ದೇಶ ದ್ರೋಹಿಗಳಿಗೆ ಇನ್ನು ಜೈಲಿಲ್ಲ, ನೇರವಾಗಿ ಗುಂಡೇಟು: ಯತ್ನಾಳ್ ಎಚ್ಚರಿಕೆ

Team Udayavani, Feb 25, 2020, 2:53 PM IST

ವಿಜಯಪುರ: ದೇಶದ್ರೋಹಿ ಕೃತ್ಯ ಎಸಗುವ, ಪಾಕ್ ಪರ ಘೋಷಣೆ ಕೂಗುವ, ಫೇಸಬುಕ್ ಪೋಸ್ಟ್ ಹಾಕುವ ದೇಶದ್ರೋಹಿಗಳಿಗೆ ಗುಂಡೇಟು ಬೀಳುತ್ತವೆ ಹುಷಾರ್ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ಧಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ಕೆಲಸದಲ್ಲಿ ತೊಡಗುವವರಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ, ಗುಂಡಿಟ್ಟು ನೇರವಾಗಿ ಮೇಲಿರುವ ಜನ್ನತ್ತಿಗೆ ಕಳಿಸಲಾಗುತ್ತದೆ ಎಂದು ಹರಿಹಾಯ್ದರು.

ದೇಶದಲ್ಲಿ ಪಾಕ್ ಪರ ಘೋಷಣೆ ಕೂಗುವ ವ್ಯಕ್ತಿಗಳನ್ನು ಸಮರ್ಥಿಸುವಂತೆ ಹೇಳಿಕೆ ನೀಡುತ್ತಿರುವ ಎಚ್. ಎಸ್ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್ ಏಜೆಂಟ್ ಎಂದು ಟೀಕಾ ಪ್ರಹಾರ ನಡೆಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೋದಿ, ಅಮಿತ್ ಶಾ ಪಾಲ್ಗೊಂಡಿದ್ದಾರೆಯೇ ಎಂದು ಪ್ರಶ್ನಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಯತ್ನಾಳ, ಸೋನಿಯಾ ಗಾಂಧಿ, ಸಿದ್ಧರಾಮಯ್ಯ ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರೆ? ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ನೇತಾಜಿ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿ ಆಗಿದ್ದರೆ ಪಾಕ್ ಎಂಬ ಅಕ್ರಮ ಸಂತಾನ ಹುಟ್ಟುತ್ತಲೇ ಇರಲಿಲ್ಲ. ತಮ್ಮ ಮಗನನ್ನು ಪ್ರಧಾನಿ‌ ಮಾಡುವ ಮೋತಿಲಾಲ್ ನೆಹರು ಸ್ವಾರ್ಥಕ್ಕಾಗಿ ಪಾಕ್ ಎಂಬ ಬಚ್ಚಾ ಹುಟ್ಟಿಕೊಂಡಿತು ಎಂದು ಟೀಕಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