Udayavni Special

24ಕ್ಕೆ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ


Team Udayavani, Oct 22, 2019, 3:00 AM IST

24kke

ಚಾಮರಾಜನಗರ: ಭಾರತ ಸರ್ಕಾರವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ಮೂಲಕ ದೇಶದ ಕೃಷಿ ವಲಯವನ್ನು ತೆರಿಗೆ ಮುಕ್ತ ವ್ಯಾಪಾರ ವಲಯಕ್ಕೆ ಸೇರಿಸಲು ಮುಂದಾಗಿದ್ದು, ಇದನ್ನು ವಿರೋಧಿಸಿ ಭಾರತಾದ್ಯಂತ ರೈತ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ನಡೆಯಲಿದೆ. ರೈತ ಸಂಘದಿಂದ ನಗರದಲ್ಲೂ ಅಂದು ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಮಹೇಶ್‌ ಪ್ರಭು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಮಾತುಕತೆ ನಡೆಸಿದ್ದು, ಯಾವುದೇ ಕಾರಣಕ್ಕೂ ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಒತ್ತಾಯಿಸಿ, ಅಂದು ಬೆಳಗ್ಗೆ 11ಕ್ಕೆ ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಹೊರಟು ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಲಾಗುವುದು ಎಂದರು.

ನಮ್ಮ ಕೃಷಿಗೆ ಕಂಟಕ: ಮುಂದುವರೆದ ದೇಶಗಳಲ್ಲಿ ಕೃಷಿಗೆ ಹೆಚ್ಚಿನ ಸಹಾಯಧನ ನೀಡುವುದರಿಂದ ಹಾಗೂ ಯಾಂತ್ರಿಕ ಬೇಸಾಯ ಇರುವುದಿಂದ ಕಡಿಮೆ ಬೆಲೆಗೆ ಕೃಷಿ, ಹೈನುಗಾರಿಕೆ ಉತ್ಪನ್ನಗಳನ್ನು ತೆರಿಗೆ ಇಲ್ಲದೇ ಭಾರತಕ್ಕೆ ತಂದು ಸುರಿ ಮಾರುಕಟ್ಟೆ ಮಾಡುವುದದರಿಂದ ನಮ್ಮ ದೇಶಕ ಕೃಷಿ, ಹೈನುಗಾರಿಕೆ ನಷ್ಟಕ್ಕೆ ಸಿಲುಕಿ, ಉದ್ಯೋಗ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೈನುಗಾರಿಕೆ ಕ್ಷೇತ್ರಕ್ಕೆ ಅಪಾಯ: ಚೀನಾ ಜಪಾನ್‌ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಸೇರಿ ಇತರ 15 ರಾಷ್ಟ್ರಗಳದೊಂದಿಗೆ ಭಾರತ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಕುರಿತು ಮಾತುಕತೆ ನಡೆಸುತ್ತಿದೆ. ನವೆಂಬರ್‌ ಒಳಗೆ ಮಾತುಕತೆ ಮುಕ್ತಾಯವಾಗಲಿದೆ. ಭಾರತದ ರೈತರನ್ನು ಇನ್ನೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲಾಗುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಇದರಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವೇ ಇಲ್ಲವಾಗುತ್ತದೆ. ಹೀಗಾಗಿ ಅನೇಕ ದೇಶಗಳ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಮಾರಲು ಬರುತ್ತವೆ. ಇದರಿಂದಾಗಿ ದೇಶಕ‌ ಕೋಟ್ಯಂತರ ಸಣ್ಣ ರೈತರ ಸ್ಥಿತಿ ಶೋಚನೀಯವಾಗಲಿದೆ. ಅಲ್ಲದೇ ಹೈನುಗಾರಿಕೆ ಕ್ಷೇತ್ರ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.

