ದತ್ತು ಪಡೆದ 3 ಶಾಲೆಗಳಿಗೆ ಕಾಯಕಲ್ಪ ಭಾಗ್ಯ

ಮೂರು ಶಾಲೆ ದತ್ತು ಸ್ವೀಕರಿಸಿದ ಶಾಸಕ ಪುಟ್ಟರಂಗಶೆಟ್ಟಿ, 71 ಲಕ್ಷ ರೂ. ವೆಚ್ಚದಲ್ಲಿ 3 ಶಾಲೆ ಅಭಿವೃದ್ಧಿಗೆ ಯೋಜನೆ

Team Udayavani, Dec 12, 2020, 3:45 PM IST

ದತ್ತು ಪಡೆದ 3 ಶಾಲೆಗಳಿಗೆ ಕಾಯಕಲ್ಪ ಭಾಗ್ಯ

ಚಾಮರಾಜನಗರ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಚಾಮರಾಜನಗರ ‌ ವಿಧಾನಸಭಾ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ದತ್ತು ಪಡೆದಿದ್ದಾರೆ.

ತಾಲೂಕಿನ ‌ ಚಂದಕವಾಡಿ ಗ್ರಾಮದ ಕರ್ನಾಟಕ ‌ ಪ‌ಬ್ಲಿಕ್‌ ಶಾಲೆ, ಕೋಳಿಪಾಳ್ಯದ ಸರ್ಕಾರಿ ಪ್ರೌಢಶಾಲೆ, ಚಾಮರಾಜನಗರ ಪಟ್ಟಣದಲ್ಲಿರುವ ಉಪ್ಪಾರ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ‌ ಶಾಲೆಗಳನ್ನು ಶಾಸಕರು ದತ್ತು ಪಡೆದುಕೊಂಡಿದ್ದಾರೆ.

ಈ ಶಾಲೆಗಳ ಅಭಿವೃದ್ಧಿಗಾಗಿ ಶಾಸ‌ಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಬಳ‌ಲಾಗುತ್ತದೆ. ಈ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗ‌ತ್ಯ ಸೌಲಭ್ಯಗಳಿಗೆ ಬೇಕಾಗಬಹುದಾದ ಮೊತ್ತದ ಅಂದಾಜು ಪಟ್ಟಿಗೆ ತ‌ಯಾರಿಸಲಾಗಿದೆ. ಅದರಂತೆ ಚಂದಕವಾಡಿಯ ಸರ್ಕಾರಿ ಕ‌ರ್ನಾಟಕ ಪಬ್ಲಿಕ್‌ ಶಾಲೆಗೆ 35.20 ಲಕ್ಷ ರೂ., ಕೋಳಿಪಾಳ್ಯ ಸರ್ಕಾರಿ ಪ್ರೌಢಶಾಲೆಗೆ 15 ಲಕ್ಷ ರೂ. ಹಾಗೂ ಚಾ.ನ‌ಗರದ ಉಪ್ಪಾರ ಬೀದಿ ಶಾಲೆಗೆ 21 ಲಕ್ಷರೂ. ಅಂದಾಜು ಪಟ್ಟಿ ‌ತಯಾರಿಸಿ ಸರ್ಕಾರಕ್ಕೆಕ ‌ಳುಹಿಸಿಕೊಡಲಾಗಿದೆ. ಒಟ್ಟು 71.20 ಲಕ್ಷ ರೂ. ವೆಚ್ಚದಲ್ಲಿ ಮೂರು ಶಾಲೆಗ‌ಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸ‌ಲಾಗಿದೆ.

