ವಿಜಯಪುರ ಪೊಲೀಸರ ಭರ್ಜರಿ ಬೇಟೆ : 252 ಪ್ರಕರಣ ಭೇದಿಸಿ 2.33 ಕೋಟಿ ವಸ್ತುಗಳ ವಶ
Team Udayavani, Nov 29, 2021, 12:28 PM IST
ವಿಜಯಪುರ: ಜಿಲ್ಲೆಯಲ್ಲಿ ನಡೆದ ವಿವಿಧ ಕಳ್ಳತನ, ದರೋಡೆ ಪ್ರಕರಣ ಭೇದಿಸಿರುವ ಜಿಲ್ಲಾ ಪೊಲೀಸರು 252 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಅವುಗಳ ವಾರಸುದಾರರಿಗೆ ಮರಳಿಸಲಾಗುತ್ತಿದೆ.
ಸೋಮವಾರ ನಗರದ ಪೊಲೀಸ್ ಚಿಂತನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಎಸ್ಪಿ ಆನಂದಕುಮಾರ,
ಒಟ್ಟು 2,33,17,339 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಸ್ವಾಧೀನ ಮಾಡಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಮರಳಿಸಲಾಗುತ್ತಿದೆ ಎಂದರು.
2216 ಗ್ರಾಂ ಚಿನ್ನಾಭರಣ, 4530 ಗ್ರಾಂ ಬೆಳ್ಳಿ ಆಭರಣ, 5.12 ಲಕ್ಷ ನಗದು, 110 ಬೈಕ್ ಗಳು, 12 ವಾಹನಗಳು, 29 ಜಾನುವಾರು, 34 ಲಕ್ಷ ರೂ. ಮೌಲ್ಯದ ಮೊಬೈಲ್ ಸೇರಿದಂತೆ ಇತರೆ ವಸ್ತು ವಶಕ್ಕೆ ಪಡೆದಿರುವುದಾಗಿ ವಿವರಿಸಿದರು.