Udayavni Special

ನಗರ ಸೌಂದರ್ಯೀಕರಣಕ್ಕೆ ಪಣ

ಹವ್ಯಾಸಿ ಯುವ ಕಲಾವಿದರ ಬಳಗದ ಗಾನಯೋಗಿ ತಂಡದ ಸಾಮಾಜಿಕ ಕಾರ್ಯ

Team Udayavani, Sep 27, 2021, 6:00 PM IST

yuva

ವಿಜಯಪುರ: ನಗರದಲ್ಲಿ ಯುವಕರ ತಂಡವೊಂದು ವಿಶಿಷ್ಟ ಸೇವೆ ಮೂಲಕ ಗಮನ ಸೆಳೆಯುವ ಕೆಲಸದಲ್ಲಿ ತೊಡಗಿದೆ. ಹವ್ಯಾಸಿ ಕಲಾವಿದರಾಗಿರುವ ಹಾಗೂ ನಿತ್ಯದ ಉದ್ಯೋಗ ನಂಬಿರುವ ಈ ಯುವಕರ ತಂಡ ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಅನುಕರಣೀಯ ಕಾರ್ಯ ಮಾಡುವ ಪಣತೊಟ್ಟಿದ್ದು, ಆ ನಿಟ್ಟಿನಲ್ಲಿ ಅಣಿ ಇರಿಸಿದೆ. ನಗರದಲ್ಲಿ ಗಾನಯೋಗಿ ಸಂಘ ಎಂದು ನೋಂದಾಯಿತ ಸಂಸ್ಥೆ ಕಟ್ಟಿಕೊಂಡಿರುವ 9 ಯುವಕರ ಈ ಮಾದರಿ ಸೇವೆಯಲ್ಲಿ ತೊಡಗಿರುವ ಈ ತಂಡದಲ್ಲಿ ಗದಗ ಪುಟ್ಟರಾಜ ಆಶ್ರಮದ ಶಿಷ್ಯರಿದ್ದು, ಈ ಭಾವನಾತ್ಮಕ ಗುರು ಸ್ಮರಣೆಗಾಗಿ ಗಾನಯೋಗಿ ಎಂದು ಸಂಘಟಕ್ಕೆ ನಾಮಕರಣ ಮಾಡಿಕೊಂ ಡಿದೆ.

ಗಾನಯೋಗಿ ಎಂದು ಹೆಸರು ಇರಿಸಿಕೊಂಡಿರುವ ಈ ಸಂಘದಲ್ಲಿ ಗಾಯಕ, ವರ್ಣಚಿತ್ರ ಕಲಾವಿದ, ರಂಗಕರ್ಮಿ, ಸಣ್ಣ ಬಟ್ಟೆ ವ್ಯಾಪಾರಿ, ಹೋಟೆಲ್‌ ಮಾಲೀಕ ಹೀಗೆ ಬದುಕಿಗಾಗಿ ಸಣ್ಣ-ಸಣ್ಣ ಕೆಲಸದಲ್ಲಿ ತೊಡಗಿರುವವರೇ ಇದ್ದಾರೆ. ವಿಜಯಪುರ ಐತಿಹಾಸಿಕ ಹಾಗೂ ಪ್ರವಾಸಿಗರ ನಗರ. ಆದರೆ ಜಿಲ್ಲಾ ಕೇಂದ್ರದ ಸಾರ್ವಜನಿಕ ಸ್ಥಳಗಳಲ್ಲಿ ಹತ್ತು ಹಲವು ಲೋಪಗಳಿರುವುದನ್ನು ಗಮನಿಸಿರುವ ಈ ಯುವಕರ ತಂಡ, ಹೇಳುವುದಕ್ಕಿಂತ ಮಾಡುವುದು ಲೇಸು ಎಂದು ತಾವೇ ಹದಗೆಟ್ಟ ನಗರದ ಸೌಂದರ್ಯಕ್ಕೆ ಮುಂದಾಗಿದೆ. ವಾರದ ಬಿಡುವಿನ ವೇಳೆಯಲ್ಲಿ ಸಮಾಜ ಸೇವಾ ಕಾರ್ಯಕ್ಕೆ ಮುಂದಾಗಿರುವ ಈ ಯುವಕರ ತಂಡ ಈಗಾಗಲೇ ಹಲವು ರೀತಿಯಲ್ಲಿ ತಮ್ಮ ಸೇವೆ ನೀಡುತ್ತ ಸಾಗಿವೆ.

ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳಾದ ಬೇಗಂ ತಲಾಬ್‌ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವತ್ಛಗೊಳಿಸಿದ್ದು, ದರ್ಗಾ ಪರಿಸರದಲ್ಲಿದ್ದ ಹೂಳು ತುಂಬಿದ್ದ ಐತಿಹಾಸಿಕ ಭಾವಿಯೊಂದನ್ನು ಹೂಳೆತ್ತುವ ಮೂಲಕ ಪಾರಂಪರಿಕ ಸ್ಮಾರಕಗಳ ಸಂರಕ್ಷಗೆ ತಮ್ಮ ಸೇವೆ ನೀಡಿದೆ. ಭೂತನಾಳ ಬಳಿ ಶಾಸಕ ಎಂ.ಬಿ. ಪಾಟೀಲ ಅವರ ಪರಿಶ್ರಮದಿಂದ ನಿರ್ಮಾಣವಾಗಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಮಾದಕ ವ್ಯಸನಿಗಳು ಮಾಡಿದ ತ್ಯಾಜ್ಯ ಸ್ವತ್ಛಗೊಳಿಸಿದ್ದಾರೆ. ಅಲ್ಲದೇ ಸುಮಾರು 25 ಗೋಣೀ ಚೀಲಗಳಲ್ಲಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಪರಿಸರ ಸಂರಕಣೆಗೆ ಕಾರ್ಯ ಮಾಡಿದೆ. ಈ ಯುವಕರ ತಂಡ ಇದಕ್ಕೆ ತಗುಲುವ ವೆಚ್ಚವನ್ನು ತಮ್ಮ ದಿಡಿಮೆಯ ಹಣವನ್ನೇ ಹಾಕಿ ಸೇವೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬದುಕು ದುರ್ಬರವಾಗಿದ್ದರೂ ಒಬ್ಬೊಬ್ಬೊಬ್ಬರು ಒಂದೊಂದು ಉದ್ಯೋಗ ಮಾಡುವ ಈ ಯುವಕರು ಹುಮ್ಮಸ್ಸು ಕಳೆದುಕೊಂಡಿಲ್ಲ. ತಮ್ಮ ಹಸಿವು ನೀಗಿಕೊಳ್ಳುವ ಮೂಲಕ ಐತಿಹಾಸಿಕ ನಗರದ ಮಾನ ಕಾಯುವುದು ಬಸವನಾಡಿನ ನಮ್ಮ ಜವಾಬ್ದಾರಿ ಎನ್ನುತ್ತಾರೆ. ಈ ನೆಲದಲ್ಲಿ ಹುಟ್ಟಿದ ಬಳಿಕ ಸಮಸ್ಯೆಗಳನ್ನು ಹೇಳಿಕೊಳ್ಳುತ್ತ, ಅನ್ಯರನ್ನು ಹಳಿಯುತ್ತ ಕೂರುವುದು ನಮ್ಮ ಕೆಲಸ ಆಗಬಾರದು. ನಮ್ಮಿಂದ ಮಾಡಲು ಸಾಧ್ಯ ಇರುವುದನ್ನು ಮಾಡಲು ಮುಂದಾಗಬೇಕು. ಈ ಕಾರಣಕ್ಕಾಗಿ ನಾವು ದುಡಿದ ಹಣವನ್ನು ಹಾಕಿಕೊಂಡು ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಗೆ ಮುಂದಾಗಿದ್ದೇವೆ ಎನ್ನುತ್ತಾರೆ.