ಈ ಮೂರು ಶಾಲೆಗನ್ನು ಸುತ್ತಮುತ್ತಲ ಗ್ರಾಮಗಳಿಂದ ‌ಬರಲು ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಗಿದೆ. ಬಸ್‌ ವ್ಯವಸ್ಥೆ ಇದೆ. ಶಾಲೆ ಅಭಿವೃದ್ಧಿ ಸಲಹಾ  ‌ಸಮಿತಿಗಳು (ಎಸ್‌ಡಿಎಂಸಿ) ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಮೂರು ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದಾರೆ. ಈ ಮೂರು ಶಾಲೆಗಳಿಗೆ ಸುಸಜ್ಜಿತ ವಿಜ್ಞಾನ ‌ ಲ್ಯಾಬ್‌, ಸ್ಮಾರ್ಟ್‌ ತರಗತಿ,ಡೈನಿಂಗ್‌ಹಾಲ್‌,ಹೈಟೆಕ್‌ ಗ್ರಂಥಾಲಯದ ಅಗತ್ಯವಿದೆ.

ಕೋಳಿಪಾಳ್ಯ ಸರ್ಕಾರಿ ಪ್ರೌಢಶಾಲೆ -15 ಲಕ್ಷ ರೂ :

ತಾಲೂಕಿನ ಕೋಳಿಪಾಳ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷಗಳಿಂದ ವಿಜ್ಞಾನ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶೌಚಾಲಯ ದುರಸ್ತಿಯಾಗಬೇಕು. ಕಾಂಪೌಂಡ್‌ ದುರಸ್ತಿಯಾಗಬೇಕು. ಮಳೆ ಬಂದಾಗ ಮೇಲ್ಛಾವಣಿ ಸೋರುತ್ತದೆ. ಅಡುಗೆ ಮನೆ ನವೀಕರಣ ಮಾಡಬೇಕು.ರಂಗಚಟುವಟಿಕೆಗೆ ವೇದಿಕೆ, ಸೈಕಲ್‌ಸ್ಟಾಂಡ್‌,ಸೈನ್ಸ್‌ಲ್ಯಾಬ್‌ಅಗತ್ಯವಿದೆ.ಇದೀಗಈ ಸರ್ಕಾರಿ ಪ್ರೌಢಶಾಲೆಯನ್ನು ಶಾಸಕ ಪುಟ್ಟರಂಗಶೆಟ್ಟಿದತ್ತು ಸ್ವೀಕರಿಸಿದ್ದು, 15 ಲಕ್ಷ ರೂ. ವ್ಯಯಿಸಿ ಸೌಲಭ್ಯಕಲ್ಪಿಸಲಾಗುತ್ತಿದೆ.

ಕುಡಿಯುವ ನೀರಿನಬೋರ್‌ವೆಲ್‌ ತೆಗೆದು, ಸಬ್‌ಮರ್ಸಿಬಲ್‌ಹಾಕಲಾಗಿದೆ. ಇದನ್ನು ಪೂರ್ಣಗೊಳಿಸಬೇಕು. ಸೈಕಲ್‌ ನಿಲ್ದಾಣಬೇಕು.ಶೌಚಾಲಯ ಹಳೆಯದಾಗಿದೆ.ಹೊಸದಾಗಿ ನಿರ್ಮಿಸಬೇಕು. ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ ಅಗತ್ಯವಾಗಿದೆ. ಎಚ್‌.ಆರ್‌. ರಾಮಣ್ಣ, ಮುಖ್ಯಶಿಕ್ಷಕ, ಕೋಳಿಪಾಳ್ಯ

