Udayavni Special

ಕ್ವಾರಂಟೈನ್ ನಲ್ಲಿದ್ದವರಿಗೆ ಖಡಕ್‌ ರೊಟ್ಟಿ ಊಟ

ಶಾಸಕರ ಪತ್ನಿ ಮಹಾದೇವಿಯವರಿಂದ ವಿನೂತನ ಕಾರ್ಯ  ಕ್ವಾರಂಟೈನ್‌ ಕೇಂದ್ರಗಳಿಗೆ ವಿತರಿಸಲು 1.5 ಲಕ್ಷ ರೊಟ್ಟಿ

Team Udayavani, May 20, 2020, 12:10 PM IST

20-April-05

ಮುದ್ದೇಬಿಹಾಳ: ಸಿದ್ಧಗೊಂಡ ರೊಟ್ಟಿಗಳನ್ನು ಪರಿಶೀಲಿಸಿದ ಮಹಾದೇವಿ ಪಾಟೀಲ.(ನಡಹಳ್ಳಿ)

ಮುದ್ದೇಬಿಹಾಳ: ತಾಲೂಕಿನ ಒಟ್ಟು 30 ಸಾಂಸ್ಥಿಕ ಕ್ವಾರೆಂಟೈನ್‌ ಕೇಂದ್ರಗಳಲ್ಲಿ ಬಿಡಾರ ಹೂಡಿರುವ 2500ಕ್ಕೂ ಹೆಚ್ಚು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ ರಾಜ್ಯಗಳಿಂದ ಮರಳಿ ಬಂದಿರುವ ವಲಸೆ ಕೂಲಿಕಾರ್ಮಿಕರ ಹಸಿವು ತಣಿಸಲು 1.50 ಲಕ್ಷ ಜೋಳದ ರೊಟ್ಟಿಗಳು ಬಸರಕೋಡದ ಶ್ರೀ ಪವಾಡಬಸವೇಶ್ವರ ದೇವಸ್ಥಾನದ ಅಡುಗೆಮನೆಯಲ್ಲಿ ಭರದಿಂದ ಸಿದ್ದಗೊಳ್ಳುತ್ತಿವೆ.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಅವರ ಪತ್ನಿ ಮಹಾದೇವಿ ಪಾಟೀಲ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಯೋಜನೆ ಜಾರಿಗೊಳಿಸಲು ನಿತ್ಯ 30 ಮಹಿಳೆಯರು ರೊಟ್ಟಿ ತಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಮಹಾದೇವಿ ಅವರು ಮೇಲಿಂದ ಮೇಲೆ ಸ್ಥಳಕ್ಕೆ ಭೇಟಿ ನೀಡಿ ರೊಟ್ಟಿಯ ಗುಣಮಟ್ಟದ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ಕೊಡುತ್ತಿದ್ದಾರೆ. 2-3 ದಿನಗಳಲ್ಲಿ ರೊಟ್ಟಿಗಳು ಸಿದ್ಧಗೊಂಡು ಎಲ್ಲ ಕೇಂದ್ರಗಳಿಗೆ ತಲುಪಿಸಲು ಶಾಸಕರು ತಂಡವೊಂದನ್ನು ಈಗಾಗಲೇ ರಚಿಸಿದ್ದು ಅದು ಕ್ರಿಯಾಶೀಲವಾಗಿ ಕೆಲಸ ಮಾಡತೊಡಗಿದೆ.

ರೊಟ್ಟಿಗೆ ಮಹತ್ವ ಏಕೆ?: ದಕ್ಷಿಣ ಕರ್ನಾಟಕದಲ್ಲಿ ರಾಗಿಗೆ ಎಷ್ಟು ಮಹತ್ವ ಇದೆಯೋ ಅಷ್ಟು ಮಹತ್ವ ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಇದೆ. ಇದರ ಹಿಟ್ಟಿನಿಂದ ತಯಾರಿಸಿದ ರೊಟ್ಟಿಗಳನ್ನು ಇಲ್ಲಿನ ಜನ ನಿತ್ಯವೂ ಸೇವಿಸುತ್ತಾರೆ. ಬೇರೆ ರಾಜ್ಯಗಳಿಗೆ ದುಡಿಯಲು ವಲಸೆ ಹೋಗುವ ಇಲ್ಲಿನ ಕೂಲಿ ಕಾರ್ಮಿಕರು ತಮ್ಮ ಜೊತೆ 4 ತಿಂಗಳಿಗೆ ಆಗುವಷ್ಟು ಜೋಳ, ಜೋಳದ ಹಿಟ್ಟನ್ನೂ ಜೊತೆಗೊಯ್ಯುವುದು ಇದರ ಮಹತ್ವ ಸಾರಿ ಹೇಳುತ್ತವೆ.

