Udayavni Special

ಉದ್ಯೋಗ ಖಾತ್ರಿ ಎಂಜಿನಿಯರ್‌ ಅಮಾನತಿಗೆ ಆಗ್ರಹ

Team Udayavani, Jul 2, 2019, 3:00 AM IST

udyoga

ಸಂತೆಮರಹಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಯಳಂದೂರು ತಾಲೂಕಿನಲ್ಲಿರುವ ಎಂಜಿನಿಯರ್‌ಗಳಾದ ಸಲ್ಮಾನ್‌ಖಾನ್‌, ನಿಂಗರಾಜು, ಆದರ್ಶ್‌ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು ಇವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಶಾಸಕ ಎನ್‌.ಮಹೇಶ್‌ಗೆ ಯರಗಂಬಳ್ಳಿಯ ಕೆಲ ಸಾರ್ವಜನಿಕರು ಒತ್ತಾ ಯಿಸಿದ್ದಾರೆ. ಯರಗಂಬಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಲಿಖೀತ ದೂರು ಸಲ್ಲಿಸಲಾಯಿತು.

ಎಲ್ಲೆಡೆ ಎಂಜಿನಿಯರ್‌ಗಳ ಕೈವಾಡ: ತಾಲೂಕಿನಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ರಸ್ತೆ, ಕಾಲುವೆ, ಚರಂಡಿ, ಕೆರೆಕಟ್ಟೆಗಳ ಪುನಶ್ಚೇತನದ ಸೇರಿದಂತೆ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ಕೆಲ ಎಂಜಿನಿಯರ್‌ಗಳು ಪಾಲುದಾರರಾಗಿ ಕೆಲಸ ಮಾಡಿಸುತ್ತಿದ್ದಾರೆ. ಅಲ್ಲದೆ ಕೆಲಸ ನಡೆಯದಿದ್ದರೂ ಬಿಲ್‌ ಹಾಗೂ ಕಳಪೆ ಕಾಮಗಾರಿಗೂ ಹಣ ಪಾವತಿಸಲಾಗಿದೆ ಎಂದು ದೂರಿದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಕ್ರಮ ವಹಿಸುವುದಿಲ್ಲ. ಇವರೂ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಶಾಸಕ ಎನ್‌. ಮಹೇಶ್‌ ಇಒ ಬಿ.ಎಸ್‌. ರಾಜು ಅವರಿಗೆ ಪ್ರತಿ ಸಭೆಯಲ್ಲೂ ಇವರು ಭಾಗವಹಿಸಬೇಕು. ಈ ಬಗ್ಗೆ ತನಿಖೆಯಾಗಬೇಕು. ತಪ್ಪು ಕಂಡುಬಂದಲ್ಲಿ ಇವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಗಣಿಗಾರಿಕೆ ಅಕ್ರಮ: ಯರಗಂಬಳ್ಳಿ ಗ್ರಾಮದ ಸುತ್ತ ಕರಿಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಶಾಲೆಯ ಅನತಿ ದೂರ, ವಾಸವಾಗಿರುವ ಮನೆಗಳ ಬಳಿ, ಕಾಲುವೆಯ ಪಕ್ಕದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ನಿಯಮ ಮೀರಿ ರಾತ್ರಿ ವೇಳೆ ನ್ಪೋಟಕ ಬಳಕೆಯಾಗುತ್ತಿದೆ. ಅತಿ ಆಳವಾಗಿರುವುದರಿಂದ ನೀರು ಜಿನುಗುತ್ತಿದ್ದು ಅಂತರ್ಜಲ ಕಡಿಮೆಯಾಗಿ ಮುಂದೆ ಅಪಾರ ಪ್ರಮಾಣದ ಹಾನಿಯಾಗುವ ಸಂದರ್ಭವೂ ಇದೆ. ಮನೆಗಳೆಲ್ಲವೂ ಬಿರುಕು ಬಿಟ್ಟಿದೆ.

ಇಲ್ಲಿ ಕಾನೂನಿನ ಯಾವ ಪಾಲನೆಯೂ ಆಗುತ್ತಿಲ್ಲ. ಈ ಬಗ್ಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ, ಗಣಿ ಭೂ ವಿಜ್ಞಾನ ಇಲಾಖೆಗೆ ಮಾಹಿತಿ ಕೇಳಿದ್ದರೂ ಸುಳ್ಳು ದಾಖಲೆ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಶಿಸ್ತು ಕ್ರಮ ವಹಿಸಬೇಕು. ಗಣಿಗಾರಿಕೆ ನಿಲ್ಲಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆ ಸೇರಿದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.