ಇದೀಗ ನಗರ ಹೃದಯ ಭಾಗದ ಲ್ಲಿರುವ ಹಾಗೂ ಜಿಲ್ಲೆಯ ಜನರು ಅದರಲ್ಲೂ ಮಕ್ಕಳು -ಮಹಿಳೆಯರು ಪದೇ ಪದೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ವಾಣಿಜ್ಯ ಕೇಂದ್ರವಾಗಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಪ್ರದೇಶದ ದುಸ್ಥಿತಿಯ ಸುಧಾರಣೆಗೆ ಕಂಕಟ ತೊಟ್ಟಿದೆ. ಮಹಿಳೆಯರು, ಮಕ್ಕಳು ಮುಜುಗುರ ಪಡುವಂತಾಗಿರುವ ನಗರ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಈ ಪರಿಸರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ಗುಟ್ಕಾ, ಎಲೆ ಅಡಿಕೆ, ತಂಬಾಕು ಸೇವಕರದಿಂದ ಮಾಡಿದ ಸೌಂದರ್ಯ ನಾಶವಾಗಿದೆ. ಈ ದುರವಸ್ಥೆಯನ್ನು ಸರಿಸ ಪಡಿಸಲು ಕಳೆದ ಎರಡು ವಾರಗಳಿಂದ ಕೈ ಹಾಕಿದೆ. ಈಗಾಗಲೇ ಶಾಸ್ತ್ರಿ ಮಾರುಕಟ್ಟೆ ಸ್ವತ್ಛತಾ ಕಾರ್ಯ ಆರಂಭಿಸುವ ಜೊತೆಗೆ ಸ್ವಂತ ಹಣದಲ್ಲಿ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದೇ ನಗರದಲ್ಲಿ ಸಾರ್ವಜನಿಕ ಸ್ಥಳಗಳ ಸ್ವತ್ಛತೆ ಕಾಯ್ದುಕೊಳ್ಳುವ ಸಂದೇಶಗಳನ್ನು ಬರೆದಿದೆ. ಇದೀಗ ಇನ್ನೂ ಒಂದು ಮುಂದೆ ಹೋಗಿರುವ ಈ ತಂಡ ಜನರಲ್ಲಿ ಕನ್ನಡ ಭಾಷೆಯ ಕುರಿತು ಅರಿವು ಮೂಡಿಸಲು ಅನಿಯಾಗಿದೆ. ಇದಕ್ಕಾಗಿ ಶಾಶಿ÷ ಮಾರುಕಟ್ಟೆ ಪ್ರವೇಶ ದ್ವಾರವನ್ನು ಸ್ವತ್ಛಗೊಳಿಸಿ ಕನ್ನಡದ ಮೂಲಾಕ್ಷರಗಳನ್ನು ಬರೆಯುವ ಕೆಲಸ ಮಾಡಿದೆ. ಭವಿಷ್ಯದಲ್ಲಿ ಕರ್ನಾಟಕದ ಖ್ಯಾತನಾಮ ಸಾಹಿತಿಗಳು, ಸಾಧಕರು ನಾಡಿಗೆ ನೀಡಿದ ಸಂದೇಶಗಳನ್ನು ಬರೆಯುವ ಯೋಜನೆ ರೂಪಿಸಿದೆ. ಕಾಲಿಡಲು ನಾಚಿಕೆ ಆಗುವಷ್ಟು ಹದಗೆಟ್ಟಿರುವ ಶಾಸ್ತ್ರಿ ಮಾರುಕಟ್ಟೆಯನ್ನು ಸ್ವತ್ಛತೆಗೆ ಮಾದರಿಯಾಗಿಸಬೇಕು ಎಂಬ ಆಶಯ ಹೊಂದಿದ್ದಾರೆ. ಬಳಿಕ ನಗರದ ಇತರೆ ಕೊರತೆಗಳನ್ನು ನೀಗಲು ಕೈ ಹಾಕುವುದಾಗಿ ಹೇಳುತ್ತಾರೆ.

