Udayavni Special

ಹಲಸಂಗಿ ಗೆಳೆಯರ ಕೊಡುಗೆ ಅಪಾರ

ವಿಜೇತ ಹಿರಿಯ ಸಾಹಿತಿಗಳಿಗೆ 51 ಸಾವಿರ ರೂ. ನಗದು ಹಾಗೂ ಕಿರಿಯ ಸಾಹಿತಿಗಳಿಗೆ 25 ಸಾವಿರ ರೂ. ನಗದು

Team Udayavani, Jan 30, 2021, 5:29 PM IST

ಹಲಸಂಗಿ ಗೆಳೆಯರ ಕೊಡುಗೆ ಅಪಾರ

ವಿಜಯಪುರ: ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಭಾಗದ ಹಲಸಂಗಿ ಗೆಳೆಯರ ಹಾಗೂ ಪ್ರತಿಷ್ಠಾನದ ಕೊಡುಗೆ ಅಪಾರ. ಹಲಸಂಗಿ ಗೆಳೆಯರ ಬಳಗದ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದಿಂದ ಇನ್ನು ಅನೇಕ ಉತ್ತಮ ಕೆಲಸಗಳು ಆಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಶುಕ್ರವಾರ ನಗರದ ಜಿಪಂ ಸಭಾಭವನದಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನದ ವತಿಯಿಂದ 2019-20ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರತಿಷ್ಠಾನದಿಂದ ಜಿಲ್ಲೆಯ ಚಡಚಣ ಭಾಗದ ಅದ್ವಿತೀಯ ಸಾಹಿತ್ಯ ಸಾಧಕರನ್ನು ಪರಿಚಯಿಸುವ ಹಾಗೂ ಯುವಜನರಿಗೂ ಅವುಗಳನ್ನು ತಲುಪಿಸುವ ಮಹತ್ವದ
ಕಾರ್ಯವಾಗಬೇಕಿದೆ. ಪ್ರತಿಷ್ಠಾನ ಇನ್ನಷ್ಟು ಬೆಳೆಯಲಿ, ಅದಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು. 2019ನೇ ಸಾಲಿಗಾಗಿ ಬೆಳಗಾವಿಯ ಡಾ| ಜಿನದತ್ತ ದೇಸಾಯಿ, ಮೈಸೂರಿನ ವೈ.ಸಿ. ಭಾನುಮತಿ, ಮಂಡ್ಯದ ಡಾ| ರಾಮೇಗೌಡ, ಕದ್ರಾದ ಅಕ್ಷತಾ ಕೃಷ್ಣಮೂರ್ತಿ, 2020ನೇ ಸಾಲಿಗಾಗಿ ಕಾಂತಾವರದ ಡಾ.ನಾ. ಮೊಗಸಾಲೆ, ಧಾರವಾಡದ ಡಾ| ಗುರುಲಿಂಗ ಕಾಪ್ಸೆ, ಬಾಗಲಕೋಟೆ ಜಿಲ್ಲೆಯ ಬೀಳಗಿಯ ಶ್ರೀರಾಮ ಇಟ್ಟಣ್ಣವರ, ಧಾರವಾಡದ ಟಿ.ಎಸ್‌. ಗೊರವರ ಅವರಿಗೆ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜೇತ ಹಿರಿಯ ಸಾಹಿತಿಗಳಿಗೆ 51 ಸಾವಿರ ರೂ. ನಗದು ಹಾಗೂ ಕಿರಿಯ ಸಾಹಿತಿಗಳಿಗೆ 25 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಫಲಕ ವಿತರಿಸಲಾಯಿತು.

ವಿಶ್ರಾಂತ ಪೊಲೀಸ್‌ ಮಹಾ ನಿರ್ದೇಶಕ ಶಂಕರ ಬಿದರಿ, ಬೆಂಗಳೂರು, ವಿಶ್ರಾಂತ ಕುಲಪತಿ ಮಲ್ಲೇಪುರಂ ವೆಂಕಟೇಶ, ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ಎಂ.ಎಸ್‌. ಮದಭಾವಿ, ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ, ಹಲಸಂಗಿ ಗೆಳೆಯರ ಬಳಗದ ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಇತರರು ವೇದಿಕೆಯಲ್ಲಿದ್ದರು.

ಟಾಪ್ ನ್ಯೂಸ್

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

pentagon

ಪೆಂಟಗನ್‌ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

DCM Govind Karajola

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ : ಕಾರಜೋಳ

MP Ramesh Jigajinagai

ರೈಲ್ವೆ ಯೋಜನೆಗೆ 36 ಸಾವಿರ ಕೋಟಿ ರೂ.

Tanveer Sair Protest

ತನ್ವೀರ್‌ ತೇಜೋವಧೆಗೆ ಆಕ್ರೋಶ

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

MUST WATCH

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

ಹೊಸ ಸೇರ್ಪಡೆ

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

Heat

ಬಿಸಿಲ ತಾಪ ತಾಳದೆ ಬಾಯಾರಿದ ಜನ-ಜಾನುವಾರು

ಅನ್ನದಾತರಿಗೆ ನೇರ ಮಾರುಕಟ್ಟೆ ಖಾತ್ರಿ

ಅನ್ನದಾತರಿಗೆ ನೇರ ಮಾರುಕಟ್ಟೆ ಖಾತ್ರಿ

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.