Udayavni Special

ಕೃಷಿ ಕಾಯ್ದೆ ಹಿಂದೆ ಕಾರ್ಪೊರೆಟ್‌ ಕಂಪನಿಗಳ ಹುನ್ನಾರ


Team Udayavani, Feb 7, 2021, 3:39 PM IST

Chamarajnagra protest

ಚಾಮರಾಜನಗರ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ರಾಜ್ಯ  ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶನಿವಾರ ರಸ್ತೆ ನಡೆಸಿದರು.

ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ನಗರದ ಸಂತೆಮರಹಳ್ಳಿ ರಸ್ತೆಯಲ್ಲಿ ಜಾಲಹಳ್ಳಿಹುಂಡಿ ಬಳಿ ರಾಷ್ಟಿÅàಯ ಹೆದ್ದಾರಿಯಲ್ಲಿ ಸಮಾವೇಶಗೊಂಡ ರೈತರು, ರಸ್ತೆ ಮೇಲೆ ಕುಳಿತು ಧರಣಿ ನಡೆಸಿದರು. ರದ್ದಾಗಲಿ ರದ್ದಾಗಲಿ ರೈತ ವಿರೋಧಿ ಕೃಷಿ ಕಾಯ್ದೆಗಳು ರದ್ದಾಗಲಿ, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ರಸ್ತೆ ತಡೆ ಮುಂದುವರಿಸಿದಾಗ ಪೊಲೀಸರು ಪ್ರತಿಭಟನಾನಿರತ ರನ್ನು ವಶಕ್ಕೆ ಪಡೆದು ಬಿಡುಗಡೆ  ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ರೈತರಿಗೆ ಮಾರಕವಾಗುವ ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ನಾಚಿಗೇಡಿನ ಸಂಗತಿ ಯಾಗಿದೆ ಎಂದು ಆರೋಪಿಸಿದರು.

ರೈತ ವಿರೋಧಿ ಕಾಯ್ದೆ ಜಾರಿಗೆ ತರಲು ಕಾರ್ಪೊರೆಟ್‌ ಕಂಪನಿ ಗಳು ಹುನ್ನಾರ ನಡೆಸಿ, ದೇಶದ  ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಒಂದೂವರೆ ವರ್ಷದ ಕಾಲ ಈ ಕಾಯ್ದೆಯನ್ನು ನಾವು ತಡೆಯಲು ಸಿದ್ಧ ಎನ್ನುತ್ತಿದೆ. ಅಂದರೆ ಈ ಕಾಯ್ದೆಯಲ್ಲಿ ಲೋಪ ಇರುವುದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ ಎಂದರು.

ವಿದ್ಯುತ್‌, ಭೂ ಸುಧಾರಣೆ ತಿದ್ದುಪಡಿ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೈತ ವಿರೋಧಿ ನೀತಿಯಿಂದಾಗಿ ರೈತವರ್ಗ ಗುಲಾಮಗಿರಿಗೆ ಸಿಲುಕಿ ಬಂಡವಾಳ ಶಾಹಿಗಳ ಕೈಕೆಳಗೆ ಮಂಡಿಯೂರಿ ಕುಳಿತು ಕೊಳ್ಳಬೇಕಾಗುತ್ತದೆ. ಇಂಥ ಕಾಯ್ದೆಗಳನ್ನು ಜಾರಿಗೊಳಿಸಲು ಆತುರ ತೋರಿಸುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ನಿಯಂತ್ರಿಸುವ ಲೋಕಪಾಲ ಕಾಯ್ದೆ,  ವಿದೇಶದಲ್ಲಿರುವ ಕಪ್ಪು ಹಣ ವಾಪಸ್‌ ತರಲು ಆಸಕ್ತಿ ತೋರಿಸುವುದಿಲ್ಲವೇಕೆ ಎಂದು ಪ್ರಶ್ನಿಸಿದರು.

ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಎನ್‌.ನಾಗಯ್ಯ, ಎಸ್‌.ಪಿ.ಮಹೇಶ್‌, ಬ.ಮ. ಕೃಷ್ಣಮೂರ್ತಿ, ಸಿದ್ದರಾಜು ಮತ್ತಿತರರು ಈ ಚಳವಳಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.

ರಾಜ್ಯ ರೈತ ಸಂಘದ ವಿಭಾಗೀಯ ಸಂಚಾಲಕ ಎ.ಎಂ. ಮಹೇಶ್‌ ಪ್ರಭು, ಹೆಬ್ಬಸೂರು ಬಸವಣ್ಣ, ಜ್ಯೋತಿಗೌಡನಪುರ ಸಿದ್ದರಾಜು, ಜಿ.ಎಂ.ಗಾಡ್ಕರ್‌, ಸಂಘಸೇನ, ನಿಜಧ್ವನಿ ಗೋವಿಂದ ರಾಜು, ಮೂಡಲಪುರ ಶಿವಮೂರ್ತಿ, ನಾಗರಾಜು, ಆಲೂರು ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ

jio

ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ

nalin kumar katil talk about HK patil

ಎಚ್.ಕೆ.ಪಾಟೀಲರಿಂದ ಹತಾಶೆಯ ಅಪ್ರಬುದ್ಧ ಹೇಳಿಕೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

programme held at bangalore

ಮಾರ್ಚ್‌ 2ರಂದು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ

kalnurgi

ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

passion

ಫ್ಯಾಷನ್‌ ಡಿಸೈನ್‌ ಸ್ಪರ್ಧೆಗೆ ಆಡಿಷನ್‌

Untitled-2

ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

Tumkur congress Proitest

ತೈಲ ಬೆಲೆ ಏರಿಕೆ ಖಂಡಿಸಿ “ಕೈ’ ಪ್ರತಿಭಟನೆ

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

passion

ಫ್ಯಾಷನ್‌ ಡಿಸೈನ್‌ ಸ್ಪರ್ಧೆಗೆ ಆಡಿಷನ್‌

Untitled-2

ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

Tumkur congress Proitest

ತೈಲ ಬೆಲೆ ಏರಿಕೆ ಖಂಡಿಸಿ “ಕೈ’ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.