ಚಂದಕವಾಡಿ ಪಬ್ಲಿಕ್‌ ಶಾಲೆ- 35.20 ಲಕ್ಷರೂ. : ಚಂದಕವಾಡಿ ಕರ್ನಾಟಕ ‌ಪಬ್ಲಿಕ್‌ಶಾಲೆಯಲ್ಲಿ 1 ರಿಂದ 12ನೇ ತರಗತಿಯವರೆಗೆ ಒಟ್ಟು 977 ವಿದ್ಯಾರ್ಥಿಗಳಿದ್ದಾರೆ. ಕಟ್ಟಡ ದುರಸ್ತಿ ಪಡಿಸಬೇಕು. ಹೆಂಚುಗಳು ಒಡೆದುಹೋಗಿವೆ. ಒಂದು ಕಡೆ ಕಾಂಪೌಂಡ್‌ ನಿರ್ಮಾಣವಾಗಬೇಕು. ಕ್ರೀಡೋಪಕರಣಗಳ ಅಗತ್ಯವಿದೆ. ಆಟದ ‌ ಮೈದಾನ‌ಕ್ಕೆ ಜಾಗ ಇದೆ. ಅದನ್ನು ಹದಗೊಳಿಸಿ ಮೈದಾನವನ್ನಾಗಿ ರೂಪಿಸಬೇಕಾಗಿದೆ. ದ‌ತ್ತು ಸ್ವೀಕಾರ ‌ ಕಾರ್ಯಕ್ರಮದಡಿ ಈ ಚಂದಕವಾಡಿಯ ಸ‌ರ್ಕಾರಿ ಕರ್ನಾಟಕ ‌ ಪಬ್ಲಿಕ್‌ ಶಾಲೆಯನ್ನು 35.20 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.

ಶಾಲೆಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಬೇಕು. ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಬೇಕು. ಹೆಂಚುಗಳ ಒಡೆದು ಹೋಗಿವೆ. ಮಳೆ ಬಂದಾಗಕೊಠಡಿಗಳು ಸುರಿಯುತ್ತವೆ. ವಿಶಾಲವಾದ ಆವರಣ ಇದೆ. ಆದರೆ ಅದನ್ನು ಆಟದ ಮೈದಾನವನ್ನಾಗಿ ಅಭಿವೃದ್ಧಿ ಪಡಿಸಿಬೇಕಿದೆ. –ಶೇಷಾಚಲ, ಮುಖ್ಯ ಶಿಕ್ಷಕ, ಚಂದಕವಾಡಿ ಹಿ.ಪ್ರಾ. ಶಾಲೆ

ಉಪ್ಪಾರಬೀದಿ ಶಾಲೆ -22 ಲಕ್ಷ ರೂ. :

ಚಾಮರಾಜನಗರದ ಉಪ್ಪಾರ ಬೀದಿ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಕೊಂಡಿದೆ. ರಾ.ಹೆ.209 ರಲ್ಲಿ ರಸ್ತೆ ಅಗಲೀಕರಣ ವೇಳೆ ಕಾಂಪೌಂಡ್‌ ಕೆಡವಿದ್ದು,ಇದುವರೆಗೂ ಕಾಂಪೌಂಡ್‌ ನಿರ್ಮಾಣವಾಗಿಲ್ಲ. ಇದು ಶಾಲೆಯ ಮುಖ್ಯ ಸಮಸ್ಯೆಯಾಗಿದೆ.ಕಾಂಪೌಂಡ್‌ ಇಲ್ಲದಕಾರಣ, ಶಾಲಾವರಣದಲ್ಲಿ ರಾತ್ರಿ ವೇಳೆ ಕುಡುಕರ ಹಾವಳಿ ಇದೆ. ಹೊರಗಿನ ಜನರು ಬಂದು ಶಾಲಾವರಣದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ರಜೆ ಸಂದರ್ಭದಲ್ಲಿ ಕೆಲವರು ಬಂದು ಜೂಜಾಡುತ್ತಿದ್ದಾರೆ. ದನಕರುಗಳ ಕಾಟವಿದೆ. ಶೌಚಾಲಯಗಳ ದುರಸ್ತಿಯಾಗಬೇಕಿದೆ. ಶಾಲೆಗೆ ಆಟದ ಮೈದಾನ ಸಮರ್ಪಕವಾಗಿಲ್ಲ. ಜಾಗ ಸಾಲುತ್ತಿಲ್ಲ. ಮಳೆ ಬಂದರೆ ಶಾಲೆಯ ಆವರಣದಲ್ಲಿನೀರು ನಿಲ್ಲುತ್ತಿದೆ. ಇದೀಗ ಈ ಶಾಲೆಯನ್ನು ಶಾಸಕರು 21 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ.