ಕ್ವಾರೆಂಟೈನ್‌ ಕೇಂದ್ರಗಳಲ್ಲಿರುವ ಜನರಿಗೆ ಸರ್ಕಾರದ ವತಿಯಿಂದ ಅನ್ನ ಸಾಂಬಾರ್‌, ಪಲಾವ್‌ ಕೆಲ ಸಂದರ್ಭ ಗೋಧಿ  ಹಿಟ್ಟಿನ ಚಪಾತಿ ನೀಡಲಾಗುತ್ತಿದೆ. ಕೆಲ ಕೇಂದ್ರಗಳಲ್ಲಿ ಅಡುಗೆ ಸಾಮಗ್ರಿ ಪೂರೈಸಿ ಅಲ್ಲೇ ಅಡುಗೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಜೋಳದ ರೊಟ್ಟಿ ಕೊಡುವುದು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿದ ಶಾಸಕರು ಮತ್ತು ಅವರ ಪತ್ನಿ ಈ ವಿನೂತನ ಕಾರ್ಯಕ್ಕೆ ಕೈ ಹಾಕಿ ನಮ್ಮ ಜನರಿಗೆ ಜೋಳದ ರೊಟ್ಟಿಯ ರುಚಿ ತೋರಿಸಲು ಸಿದ್ದರಾಗಿದ್ದಾರೆ.

ನಾವು ಕ್ವಾರೆಂಟೈನ್‌ ಕೇಂದ್ರಗಳಿಗೆ ಹೋದಾಗ ನಮ್ಮ ಜನರು ರೊಟ್ಟಿ ಕೊಡುವಂತೆ ಮನವಿ ಮಾಡಿದ್ದರು. ರೊಟ್ಟಿಯ ಮಹತ್ವ ಗೊತ್ತಿದ್ದ ನಾವು ಇದಕ್ಕೆ ಒಪ್ಪಿ ಸಿದ್ದತೆ ನಡೆಸುತ್ತಿದ್ದೇವೆ. ರೊಟ್ಟಿಯಲ್ಲಿ ಅರಿಷಿಣಪುಡಿ ಸೇರಿಸಿದ್ದು, ಅದಿನ್ನೂ ಹೆಚ್ಚು ಪೌಷ್ಠಿಕ ಆಹಾರವಾಗಲಿದೆ. ಜನರು ಕ್ವಾರೆಂಟೈನ್‌ ಅವಧಿ ಮುಗಿಸುವವರೆಗೂ ರೊಟ್ಟಿ ಕೊಡುವ ಯೋಜನೆ ಇದೆ.
ಮಹಾದೇವಿ ಪಾಟೀಲ ನಡಹಳ್ಳಿ,
ರೊಟ್ಟಿ ಹಂಚಿಕೆಯ ರೂವಾರಿ

ಡಿ. ಬಿ. ವಡವಡಗಿ

ಟಾಪ್ ನ್ಯೂಸ್

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಇನ್‌ವೆಸ್ಟ್‌ ಕರ್ನಾಟಕ: 10 ಲಕ್ಷ ಕೋ.ರೂ. ಹೂಡಿಕೆ ನಿರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muddebihala news

ಚನ್ನವೀರ ದೇವರು ಅವರಿಗೆ ಗೌರವ ಡಾಕ್ಟರೇಟ್

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

23

ವಿದ್ಯುತ್ ಕೊಡದಿದ್ದರೆ ಕ್ರಿಮಿನಾಶಕ ಸೇವಿಸಿ ಕಚೇರಿ ಎದುರು ಆತ್ಮಹತ್ಯೆ

21

ಶರಣರು, ಸಂತರು, ಮಹಾತ್ಮರ ನುಡಿಗಳಲ್ಲಿರಲಿ ವಿಶ್ವಾಸ: ಪಾಟೀಲ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

3

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಭಕ್ತ, ಕಳವು, udayavanipaper, kannadanews,

ಭಕ್ತರ ಸೋಗಿನಲ್ಲಿ ತೆರಳಿ ಕಳವು

2

ಜೈ ಜವಾನ್‌-ಜೈ ಕಿಸಾನ್‌, ಜೈ ಪೊಲೀಸ್‌

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.