ಹಳ್ಳಿಗರಿಗೆ ಖಾಸಗಿ ವಾಹನಗಳೇ ಗತಿ

ಸಿಬ್ಬಂದಿ ಕೊರತೆಯಿಂದ ಹತ್ತು ಸಾರಿಗೆ ಮಾರ್ಗ ಸ್ಥಗಿತ

Team Udayavani, Oct 13, 2020, 5:22 PM IST

ಹಳ್ಳಿಗರಿಗೆ ಖಾಸಗಿ ವಾಹನಗಳೇ ಗತಿ

ಸಿಂದಗಿ: ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ತಾಲೂಕಿನ ಸುಮಾರು ಆರು ಗ್ರಾಮಾಂತರ ಪ್ರದೇಶಗಳ ಹೋಗುವ ಸಾರಿಗೆ ವ್ಯವಸ್ಥೆಯ 10 ಅನುಸೂಚಿಗಳು (ಬಸ್‌ ಮಾರ್ಗ) ಪುನರಾರಂಭವಾಗದೆ ಸ್ಥಳೀಯರು ಖಾಸಗಿ ವಾಹನಗಳಲ್ಲಿಯೇ ತಾಲೂಕು ಕೇಂದ್ರಕ್ಕೆ ಓಡಾಡುವಂತಾಗಿದೆ.

ಲಾಕ್‌ಡೌನ್‌ ತೆರವುಗೊಂಡರೂ ಬಸ್‌ ಡಿಪೊದಿಂದ ಬಿಡುತ್ತಿದ್ದ ಆಲಮೇಲ-ಕುಮಸಗಿ, ಬಳಗಾನೂರ, ಹರನಾಳ, ಓತಿಹಾಳ, ಸೋಮಜಾಳ ಊರುಗಳಿಗೆ ಹೋಗುವ ಹೋಗುವ ಸಾರಿಗೆ ವ್ಯವಸ್ಥೆಯ 10 ಅನುಸೂಚಿಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಈ ಭಾಗದ ಜನರು ಬೈಕ್‌, ಕಾರು, ಆಟೊ, ಲಗೇಜ್‌ ವಾಹನಗಳಲ್ಲಿ ತಮ್ಮ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ದೇಶದಲ್ಲಿ ಕೋವಿಡ್  ಸೋಂಕಿನ ವಿರುದ್ಧ ಹೋರಾಡಲು ದೇಶದಲ್ಲಿ ಲಾಕ್‌ ಡೌನ್‌ ಮಾಡಲಾಯಿತು. ಲಾಕ್‌ ಡೌನ್‌ ಮುಂಚೆ ಈಶಾನ್ಯ ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ಸಿಂದಗಿ ಘಟಕದಿಂದ 99 ಅನುಸೂಚಿಗಳು ಕಾರ್ಯಾಚರಣೆಯಲ್ಲಿದ್ದವು. ಆಗ ತಾಲೂಕಿನ ಜನತೆಗೆ ತಾಲೂಕಿನಲ್ಲಿ ಸಂಚಾರ ಮಾಡಲಿಕ್ಕೆ ಅನುಕೂಲವಾಗಿತ್ತು. ಆದರೆ ಲಾಕ್‌ ಡೌನ್‌ ನಂತರ 99 ಅನುಸೂಚಿಗಳಲ್ಲಿ 89 ಅನುಸೂಚಿಗಳ ಕಾರ್ಯಾಚರಣೆ ಶುರುವಾಗಿದೆ.

ಆಲಮೇಲದಿಂದ ಕುಮಸಗಿ, ಬಳಗಾನೂರ, ಹರನಾಳ, ಓತಿಹಾಳ ಹಾಗೂ ಸೊಮಜಾಳ ಸೇರಿದಂತೆ ರತ್ನಾಗಿರಿ ಮತ್ತು ವಿಜಯಪುರದ ಹೆಚ್ಚಿನ ಅನುಸೂಚಿಗಳು ಹೀಗೆ ಒಟ್ಟು 10 ಅನುಸೂಚಿಗಳ ಕಾರ್ಯಾಚರಣೆಪುನರಾರಂಭವಾಗಿಲ್ಲ. ಪ್ರಯಾಣಿರಿಗೆ ತೊಂದರೆಯಾಗಬಾರದು ಎಂದು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.ಸಿಂದಗಿ ಸಾರಿಗೆ ಸಂಸ್ಥೆಯ ಘಟಕದಲ್ಲಿ107 ಬಸ್‌ಗಳಿವೆ. ಅವುಗಳಲ್ಲಿ ಎರಡು ರಾಜಹಂಸ ಬಸ್‌ಗಳಿವೆ.

