Udayavni Special

ಮತ್ತೂಂದು ಕೋವಿಡ್‌ ಆರೋಗ್ಯ ಕೇಂದ್ರ

ಗುಂಡ್ಲುಪೇಟೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕೇಂದ್ರ ಆರಂಭ

Team Udayavani, Oct 21, 2020, 2:03 PM IST

ಮತ್ತೂಂದು ಕೋವಿಡ್‌ ಆರೋಗ್ಯ ಕೇಂದ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಸೋಂಕಿತರ ಆರೈಕೆಗಾಗಿ ಆಯಾ ತಾಲೂಕು ಕೇಂದ್ರದಲ್ಲಿಯೇ ಕೋವಿಡ್‌ ಚಿಕಿತ್ಸೆಗೇ ಮೀಸಲಾದ ಆರೋಗ್ಯ ಕೇಂದ್ರಗಳನ್ನು (ಡೆಡಿ ಕೇಟೆಡ್‌ ಕೋವಿಡ್‌ ಹೆಲ್ತ್‌ ಸೆಂಟರ್‌) ಗಳನ್ನು ತೆರೆಯಲಾರಂಭಿಸಿದೆ.

ಮಂಗಳವಾರದಿಂದ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲಿ ನೂತನ ಕೇಂದ್ರ ಕಾರ್ಯಾರಂಭ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ಭಾಗಗಳಲ್ಲೇ ಕೋವಿಡ್‌ ಕೇರ್‌ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಪ್ರಕ್ರಿಯೆ ಆರಂಭಿಸಿದೆ. ಎರಡುವಾರಗಳ ಹಿಂದೆ ಸಂತೆಮರ ಹಳ್ಳಿ ಹೋಬಳಿ ಕೇಂದ್ರದಲ್ಲಿ ಕೋವಿಡ್‌ ಆರೋಗ್ಯ ಕೇಂದ್ರ ಆರಂಭಿಸಲಾಗಿತ್ತು. ಈಗ ಗುಂಡ್ಲುಪೇಟೆಯ ತಾಲೂಕು ಕೇಂದ್ರದಲ್ಲೇ 50 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಕೇಂದ್ರ ತೆರೆಯಲಾಗಿದೆ.

5 ಐಸಿಯು: ಕೋವಿಡ್‌ ಸೋಂಕಿತರಾಗಿದ್ದುಗಂಭೀರ ಲಕ್ಷಣಗಳು ಇಲ್ಲದವರಿಗಾಗಿ ತಾಲೂಕು ಕೇಂದ್ರದಲ್ಲಿರುವ ಕೋವಿಡ್‌ಸೆಂಟರ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರದಲ್ಲಿ 5 ತೀವ್ರ ನಿಗಾ ಹಾಸಿಗೆಗಳು (ಐಸಿಯು) ಸಹ ಇದ್ದು ಸೋಂಕಿತರಿಗೆ ಅಗತ್ಯ ಆರೈಕೆ ಮಾಡಲಾಗುತ್ತದೆ. ಗುಂಡ್ಲುಪೇಟೆ ತಾಲೂಕು ಭಾಗದ ಸೋಂಕಿತರಿಗಾಗಿ ಇಲ್ಲಿಯೇ ಆರೈಕೆ ಮಾಡುವ ಉದ್ದೇಶದೊಂದಿಗೆ ಕೇಂದ್ರವು ಕಾರ್ಯ ನಿರ್ವಹಿಸಲಿದ್ದು, ಹೋಂ ಐಸೊಲೇಷನ್‌ ಬಯಸುವವರಿಗೂ ನಿಯಮಾನುಸಾರ ಪರಿಶೀಲಿಸಿ ಅನುಮತಿ ಹಾಗೂ ನಿಗಾ ವಹಿಸಲು ಕೈಗೊಳ್ಳುವ ಪ್ರಕ್ರಿಯೆಯನ್ನು ಇಲ್ಲಿಯೇ ನಡೆಸಲಾಗುತ್ತದೆ.

ಆಯಾ ಭಾಗದಲ್ಲೇ ಸೋಂಕಿತರಿಗೆ ಆರೈಕೆ ಮಾಡುವ ಸಲುವಾಗಿ ತಾಲೂಕುಕೇಂದ್ರದಲ್ಲೇ ಕೋವಿಡ್‌ಗೆ ಮೀಸಲಾದ ಆರೋಗ್ಯ ಕೇಂದ್ರಆರಂಭಿಸಲಾಗಿದೆ. ರೋಗದ ಸೌಮ್ಯ ಲಕ್ಷಣ ಹೊಂದಿರುವವರಿಗೆ ಪ್ರಸ್ತುತ ತಾಲೂಕು ಕೋವಿಡ್‌ ಕೇಂದ್ರದಲ್ಲೇ ಆರೈಕೆ ಮಾಡಲಾಗುತ್ತದೆ. ತೀವ್ರ ತರನಾದ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯಕೀಯ ತಜ್ಞರ ಸಮಿತಿ ಸಲಹೆ ಪಡೆದು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದ್ದಾರೆ.

