ನನಸಾಗುತ್ತಿದೆ ನೀರಾವರಿ ಕನಸು

ದೇಶದಲ್ಲೇ ಅತಿ ಉದ್ದದ ತಿಡಗುಂದಿ ಜಲ ಮೇಲ್ಸೇತುವೆಯಲ್ಲಿ ಹರಿದ ಕೃಷ್ಣೆಗೆ ಪೂಜೆ

Team Udayavani, Apr 25, 2020, 7:21 PM IST

25-April-07

ವಿಜಯಪುರ: ತಿಡಗುಂದಿ ವಿಸ್ತರಣಾ ನಾಲೆಯ ಜಲ ಮೇಲ್ಸೇತುವೆಗೆ ಹರಿದು ಬಂದ ಕೃಷ್ಣೆಗೆ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ ಗಂಗಾಪೂಜೆ ಸಲ್ಲಿಸಿದರು

ವಿಜಯಪುರ: ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡುವ ನನ್ನ ಕನಸಿನ ಭಾಗವಾದ ಮುಳವಾಡ ಮೂರನೇ ಹಂತದ ಯೋಜನೆಯ ತಿಡಗುಂದಿ ವಿಸ್ತರಣೆಯ ಹಾಗೂ ದೇಶದಲ್ಲೇ ಅತಿ ಉದ್ದದ ಜಲ ಮೇಲ್ಸೇತುವೆಗೆ ನೀರು ಹರಿದು ಬಂದಿದೆ. ಜಿಲ್ಲೆಯ ನೀರಾವರಿ ಸೌಲಭ್ಯ ಇಲ್ಲದ ಎತ್ತರದ ಪ್ರದೇಶದ ರೈತರ ಜಮೀನಿಗೆ ನೀರು ಹರಿಸುವ ಮೂಲಕ ನನ್ನ ಕನಸು ನನಸಾಗಿದೆ ಎಂದು ಜಲ ಸಂಪನ್ಮೂಲ ಖಾತೆ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಶುಕ್ರವಾರ ಜಿಲ್ಲೆಯ ಬುರಣಾಪುರ ಹಾಗೂ ಅರಕೇರಿ ಬಳಿ ತಿಡಗುಂದಿ ಶಾಖಾ ಕಾಲುವೆಗೆ ಹರಿದು ಬಂದ ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಳವಾಡ ಏತ ನೀರಾವರಿ ಮೂರನೇ ಹಂತದ ಯೋಜನೆಯ ತಿಡಗುಂದಿ ವಿಸ್ರರಣಾ ನಾಲೆಯಿಂದ ನೀರಾವರಿ ಸೌಲಭ್ಯ ಇಲ್ಲದ ಭೀಕರ ಬರಪೀಡಿತ ಇಂಡಿ, ಚಡಚಣ ಭಾಗದ 25 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ದೊರೆತಿದ್ದು ಸಂತಸ ತಂದಿದೆ ಎಂದರು.

ಮದಭಾವಿ ಗ್ರಾಮದ ಆಪಟೇಕ್‌ ಬಳಿ 70.75 ಕಿ.ಮೀ 64 ಕಿ.ಮೀ. ಉದ್ದದ ಈ ಕಾಲುವೆ 280 ಕೋಟಿ ರೂ.ವೆಚ್ಚದ 14.73 ಕಿ.ಮೀ. ಉದ್ದದ ಈ ಮೇಲ್ಸೇತುವೆ ದೇಶದಲ್ಲೇ ಅತ್ಯಂತ ಉದ್ದದ ಜಲ ಮೇಲ್ಸೇತುವೆ.
14.229 ಕ್ಯೂಸೆಕ್‌ ನೀರನ್ನು ಹರಿಸುವ ಸಾಮರ್ಥ್ಯದ 36 ವಿತರಣಾ ಕಾಲುವೆ ಹೊಂದಿದೆ. ಈ ಕಾಲುವೆಯಿಂದ ವಿಜಯಪುರ, ಇಂಡಿ ತಾಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.

ಭೀಕರ ಬರಕ್ಕೆ ಹೆಸರಾದ ತಡವಲಗಾದಿಂದ ಇಂಡಿ ರೈಲ್ವೆ ನಿಲ್ದಾಣದವರೆಗಿನ ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು. ಇದನ್ನರಿತ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 4,177 ಹೆಕ್ಟೆರ್‌ ಪ್ರದೇಶ ತಿಡಗುಂದಿ ಶಾಖಾ ಕಾಲುವೆಯ 56ನೇ ಕಿ.ಮೀ. ನಂತರ ಪೈಪ್‌ಲೈನ್‌ ಜಾಲವನ್ನು ಅಳವಡಿಸಿಕೊಂಡು ನೀರಾವರಿಗೆ ಒಳಪಡಿಸಲು ಯೋಜಿಸಲಾಗಿದೆ. ಇದರಿಂದ ಇಂಡಿ ತಾಲೂಕಿನ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಳ್ಳಿ, ಗಣವಲಗ, ನಿಂಬಾಳ ಬಿ.ಕೆ, ತೆನಿಹಳ್ಳಿ, ಬೋಲೆಗಾಂವ, ಹಂಜಗಿ ಭಾಗದ 14,500 ಹೆಕ್ಟೇರ್‌ ಪ್ರದೇಶಕ್ಕೆ ನೀರು ಹರಿಯಲಿದೆ ಎಂದರು.

ತಿಡಗುಂದಿ ವಿಸ್ತರಣೆಯ ಶಾಖಾ ಕಾಲುವೆಯಿಂದ 56 ಕಿ.ಮೀ.ವರೆಗೆ 15,249 ಹೆಕ್ಟೇರ್‌ ನೀರಾವರಿ ಕಾಣಲಿದೆ. ಇದರಲ್ಲಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 2,800 ಹೆಕ್ಟೇರ್‌ ಕ್ಷೇತ್ರವೂ ನೀರಾವರಿ ತಿಡಗುಂದಿ ಶಾಖಾ ಕಾಲುವೆ ಕಿ.ಮೀ. 56ರ ನಂತರ ಪೈಪ್‌ ವಿತರಣಾ ಜಾಲವನ್ನು ಅಳವಡಿಸಲಾಗಿದೆ ಎಂದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಇಂಡಿ ತಾಲೂಕಿನ 31 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಪತ್ರ ಬರೆದಿದ್ದರು. ಇದರಲ್ಲಿ ತಿಡಗುಂದಿ ಯೋಜನೆಯ 12 ಹಳ್ಳಿಗಳು ಈಗಾಗಲೇ ಸೌಲಭ್ಯ ಕಲ್ಪಿಸಿದ್ದು, ನಿಂಬಾಳ ಕೆ.ಡಿ, ಹಳಗುಣಕಿ, ಹೊರ್ತಿ ಸೇರಿ ಉಳಿದ 19 ಹಳ್ಳಿಗಳಿಗೆ ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ರಾಜು ಆಲಗೂರ, ವಿಠ್ಠಲ ಕಟಕದೋಂಡ, ಡಾ| ಮಹಾಂತೇಶ ಬಿರಾದಾರ, ಸಿದ್ದಣ್ಣ ಸಕ್ರಿ ಇದ್ದರು.

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.