ನೌಕರರ ನೇಮಕಾತಿ ರದ್ದತಿಗೆ ಆಗ್ರಹ

Team Udayavani, Oct 14, 2018, 2:54 PM IST

ಮುದ್ದೇಬಿಹಾಳ: ಸ್ಥಳೀಯ ಸಹಕಾರಿ ಬ್ಯಾಂಕ್‌ ಹಿರಿಯ ನಿರ್ದೇಶಕರೇ ಬ್ಯಾಂಕ್‌ ನೌಕರರ ನೇಮಕಾತಿ ಸಮಿತಿ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಬಸ್‌ ನಿಲ್ದಾಣ ಎದುರು ಇರುವ ದಿ ಕರ್ನಾಟಕ ಕೋ ಆಪ್‌ ಬ್ಯಾಂಕ್‌ ಮುಂದೆ ಶನಿವಾರ ನಡೆದಿದೆ.

ಹಿರಿಯ ನಿರ್ದೇಶಕ ಹಾಗೂ ಪುರಸಭೆ ನೂತನ ಸದಸ್ಯ ಚನ್ನಪ್ಪ ಕಂಠಿ ಪ್ರತಿಭಟನೆ ನಡೆಸಿದವರಾಗಿದ್ದು ಸದ್ಯ ನಡೆಯುತ್ತಿರುವ ನೌಕರರ ನೇಮಕಾತಿ ರದ್ದುಪಡಿಸುವಂತೆ ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ
ಹಮ್ಮಿಕೊಂಡಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮಾರ್ಚ್‌ನಲ್ಲಿ ಬ್ಯಾಂಕಿನಲ್ಲಿ ಖಾಲಿ ಇರುವ 10 ಹುದ್ದೆಗಳಿಗೆ ನೌಕರರನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿತ್ತು. ಅರ್ಜಿ ಕರೆದ 6 ತಿಂಗಳಲ್ಲೇ ಆಯ್ಕೆ ಪ್ರಕ್ರಿಯೆ ಮುಗಿಸಬೇಕು ಎನ್ನುವ ನಿಯಮ ಮೀರಿ 8 ತಿಂಗಳಾದರೂ ಪ್ರಕ್ರಿಯೆ ಮುಗಿಸಿರಲಿಲ್ಲ. ನೌಕರರ ನೇಮಕಾತಿಗಾಗಿ ರಚಿಸಿದ್ದ ಸಮಿತಿಯಲ್ಲಿದ್ದ ಸದಸ್ಯ ವಿಜಯಪುರ ಡಿಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಸಿದ್ದಣ್ಣ ಬಿರಾದಾರ ಅವರ ಮಗ ಅರ್ಜಿ ಸಲ್ಲಿಸಿ ನಿಯಮ ಉಲ್ಲಂಘನೆ ಆಗಿದ್ದರೂ ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ. ಈ ಬಗ್ಗೆ ವಿಷಯ ಬಹಿರಂಗಗೊಂಡ ಮೇಲೆ ಸದಸ್ಯಸ್ಥಾನದಿಂದ ಸಿದ್ದಣ್ಣ ಅವರನ್ನು ಕಡಿಮೆ ಮಾಡಿದ ಕುರಿತು ಬ್ಯಾಂಕಿನ ನಿರ್ದೇಶಕರಿಗೆ ಮಾಹಿತಿಯನ್ನೂ ನೀಡಿರಲಿಲ್ಲ.

ಮೇಲಾಗಿ ಈ ಕುರಿತು ತಾವು ಸಲ್ಲಿಸಿದ್ದ ಲಿಖೀತ ಪತ್ರಕ್ಕೂ ನೇಮಕಾತಿ ಸಮಿತಿ ಕಾರ್ಯದರ್ಶಿ ಉತ್ತರ ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದರು ಎಂದು ಚನ್ನಪ್ಪ ಕಂಠಿ ತಿಳಿಸಿದರು. 

ನೌಕರರ ನೇಮಕಾತಿ ಪ್ರಕ್ರಿಯೆ ರದ್ದುಪಡಿಸುವ ಕುರಿತು ಸಹಕಾರ ಇಲಾಖೆ ನಿಬಂಧಕರು, ಉಪ ನಿಬಂಧಕರು, ಸಹಾಯಕ ನಿಬಂಧಕರು ಮತ್ತು ನೇಮಕಾತಿ ಸಮಿತಿ ಸದಸ್ಯ ಸಹಕಾರ ಸಂಘಗಳ ಉಪ ನಿಬಂಧಕ ಪಿ.ಬಿ. ಕಾಳಗಿ ಮತ್ತಿತರರಿಗೆ 1-10-2018ರಂದು ಲಿಖೀತ ಮನವಿ ಸಲ್ಲಿಸಿದ್ದೆ.

