾರರ ಮೇಲೆ ಕ್ರಮ

eshwarappa

ಡಿಕೆಶಿ ವಿರುದ್ಧ ಚಾರ್ಜ್ ಶೀಟ್; ಕಾನೂನು ತನ್ನ ಕೆಲಸ ಮಾಡುತ್ತದೆ: ಈಶ್ವರಪ್ಪ

yatnal

ಬಿಜೆಪಿಗೆ ಡಿಕೆಶಿ ಅವರಂಥ ಕಳ್ಳರ ಅವಶ್ಯಕತೆ ಇಲ್ಲ: ಯತ್ನಾಳ್

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಇಂದಿನ ರಾಶಿಫಲ: ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಕಚ್ಚೇತೀವು ದ್ವೀಪ ಯಾರಿಗೆ? ಭಾರತ- ಶ್ರೀಲಂಕಾ ನಡುವೆ ಮುಗಿಯದ ವಿವಾದ

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.