ಬೇಸರ ಕಳೆಯಲು ಟೀವಿ, ಗ್ರಂಥಾಲಯ :  ಕೋವಿಡ್‌ಕೇಂದ್ರದಲ್ಲಿ ಬೇಸರಕಳೆಯಲು ಈಗಾಗಲೇ ಟಿ.ವಿ. ಅಳವಡಿಸಲಾಗಿದೆ. ಓದುವ ಹವ್ಯಾಸ ಇರುವವರಿಗೆ ಸದಭಿರುಚಿಯ ಪುಸ್ತಕಗಳನ್ನು ಒಳ ಗೊಂಡ ಗ್ರಂಥಾಲಯ ಆರಂಭಿಸುವ ಉದ್ದೇಶ ಹೊಂದಲಾಗಿದೆ.ಕೋವಿಡ್‌ ಕೇಂದ್ರಕ್ಕಾಗಿಯೇ ಪ್ರತ್ಯೇಕ ಆ್ಯಂಬುಲೆನ್ಸ್‌ ಸೌಲಭ್ಯ ಸಹ ಒದಗಿಸಲಾಗಿದೆ. ಕೋವಿಡ್‌ಕೇಂದ್ರದಲ್ಲಿ ದಾಖಲಾಗುವವರಿಗೆ ಉತ್ತಮ ಊಟ ಉಪಾಹಾರ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರ್ಕಾರ ನಿಗದಿ ಮಾಡಿರುವ ಮೆನು ಅನುಸಾರವೇ ಊಟ ಉಪಚಾರ ವಿತರಿಸಲು ಎಲ್ಲಾ ಸಿದ್ಧತೆಕೈಗೊಳ್ಳಲಾಗಿದೆ.ಕುಡಿಯುವ ಶುದ್ಧ ನೀರು ಪೂರೈಕೆ ವ್ಯವಸ್ಥೆಯೂ ಇದೆ. ಬಿಸಿನೀರಿಗೂ ಅಗತ್ಯ ಸೌಲಭ್ಯಕಲ್ಪಿಸಲಾಗಿದೆ. ಸ್ನಾನಕ್ಕಾಗಿ ಗೀಸರ್‌ಗಳನ್ನು ಅಳವಡಿಸಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಪುಟ ಸಂಕಷ್ಟ ಮತ್ತೆ ಮುಂದೂಡಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

ಸಂಪುಟ ಸಂಕಷ್ಟ ಮತ್ತೆ ಮುಂದುವರಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

kiru-lekhana-3-(3)-copy

ನಿಂಬೆ ಹಣ್ಣಿನಿಂದ ಆರೋಗ್ಯ ವೃದ್ಧಿ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

01..

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ;ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿ!

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

ಹೊಸ ತಿರುವು ಪಡೆದ ಶ್ವಾನ ಮಾಲೀಕತ್ವ ಪ್ರಕರಣ: ಶ್ವಾನದ ಡಿಎನ್‌ಎ ಟೆಸ್ಟ್‌ಗೆ ನಿರ್ಧಾರ

ಭಾರತ- ಆಸೀಸ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ : ಮಯಾಂಕ್ ಓಪನಿಂಗ್

ಭಾರತ- ಆಸೀಸ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ : ಮಯಾಂಕ್ ಓಪನಿಂಗ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ಸ್ಥಗಿತಗೊಂಡ ಸಪ್ತಪದಿ ಕಾರ್ಯಕ್ರಮ ಶೀಘ್ರ ಪ್ರಾರಂಭ, ದೇವಾಲಯದ ಅರ್ಚಕರಿಗೆ ವಿಮೆ ಸೌಲಭ್ಯ :ಕೋಟ

ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಿಎಂ

ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ : ಸಿಎಂ

ಕಾಮಗಾರಿಗಳಿಗೆ ಶಾಸಕ ಮಹೇಶ್‌ ಭೂಮಿಪೂಜೆ

ಕಾಮಗಾರಿಗಳಿಗೆ ಶಾಸಕ ಮಹೇಶ್‌ ಭೂಮಿಪೂಜೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಚಿವ, ಶಾಸಕ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸಚಿವ, ಶಾಸಕ ಚಾಲನೆ

MUST WATCH

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

ಹೊಸ ಸೇರ್ಪಡೆ

ಸಂಪುಟ ಸಂಕಷ್ಟ ಮತ್ತೆ ಮುಂದೂಡಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

ಸಂಪುಟ ಸಂಕಷ್ಟ ಮತ್ತೆ ಮುಂದುವರಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY

kiru-lekhana-3-(3)-copy

ನಿಂಬೆ ಹಣ್ಣಿನಿಂದ ಆರೋಗ್ಯ ವೃದ್ಧಿ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಮಿಗ್ 29 ಕೆ ತರಬೇತಿ ವಿಮಾನ ಪತನ: ಓರ್ವ ಪೈಲಟ್ ರಕ್ಷಣೆ

ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ

ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ

01..

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ;ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.