ಮಕ್ಕಳಿಗೆ ಶಿಕ್ಷಣ ನೀಡಿ ಕೃಷಿಯಲ್ಲಿ ತೊಡಗಿಸಲು ನಾಗರಾಳ ಸಲಹೆ


Team Udayavani, Aug 8, 2017, 3:25 PM IST

08-BJP-2.jpg

ಆಲಮಟ್ಟಿ: ಯುವಕರ ನಡೆ ಕೃಷಿ ಕಡೆಗೆ ಎನ್ನುವ ಶಿಕ್ಷಣ ಅತಿ ಅವಶ್ಯವಾಗಿದೆ ಎಂದು ಕೃಷಿ ಪಂಡಿತ ಡಾ| ಮಲ್ಲಣ್ಣ ನಾಗರಾಳ ಹೇಳಿದರು.

ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಸ್ಥಳೀಯ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆದ ಮುತ್ತೆದೆಯರಿಗೆ ಉಡಿ ತುಂಬುವ, ಸುಮಂಗಲೆಯರಿಂದ ಕುಂಭಮೇಳ ಹಾಗೂ ಕೃಷ್ಣೆಯ ಜಲನಿಧಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ಮಣ್ಣು ಹಾಗೂ ನೀರು ಬಳಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಈಗಿನ ಶಿಕ್ಷಣ ಎಂದರೆ ಪ್ರಮಾಣ ಪತ್ರಗಳನ್ನು ಪಡೆಯುವುದಾಗಿದೆ. ಆದರೆ ಕೃಷಿ ಎಂದರೆ ಜೀವನ ಕೊಡುವ ಉದ್ಯೋಗವಾಗಿದೆ. ಆದ್ದರಿಂದ ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉಳಿದ ಉದ್ಯೋಗಗಳಿಗೆ ಹಚ್ಚದೇ ಕೃಷಿಯೆಡೆಗೆ ಸೆಳೆಯುವುದರಿಂದ ಉತ್ತಮ ಆರೋಗ್ಯ
ಕಾಪಾಡಿಕೊಳ್ಳುವುದರೊಂದಿಗೆ ಜಗತ್ತಿಗೆ ಅನ್ನ ನೀಡಿದ ಕೀರ್ತಿ ಅವರದಾಗುತ್ತದೆ ಎಂದರು. ರೈತರು ಮುಖ್ಯವಾಗಿ ತಮ್ಮ ಜಮೀನುಗಳನ್ನು ಸಮತಟ್ಟು ಮಾಡಿಕೊಂಡು ಅದರಲ್ಲಿರುವ ಕರಕಿ, ಕನೈದಿಲೆ, ಮುಳ್ಳು ಕಂಟಿಗಳನ್ನು ಬೆಳೆಯದಂತೆ ನೋಡಿಕೊಳ್ಳಬೇಕು. ಕರಕಿ ಹೊಲಾ ಸರ್ಕಾರದ ಸಾಲ ಕನಗ್ಯಾನ ಬೇರ ಪರಕೀಯರ ಜಾಲದಿಂದ ಪಾರಾಗಬೇಕಾದ್ರ ಮೊದಲು ಮಳೆ ನೀರನ್ನು ತಮ್ಮ ಜಮೀನುಗಳಲ್ಲಿ ಅಗತ್ಯದ ಪ್ರಮಾಣದಲ್ಲಿ ನೀರು ತಡೆಗಟ್ಟಬೇಕು. ಇದರಿಂದ ಒಂದು ಎಕರೆ ಜಮೀನಿನಲ್ಲಿ ಒಂದು ಗಂಟೆಗೆ ಒಂದು ಅಂಗುಲ (ಇಂಚ್‌) ಮಳೆ ಸುರಿದರೆ 3,630 ಘನ ಮೀ. ನೀರು ಸಂಗ್ರಹವಾಗುತ್ತದೆ. ಇದನ್ನು ಹರಿಯಲು ಬಿಟ್ಟರೆ ಒಂದು ಎಕರೆಯಲ್ಲಿ ಸಂಗ್ರಹವಾಗುವ ಫಲವತ್ತಾದ ಮಣ್ಣಿನಲ್ಲಿ ಒಂದು ಸೆಕೆಂಡಿಗೆ 95 ಗ್ಯಾಲನ್‌ ನೀರು ಹಾಗೂ 200 ಎತ್ತಿನ ಬಂಡಿಯಷ್ಟು ಮಣ್ಣು ಹರಿದುಕೊಂಡು ಹೋಗುತ್ತದೆ. ಇದರಿಂದ ಮೇಲ್ಪದರದಲ್ಲಿರುವ ಉತ್ತಮ ಮಣ್ಣು ಹರಿದು ಹೋಗುವುದರಿಂದ ರೈತರಿಗೆ ಬೆಳೆ ಬಾರದೆ ಹಾನಿಯಾಗುತ್ತದೆ ಎಂದರು.