ಕಾಮಗಾರಿ ಮಾಡದ ನೀರಾವರಿ ಇಲಾಖೆ: ಕಾವೇರಿ ನೀರಾವರಿ ನಿಗಮದಿಂದ ಕಬಿನಿ ಕಾಲುವೆ ದುರಸ್ತಿ ಕಾಮಗಾರಿ ಅರ್ಧಂಬರ್ಧ ಆಗಿದೆ. ಅಲ್ಲದೆ ಕೆಲವು ಉಪ ಕಾಲುವೆಗಳಲ್ಲಿ ಕೆಲಸ ಮಾಡದೆ ಬಿಲ್‌ ಪಾವತಿ ಮಾಡಿಕೊಳ್ಳಲಾಗಿದೆ. ಇಲ್ಲಿ ಲಕ್ಷಾಂತರ ರೂ. ಅವ್ಯಹಾರ ನಡೆದಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ತನಿಖೆ ನಡೆಸಿ, ಕಾಮಗಾರಿ ಪರಿಶೀಲಿಸಿ ಸಮಗ್ರ ವರದಿನೀಡುವಂತೆ ಸಂಬಂಧಪಟ್ಟ ಇಲಾಖೆಯ ಎಇಇ ಗೆ ಶಾಸಕರು ಸೂಚನೆ ನೀಡಿದರು.

ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಉಪಾಧ್ಯಕ್ಷ ಸಿದ್ದರಾಜು, ಸದಸ್ಯರಾದ ಪದ್ಮಾವತಿ, ನಾಗರಾಜು, ನಂಜುಂಡಸ್ವಾಮಿ, ಮಂಜುನಾಥ, ರೂಪಶ್ರೀ, ಉಷಾ, ಶಿವಮ್ಮ, ಮಂಜುಳಾ ತಹಶೀಲ್ದಾರ್‌ ವರ್ಷಾ, ಇಒ ಬಿ.ಎಸ್‌.ರಾಜು, ಪಿಡಿಒ ವೆಂಕಟಾಚಲಮೂರ್ತಿ ಕೆಎಂಎಫ್ ಎಂಡಿ ಮಲ್ಲಿಕಾರ್ಜುನ, ಎಇಇ ಮಹಾದೇವಸ್ವಾಮಿ ಇದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ಸೋಂಕು: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

ಕೋವಿಡ್ ನಂತೆ ಜಾನುವಾರುಗಳಲ್ಲಿ ಹರಡುತ್ತಿದೆ ರೋಗ: ಮಲೆನಾಡಿನಲ್ಲಿ ಚರ್ಮಗಂಟು ರೋಗ ಭೀತಿ

ಹತ್ತು ವರ್ಷಗಳ ಕಾಲ ಬಿಹಾರ ಅಭಿವೃದ್ದಿಗೆ ಯುಪಿಎ ಸರ್ಕಾರದಿಂದ ಅಡ್ಡಿ: ಪ್ರಧಾನಿ ಮೋದಿ

ಹತ್ತು ವರ್ಷಗಳ ಕಾಲ ಬಿಹಾರ ಅಭಿವೃದ್ದಿಗೆ ಯುಪಿಎ ಸರ್ಕಾರದಿಂದ ಅಡ್ಡಿ: ಪ್ರಧಾನಿ ಮೋದಿ

ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು

ಕಾಲೇಜು ಆರಂಭಕ್ಕೆ ದಿನ ನಿಗದಿ: ನವೆಂಬರ್ 17ರಿಂದ ಕಾಲೇಜು ಆರಂಭಕ್ಕೆ ಸರ್ಕಾರ ಸಜ್ಜು

BNG-TDY-1

ಆರ್‌.ಆರ್‌.ನಗರದಲ್ಲಿ ಮರ್ಡರ್‌ ಸಾಧ್ಯತೆ : ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳವಳ

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಾಮರಾಜನಗರ ನಾಲ್ವರು ಯೋಧರು ಹುತಾತ್ಮರು

ಚಾಮರಾಜನಗರ ನಾಲ್ವರು ಯೋಧರು ಹುತಾತ್ಮರು

cn-tdy-1

ಕಿಚ್ಚುಗುತ್ತಿ ಮಾರಮ್ಮ ದೇಗುಲ ಪುನಾರಂಭಕ್ಕೆ ಪೂಜೆ

chmarajanagara

ಚಾಮರಾಜನಗರ: 74 ಹೊಸ ಕೋವಿಡ್ ಪ್ರಕರಣ, 52 ಮಂದಿ ಗುಣಮುಖ

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

suchitra-tdy-4

ಓಲ್ಡ್‌ ಮಾಂಕ್‌ ಬಹುತೇಕ ಪೂರ್ಣ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ರಾಜ್ಯದಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ‘ಧಮ್’ ಇದೆಯಾ? ನಿರ್ಮಲಾ, ನಳಿನ್ ಗೆ ಸಿದ್ದರಾಮಯ್ಯ

ಎವರು ಇವರು! ಥ್ರಿಲ್ಲರ್‌ ಕಥೆಯಲ್ಲಿ ದಿಗಂತ್‌-ಹರಿಪ್ರಿಯಾ

ಎವರು ಇವರು! ಥ್ರಿಲ್ಲರ್‌ ಕಥೆಯಲ್ಲಿ ದಿಗಂತ್‌-ಹರಿಪ್ರಿಯಾ

suchitra-tdy-2

ಕಿರುತೆರೆಯಿಂದ ಹಿರಿತೆರೆಗೆ ಮೇಘಾ ಸಿನಿ ರೈಡ್‌

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

ಗುಡಿಸಲು ತೆರವು ಮಾಡಲು ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.