79 ಚಾಲಕರು, 49 ನಿರ್ವಾಹಕರು,218 ಜನ ಚಾಲಕ ಕಂ ನಿರ್ವಾಹಕರುಇದ್ದಾರೆ. ಎಲ್ಲ ಅನುಸೂಚಿಗಳಿಗೆ ಬಸ್‌ ಚಾಲನೆ ಮಾಡಬೇಕಾದರೆ ಇನ್ನೂ 13 ಚಾಲಕರು ಹಾಗೂ 13 ನಿರ್ವಾಹಕರುಬೇಕು. ಘಟಕದಲ್ಲಿ ವರ್ಕ್‌ಶಾಪ್‌ನಲ್ಲಿ 52 ಮೆಕ್ಯಾನಿಕ್‌ ಕೆಲಸಗಾರರು ಇದ್ದಾರೆ. ಆದರೆ ಇನ್ನೂ 78 ಜನ ಮೆಕ್ಯಾನಿಕ್‌ ಕೆಲಸಗಾರರು ಅವಶ್ಯಕತೆಯಿದೆ. ಹೀಗಾಗಿ ಸಿಂದಗಿ ಸಾರಿಗೆ ಸಂಸ್ಥೆ ಘಟಕದಲ್ಲಿ ಸಿಬ್ಬಂದಿ  ಕೊರತೆ ಎದ್ದು ಕಾಣುತ್ತಿದೆ.

ಕೋವಿಡ್‌-19 ನಂತರ ವಿಜಯಪುರ ವಿಭಾಗದಿಂದ ಹಂತ ಹಂತವಾಗಿ ಅನುಸೂಚಿಗಳು ಆರಂಭ ಮಾಡಲಾಗಿದೆ. 701 ಅನುಸೂಚಿಗಳಲ್ಲಿ 582 ಅನುಸೂಚಿಗಳನ್ನು ಪ್ರಾರಂಭಿಸಲಾಗಿದೆ. ಹೆಚ್ಚಿನ ಬೇಡಿಕೆಬಂದಲ್ಲಿ ಹೆಚ್ಚಗೆ ಅನುಸೂಚಿ ಆರಂಭಿಸಲಾಗುವುದು.ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಚಾಲಕ, ನಿರ್ವಾಹಕ ಹಾಗೂ ಸಂಚರಿಸುವ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಪ್ರತಿದಿನ ಬಸ್‌ಗಳಿಗೆ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿನ ಸಂಚಾರ ಸುರಕ್ಷಿತವಾಗಿದೆ. ನಾರಾಯಣಪ್ಪ ಕುರಬರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ

ಕೋವಿಡ್  ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರಿಗೆ ಸಂಸ್ಥೆಯಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಪ್ರತಿ ದಿನ ಬಸ್‌ಗಳಿಗೆ ಸ್ಯಾನಿಟೈಸ್‌ ಮಾಡಿ ವಾಶ್‌ ಮಾಡಲಾಗುತ್ತಿದೆ. ಆದರೂ ಪ್ರಯಾಣಿಕರ ಸಂಖ್ಯೆವಿರಳವಾಗಿದೆ. ಬಸ್‌ ಸಂಚಾರ ಬಂದ್‌ ಮಾಡಿದ ಹಳ್ಳಿಗಳಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂದು ಪರ್ಯಾಯವಾಗಿ ಬೇರೆ ಮಾರ್ಗದ ಬಸ್‌ಗಳನ್ನು ಆಯಾ ಹಳ್ಳಿಗಳ ಮುಖಾಂತರ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್‌.ಎಂ. ವಾಲೀಕಾರ, ಘಟಕ ವ್ಯವಸ್ಥಾಪಕರು, ಸಿಂದಗಿ

ವಿರಳವಾಗಿರುವುದರಿಂದ ಮತ್ತು ಕೋವಿಡ್   ಸೋಂಕಿನ ಹಾವಳಿ ಹೆಚ್ಚುತ್ತಿರುವುದರಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಾರಿಗೆ ಬಸ್‌ ಬದಲಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ಹಳ್ಳಿಗಳಿಗೆ ಹೋಗಲು ಸಾರಿಗೆ ಇಲಾಖೆ ನಿಗದಿತ ಸಮಯದಲ್ಲಿ ನಿಶ್ಚಿತವಾಗಿ ಬಸ್‌ ಓಡಿಸಲು ಮುಂದಾದರೆ ಪ್ರಯಾಣಿಸಲು ಜನರ ಮನಪೋಲಿಯಬಹುದು. ರಾಜೇಶ್ವರಿ ಪಾಟೀಲ, ಪಟ್ಟಣ ನಿವಾಸಿ, ಸಿಂದಗಿ

ಲಾಕ್‌ಡೌನ್‌ ನಂತರ ಸಾರಿಗೆ ಸಂಸ್ಥೆಯಿಂದ ಬಸ್‌ ಸಂಚಾರ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆಯವರು ಬಸ್‌ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡರೂ ಜನತೆ ಪ್ರಯಾಣಿಸಲು ಹಿಂದೆ ಮುಂದೆ ತುಳಿಯುತ್ತಿದ್ದಾರೆ. ಖಾಸಗಿ ವಾಹನ ಬಾಡಿಗೆ ಪಡೆದು ಪ್ರಯಾಣಿಸುತ್ತಿದ್ದಾರೆ. ನಾವು ನಮ್ಮ ಖಾಸಗಿ ವಾಹನಗಳಲ್ಲಿ ಸಾಕಷ್ಟು ಸುಕರಕ್ಷಿತ ಕ್ರಮ ಕೈಗೊಂಡಿದ್ದೇವೆ. ಬಾಡಿಗೆಗಳ ಸಂಖ್ಯೆ ಹೆಚ್ಚುತ್ತಿವೆ. ಸಂಜೀವ ಹೂಗಾರ, ಖಾಸಗಿ ವಾಹನ ಚಾಲಕ, ಸಿಂದಗಿ

 

-ರಮೇಶ ಪೂಜಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.