ಗಾನಯೋಗಿ ಸಂಘದ ತಂಡ ಈ ಸಂಘಕ್ಕೆ ಹೋಟೆಲ್‌ ಉದ್ಯಮಿ ಪ್ರಕಾಶ ಕಲಬುರ್ಗಿ ಸಾರಥ್ಯವಿದೆ. ಉಳಿದಂತೆ ಆರ್ಕೆಸ್ಟ್ರಾ ಗಾಯಕ ಸಂತೋಷ ಚವ್ಹಾಣ, ಹೊರಗುತ್ತಿಗೆ ನೌಕರ ಸಚಿನ ವಾಲೀಕಾರ, ಕೇಬಲ್‌ ಆಪರೇಟ್‌ ನೌಕರ ವಿಕಾಸ ಕಂಬಾಗಿ, ಖಾಸಗಿ ಬ್ಯಾಂಕ್‌ ನೌಕರ ರವಿ ರತ್ನಾಕರ, ವರ್ಣಚಿತ್ರ ಕಲಾವಿದ ವಿಠuಲ ಗುರುವಿನ, ನಿರುದ್ಯೋಗಿ ಪದವೀಧರ ಕಿರಣ ಶಿವಣ್ಣನವರ, ಕಾರು ಚಾಲಕರಾದ ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಬಟ್ಟೆ ವ್ಯಾಪಾರಿ ಮಹೇಶ ಕುಂಬಾರ ಇವರ ತಂಡ ಮಾಡುವ ಸಮಾಜ ಸೇವಾ ಕಾರ್ಯದಿಂದ ಆಕರ್ಷಿತರಾಗಿ ಮಲ್ಲಿಕಾರ್ಜುನ ಶಿಂಧೆ, ಸಚಿನ್‌ ಚವ್ಹಾಣ ಕೂಡ ಈ ತಂಡಕ್ಕೆ ಸೇರಿಕೊಂಡಿದ್ದಾರೆ.

ಹುಟ್ಟಿನ ಊರಿಗೆ ನಾವು ಏನನ್ನಾದರೂ ಮಾಡಬೇಕು ಎಂಬ ಹಂಬಲದಿಂದ ಸ್ನೇಹಿತರೆಲ್ಲ ಸೇರಿಕೊಂಡು ಸಮಾಜ ಸೇವೆಗೆ ಅಣಿಯಾಗಿದ್ದೇವೆ. ಬಿಡುವಿನ ವೇಳೆಯಲ್ಲಿ ನಾವು ದುಡಿದ ಹಣದಲ್ಲೇ ನಾವು ಮಾಡುವ ಸೇವೆಗೆ ತಗುಲುವ ವೆಚ್ಚವನ್ನು ಭರಿಸುತ್ತಿದ್ದೇವೆ.

ಪ್ರಕಾಶ ಕಲಬುರ್ಗಿ, ಸಂಸ್ಥಾಪಕ ಅಧ್ಯಕ್ಷ, ಗಾನಯೋಗಿ ಸಂಘ

ಜಿ.ಎಸ್‌.ಕಮತರ

ಟಾಪ್ ನ್ಯೂಸ್

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಹಲವು ರಾಜ್ಯಗಳಲ್ಲಿ ಮಳೆರಾಯನ ಅವಾಂತರ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪ : ಭಯದಿಂದ‌ ಮನೆಯಿಂದ ಹೊರ ಓಡಿದ ಜನ

ತಿಕೋಟಾ ತಾಲೂಕಿನಲ್ಲಿ ಮತ್ತೆ ಭೂಕಂಪನ : ಭಯಗೊಂಡು ಮನೆಯಿಂದ ಹೊರ ಓಡಿದ ಜನ

ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು

ಚುನಾವಣಾ ಕರ್ತವ್ಯ ಲೋಪ : ಮೂವರು ಶಿಕ್ಷಕರ ಅಮಾನತು

23

ಸದನದಲ್ಲಿ ರೈತರ ಜಮೀನು ದಾರಿ ಸಮಸ್ಯೆ ಚರ್ಚಿಸಲು ಡಿ.ಕೆ. ಶಿವಕುಮಾರಗೆ ಆಗ್ರಹ

22

ಡಾ|ಅಬ್ದುಲ್‌ಕಲಾಂ ಕನಸು ನನಸಾಗಿಸಿ

21

ಇಂದಿನಿಂದ ಚುನಾವಣಾ ಪ್ರಚಾರ: ದೇವೇಗೌಡ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

ಲಸಿಕೆ ಪಡೆಯದ ಬಾಲಿವುಡ್‌ ನಟಿ ಪೂಜಾ ಬೇಡಿಗೆ ಕೋವಿಡ್ ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.