ಕಣ್ಣೀರು ಹಾಕುವ ಸಿಎಂ ಬೇಡ, ಕಣ್ಣೀರೊರೆಸುವ ಸಿಎಂ ಬೇಕು

Team Udayavani, Mar 10, 2019, 9:45 AM IST

ವಿಜಯಪುರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಕಣ್ಣೀರು ಸುರಿಸಿಕೊಂಡು ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಪ್ರಸಕ್ತ ಸಂದರ್ಭದಲ್ಲಿ ನಮಗೆ ಕಣ್ಣೀರು ಸುರಿಸುವ ಸಿಎಂಗಿಂತ ಕಣ್ಣೀರು ಒರೆಸುವ ಸಿಎಂ ಬೇಕಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಅವರು ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ನಗರದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲೆಯ ಶಕ್ತಿ ಕೇಂದ್ರಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಬಿಜೆಪಿ ಸದಾ ಮಹಿಳೆಯರನ್ನು ಗೌರವಿಸುವ ಪಕ್ಷವಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ದೇಶದಲ್ಲಿ ರಕ್ಷಣೆ ಹೊಣೆಯನ್ನೇಧೀರ ಮಹಿಳೆ ನಿರ್ಮಲಾ ಸೀತಾರಾಮನ್‌ ಅವರಿಗೆ ನೀಡುವ ಮೂಲಕ ಮಹಿಳೆಗೆ ಆಕೆಯ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಮಹಿಳೆಯರ ಸ್ಥಾನಮಾನ ಹೇಗಿದೆ, ಅವರ ವರ್ತನೆ ಹೇಗಿದೆ ಎಂಬುದು ದೇಶದ ಜನರಿಗೆಲ್ಲ ಗೊತ್ತಿದೆ ಎಂದರು.

ಇದಲ್ಲದೇ ಮೋದಿ ಸರ್ಕಾರ ಭೇಟಿ ಬಚಾವೋ ಭೇಟಿ ಪಡಾವೋ, ಬಾಲ್ಯ ವಿವಾಹ ನಿರ್ಬಂಧ, ಕೌಟುಂಬಿಕ ದೌರ್ಜನ್ಯಕ್ಕೆ ಅಪರಾಧ ಕಾನೂನಿನ ಪರಿಹಾರ, ದೀನದಯಾಳ್‌ ಪುನರ್ವಸತಿ ಯೋಜನೆ ಸೇರಿದಂತೆ ಮಹಿಳೆಯರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ಸಮರ್ಥವಾಗಿ ರೂಪಿಸಿ, ಅನುಷ್ಠಾನ ಮಾಡಿದೆ ಎಂದರು. 

ಇದಲ್ಲದೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 5 ವರ್ಷಗಳಲ್ಲಿ ದೇಶವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ. ದೇಶದ ಕಟ್ಟಕಡೆ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ಹಲವು ಯೋಜನೆ ರೂಪಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಮಾಡಿದ್ದಾರೆ ಎಂದರು.

ಕೇಂದ್ರ ಕುಡಿವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ಜಿಲ್ಲೆಯ ಕುಡಿವ ನೀರಿನ ಅಮೃತ ಯೋಜನೆ ಅನುಷ್ಠಾನಕ್ಕೆ 110 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಪಾಸ್‌ಫೋರ್ಟ್‌ ಸೇವಾ ಕೇಂದ್ರ ಸ್ಥಾಪನೆ, ರಾಷ್ಟ್ರೀಯ ಹೆದ್ದಾರಿ 218ರ ಅಗಲೀಕರಣ,
ನಗರದ ರೈಲ್ವೇ ನಿಲ್ದಾಣ ನವೀಕರಣ ಸೇರಿದಂತೆ ಹಲವು ಯೋಜನೆಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪರಿಶ್ರಮದಿಂದ ದುಡಿದಿದ್ದೇನೆ ಎಂದರು. 

ಕನ್ನಡಿಗರಿಗೆ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಮೋದಿ ಸರ್ಕಾರ ಅವಕಾಶ ಕಲ್ಪಿಸುವ ಮೂಲಕ ಪ್ರಾದೇಶಿಕ ಭಾಷೆಗೆ ವಿಶೇಷ ಗೌರವ ನೀಡಿದೆ. ಸ್ವತ್ಛ ಭಾರತ ಗ್ರಾಮೀಣ ಯೋಜನೆ ಆರಂಭಿಸಿ ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸುವ ಮೂಲಕ ದೇಶದಲ್ಲಿ ಸ್ವತ್ಛತೆಯ ಅಭಿಯಾನ ನಡೆಸಿ ಜನಮನ್ನಣೆ ಗಳಿಸಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿದರು. ಪಕ್ಷದ ಮುಖಂಡರಾದ ವಿಜುಗೌಡ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಕಲಾವತಿ, ಶಕುಂತಲಾ, ವಿಜಯಲಕ್ಷ್ಮೀ ಹಮೀದಖಾನೆ, ಅನುರಾಧಾ ಕಲಾಲ್‌, ಗೀತಾ ಕುಗನೂರ, ಭಾರತಿ ಭುಯ್ನಾರ, ರಜನಿ ಸಂಬಣ್ಣಿ, ಶಾಂತಾ ಉತ್ಲಾಸ್ಕರ್‌, ಗುರುದೇವಿ, ಶಾರದಾ, ಪಾರ್ವತಿ, ಸಾವಿತ್ರಿ, ವಾಣಿ, ಕವಿತಾ, ರೇಣುಕಾ ಬಿಜೆಪಿಯ ಹಲವಾರು ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು. ಸಂಕಲ್ಪ ಪಾಟೀಲ ಸ್ವಾಗತಿಸಿದರು. ಸುಮಂಗಲಾ ಕೋಟಿ ನೀರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