ಜಾಗತೀಕರಣದ ಫಲವಾಗಿ ವಿಜ್ಞಾನ ಹಾಗೂ  ತ್ರಜ್ಞಾನಗಳು ಹೆಚ್ಚಾಗಿದ್ದರೂ ಕೂಡ ಯಾರಿಂದಲೂ ಕೂಡ ಮಣ್ಣು ಹಾಗೂ ನೀರನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ, ಮನುಷ್ಯನ ದೇಹದಲ್ಲಿರುವ ಒಂದು ಹನಿ ರಕ್ತ ಸ್ರಾವವಾದರೆ ಅದನ್ನು ಸರಿಪಡಿಸಲು ಹಣ್ಣು ಹಾಗೂ ಉತ್ತಮ ಆಹಾರ ಸೇವನೆಯಿಂದ ಕೆಲ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. ಆದರೆ ಒಂದು ಅಂಗುಲ ಮಣ್ಣು ಉತ್ಪತ್ತಿಯಾಗಲು ಒಂದು ಸಾವಿರ ವರ್ಷಗಳೇ ಗತಿಸುತ್ತವೆ. ರೈತರು ಮಣ್ಣು ಹಾಗೂ ನೀರು ಹಾಳಾಗದಂತೆ ಕಾಪಾಡಿಕೊಳ್ಳಲು ಮನೆಯಲ್ಲಿ ಜಾನುವಾರುಗಳ ಸಾಕಣೆಯೂ ಕೂಡ ಅತಿ ಮಹತ್ವದ್ದಾಗಿದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದರಿಂದ ಕಾರ್ಬನ್‌ ಡೈ ಆಕ್ಸೈಡ್‌, ಮೋನಾಕ್ಸೈಡ್‌ ಗಳಂತಹ ಪರಿಸರಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿಯಾಗುತ್ತದೆ. ಇದು ಎಲ್ಲ ಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತದೆ. ಪ್ರತಿಯೊಬ್ಬರೂ ಕೂಡ ಮನೆ ಹಾಗೂ ಹೊಲಗಳಲ್ಲಿ ಗಿಡ ಮರ ಬೆಳೆಸುವುದರೊಂದಿಗೆ ಹೂ, ಕಾಯಿ, ಹಣ್ಣು, ಪೀಠೊಪಕರಣಗಳ ತಯಾರಿಕೆ, ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣ, ಉರುವಲು ಸೌದೆಗಳನ್ನು ಕೊಡುವುದರೊಂದಿಗೆ ಆಮ್ಲಜನಕವನ್ನೂ ನೀಡುತ್ತವೆ. ಇದರಿಂದ ಎಲ್ಲ ಜೀವಸಂಕುಲ ರಕ್ಷಿಸಿಕೊಳ್ಳಬಹುದಾಗಿದೆ ಎಂದರು.

ಕೃಷಿಯಲ್ಲಿ ರಾಸಾಯನಿಕ ಹಾಗೂ ಯಂತ್ರೋಪಕರಣ ಬಳಸದೇ ನಮ್ಮ ಹಿರಿಯರು ನೂರು ವರ್ಷಗಳ ಕಾಲ ಬದುಕಲು ಸಾಧ್ಯವಾಗಿದ್ದು ಪಂಚಭೂತ ತತ್ವಗಳ ಆಧಾರದಲ್ಲಿ ಬೆಳೆ ಬೆಳೆಯುತ್ತಿರುವುದರ ಪರಿಣಾಮವೇ ಹೊರತು ಬೇರೇನೂ ಅಲ್ಲ. ಆದ್ದರಿಂದ ಶಿಕ್ಷಣವೆಂದರೆ ಕೇವಲ ವೈದ್ಯರು, ತಾಂತ್ರಿಕ ಅಭಿಯಂತರುಗಳಾಗಬಾರದು. ವಿದ್ಯಾರ್ಥಿಗಳಾದಿಯಾಗಿ ಸಮಯ ವ್ಯರ್ಥವಾಗಿ ಕಳೆಯದೇ ಕೃಷಿಯಲ್ಲಿ ತೊಡಗಿಕೊಂಡರೆ ಅದರಲ್ಲಿರುವ ಸಂತೋಷ, ಆನಂದ, ನೆಮ್ಮದಿ ಆರೋಗ್ಯ, ಮಾನಸಿಕ ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿದರು. ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಉದ್ಘಾಟಿಸಿದರು. ನಿಡಗುಂದಿ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಬಿ.ಎನ್‌. ಗುಣದಾಳ, ಅರವಿಂದ ಕೊಪ್ಪ, ಮಹಾಂತೇಶ ಪಟ್ಟಣದ, ಲಕ್ಷ್ಮೀ ದೇಸಾಯಿ, ಎಸ್‌.ಎಸ್‌. ಖಾದ್ರಿ ಇನಾಮದಾರ, ಮಹಾಂತೇಶ ಸಾಲಿಮಠ, ಶಿವಲಿಂಗ ಕೂಡಗಿ ಇದ್ದರು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.