4 ವರ್ಷಗಳಿಂದಕಾಂಪೌಂಡ್‌ ಇಲ್ಲದೇ ಬಹಳ ತೊಂದರೆಯಾಗಿದೆ. ಹೊರಗಿನವರು ಆವರಣದೊಳಗೆ ಬಂದು ಶೌಚಕ್ಕೆ ಹೋಗುತ್ತಾರೆ. ರಾತ್ರಿವೇಳೆ ಹೊರಗಿನಿಂದಕುಡುಕರು ಬಂದುಕುಡಿದುಖಾಲಿಬಾಟಲಿಗಳನ್ನು ಬಿಸಾಡಿ ಹೋಗುತ್ತಾರೆ. ರಜೆಯಿದ್ದಾಗ ಶಾಲೆಯ ಜಗುಲಿಯಲ್ಲಿ ಜೂಜಾಟವಾಡುತ್ತಾರೆ. ಕೆ.ಎಸ್‌. ಮಹದೇವಸ್ವಾಮಿ, ಮುಖ್ಯ ಶಿಕ್ಷಕರು

ನನ್ನ ಕ್ಷೇತ್ರ ನನ್ನಶಾಲೆ ನನ್ನ ಕ್ಷೇತ್ರದಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ದತ್ತು ನೀಡಲಾಗಿದೆ.ಈ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಬೇಕೆಂಬುದು ನನ್ನ ಅಭಿಲಾಷೆಯಾಗಿದೆ.ಈ ಶಾಲೆಗಳ ಕಟ್ಟಡವನ್ನುಉತ್ತಮಪಡಿಸಬೇಕು. ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಮೂಲಭೂತ ಸೌಕರ್ಯ ನೀಡಬೇಕು. ಸರ್ಕಾರಇದಕ್ಕೆ ಪ್ರತ್ಯೇಕ ಅನುದಾನಬಿಡುಗಡೆ ಮಾಡಬೇಕು. ಸಿ.ಪುಟ್ಟರಂಗಶೆಟ್ಟಿ, ಶಾಸಕ. ಚಾ.ನಗರ ಕ್ಷೇತ್ರ

 

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಹಿಂಬದಿ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್‌ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್‌ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6–gundlpete-accident

ಕಾರು-ಲಾರಿ ಮಖಾಮುಖಿ ಢಿಕ್ಕಿ: ಮಹಿಳೆ ಸಾವು

5—gundlupete

ಗುಂಡ್ಲುಪೇಟೆ: ರೈತನ ಮೇಲೆ ಕಾಡಾನೆ ದಾಳಿ; ಕಾಲು ಮುರಿತ

136 ಸ್ಥಾನ ಗೆಲ್ಲುತ್ತೇವೆ: ಡಿಕೆಶಿ

136 ಸ್ಥಾನ ಗೆಲ್ಲುತ್ತೇವೆ: ಡಿಕೆಶಿ

ಸುಳ್ಳಿನ ಸಾಮ್ರಾಟನಿಂದ ಉತ್ತರ ಕೊಡಿಸುತ್ತಾರೆ: ಸಿದ್ದು

ಸುಳ್ಳಿನ ಸಾಮ್ರಾಟನಿಂದ ಉತ್ತರ ಕೊಡಿಸುತ್ತಾರೆ: ಸಿದ್ದು

5-hanuru

ಹನೂರು: ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುವ ವೇಳೆ ಅಪಘಾತ

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಹಿಂಬದಿ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಅಂಬೇಡ್ಕರ್‌ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

ಭಾರತೀಯರಿಗೆ ದಾಖಲೆ ವೀಸಾ ವಿತರಣೆಗೆ ಅಮೆರಿಕ ಸಜ್ಜು

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.