ಈವರೆಗೂ ಉತ್ತರ ನೀಡದ ಕಾರಣ ಅ. 13ರಂದು ಬ್ಯಾಂಕಿನ ಸಭಾ ಭವನದಲ್ಲಿ ನಡೆಯುವ ಸಂದರ್ಶನ ವೇಳೆ ಪ್ರತಿಭಟನೆ ನಡೆಸುವುದಾಗಿ ಅ. 12ರಂದೇ ನೇಮಕಾತಿ ಸಮಿತಿ ಕಾರ್ಯದರ್ಶಿಗೆ ಲಿಖೀತ ಮಾಹಿತಿ ನೀಡಿದ್ದೆ. ಅದರಂತೆ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. 

ನೇಮಕಾತಿ ಪ್ರಕ್ರಿಯೆಗಾಗಿ ನಡೆದ ಲಿಖೀತ ಪರೀಕ್ಷೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ಹಾಕಿಸಲಾಗಿದೆ. ಇಂಥವರಿಂದ 25-30 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಪಟ್ಟಣದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಮೊದಲು ಇಲ್ಲಿ ನೇಮಕಾತಿ ಆಮಿಷ ತೋರಿಸಿ ತಾತ್ಕಾಲಿಕವಾಗಿ ಕೆಲಸಕ್ಕಿಟ್ಟುಕೊಂಡಿದ್ದ ನೌಕರರನ್ನು ಕೈಬಿಡಲಾಗಿದೆ. ಇದರಿಂದ ಬ್ಯಾಂಕಿನ ನಿರ್ದೇಶಕರ ಮಾನ ಸಾರ್ವಜನಿಕವಾಗಿ ಹರಾಜಾದಂತಾಗಿದೆ. ಹೀಗಾಗಿ ನಿರ್ದೇಶಕರ ಮಾನ ಕಾಪಾಡಬೇಕು ಎನ್ನುವ ಕಳಕಳಿಯಿಂದ ಈ ಪ್ರತಿಭಟನೆ ನಡೆಸಬೇಕಾಯಿತು ಎಂದು ತಿಳಿಸಿದರು.

ಬ್ಯಾಂಕ್‌ ಎದುರು ನಡೆದ ಈ ಘಟನೆ ಹೆಚ್ಚಿನ ಜನರು ಸೇರುವಂತೆ ಮಾಡಿ ಸಂದರ್ಶನ ಪ್ರಕ್ರಿಯೆಗೆ ತೊಡಕಾಗುವ ಲಕ್ಷಣ ಕಂಡು ಬಂತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಜನರನ್ನು ನಿಯಂತ್ರಿಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ
ಆಗಮಿಸಿದ ಮಾಧ್ಯಮದವರನ್ನು ಬ್ಯಾಂಕಿನ ಒಳಗೆ ಬಿಡಲಿಲ್ಲ. ಈ ಬಗ್ಗೆ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದಾಗ ಮಣಿದ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್‌ ಅವರು ಈಗ ಸಂದರ್ಶನ ನಡೆಯುತ್ತಿದ್ದು ಅದು ಮುಗಿದ ಮೇಲೆ ನಾವೇ ಮಾಧ್ಯಮದವರನ್ನು ಕರೆಸಿ ಎಲ್ಲ ಮಾಹಿತಿ ನೀಡುತ್ತೇವೆ ಎಂದು ಮನವಿ ಮಾಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಇತ್ತೀಚಿನ ಫಾಸ್ಟ್‌ ಫ‌ುಡ್‌ ಕಾಲಘಟ್ಟದಲ್ಲಿ ದೇಹಕ್ಕೆ ಬೇಕಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ತೀರ ವಿರಳವೆಂಬಂತಾಗಿದೆ. ಮುಂದೆ ಬರಬಹುದಾದ ಸಮಸ್ಯೆಗಳಿಗೆ ಆಹ್ವಾನ...

  • ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ...

  • ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ...

  • ಮಂಗಳೂರು: ದೇಶದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಇ) ತೀವ್ರ ಸಂಕಷ್ಟಕ್ಕೊಳಗಾಗಿವೆ. ಅವುಗಳನ್ನು ಉಳಿಸಲು ಕೇಂದ್ರ ಮತ್ತು...

  • ಹೊಸದಿಲ್ಲಿ: ಶೂಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಇಬ್ಬರು ಶೂಟರ್‌ಗಳು ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ದಿಲ್ಲಿಯ ಕರ್ಣಿ...