ಆರ್‌ಸಿಇಪಿಯನ್ನು ವಿರೋಧಿಸಿ: ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ. ಬೀಜಗಳನ್ನು ರಕ್ಷಿಸಿ, ಸಂಗ್ರಹಿಸುವ ರೈತರು ಅಪರಾಧಿಗಳಾಗುತ್ತಾರೆ. ಆದ್ದರಿಂದ ಆರ್‌ಸಿಇಪಿಯನ್ನು ದೇಶದ ಎಲ್ಲರೂ ವಿರೋಧಿಸಬೇಕು. ಆಯಾ ರಾಜ್ಯ ಸರ್ಕಾರಗಳನ್ನು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಡೀಸಿ ಕಚೇರಿ ಮುಂಚೆ ಧರಣಿ: ತಮ್ಮ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವುದು ರೈತರು ಮಾತ್ರವಲ್ಲ. ದೇಶದ ಆಹಾರ ಸಾರ್ವಭೌಮತ್ವವೂ ಅಪಾಯದಲ್ಲಿದೆ. ಹಾಗಾಗಿ ಈ ನೀತಿಯನ್ನು ವಿರೋಧಿಸಿ ಅ.24ರಂದು ನಗರದ ಪ್ರವಾಸಿ ಮಂದಿರದಿಂದ ಬೆಳಗ್ಗೆ 11ಕ್ಕೆ ರೈತರು ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಅಲ್ಲಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವರಾಮು, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಕಾರ್ಯಾಧ್ಯಕ್ಷ ಶಾಂತಮಲ್ಲಪ್ಪ, ಚಿನ್ನಸ್ವಾಮಿ ಗೌಂಡರ್‌ ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯೋಗ ಮತ್ತು ಪ್ರಕೃತಿ ಚಿಕಿತ್ಸೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

Italy-Marinie-case

ಮೀನುಗಾರರನ್ನು ಇಟಲಿ ನಾವಿಕರು ಕೊಂದ ಪ್ರಕರಣ: ಅಂ.ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ವಿಶ್ವ ಕ್ರೀಡಾ ಪತ್ರಕರ್ತರ ದಿನ; ಕ್ರೀಡಾಪಟುಗಳಿಂದ ಶುಭಾಶಯ

ವಿಶ್ವ ಕ್ರೀಡಾ ಪತ್ರಕರ್ತರ ದಿನ; ಕ್ರೀಡಾಪಟುಗಳಿಂದ ಶುಭಾಶಯ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಗೆ ನಾಲ್ಕನೇ ಬಲಿ

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಗೆ ನಾಲ್ಕನೇ ಬಲಿ

ಪುಲ್ವಾಮ್ ದಾಳಿಯ ಜೈಶ್ ಸಂಘಟನೆ ರೂವಾರಿಗೆ ನೆರವು ನೀಡಿದ್ದ ವ್ಯಕ್ತಿ ಎನ್ ಐಎ ಬಲೆಗೆ

ಪುಲ್ವಾಮ್ ದಾಳಿಯ ಜೈಶ್ ಸಂಘಟನೆ ರೂವಾರಿಗೆ ನೆರವು ನೀಡಿದ್ದ ವ್ಯಕ್ತಿ ಎನ್ ಐಎ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22nagara

ಚಾಮರಾಜನಗರ: 22 ಮಂದಿಗೆ ಸೋಂಕು

bele-vima

ಬೆಳೆ ವಿಮಾ ಮೊತ್ತ ಪಾವತಿ ಅವಧಿ ವಿಸ್ತರಿಸಿ

ಉದಯವಾಣಿ ವರದಿ ಫಲಶ್ರುತಿ: ಸೀಲ್ ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ

ಉದಯವಾಣಿ ವರದಿ ಫಲಶ್ರುತಿ: ಸೀಲ್ ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ನಿಗಾ ಜಾರಿ

ಚಾ.ನಗರ: ಕೋವಿಡ್ ಪ್ರಯೋಗಾಲಯ ಪುನರಾರಂಭ ; ಬುಧವಾರ 22 ಪ್ರಕರಣ ದೃಢ

ಚಾ.ನಗರ: ಕೋವಿಡ್ ಪ್ರಯೋಗಾಲಯ ಪುನರಾರಂಭ ; ಬುಧವಾರ 22 ಪ್ರಕರಣ ದೃಢ

3ne-dina

3ನೇ ದಿನವೂ ದೊರಕದ ಫ‌ಲಿತಾಂಶ

MUST WATCH

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar


ಹೊಸ ಸೇರ್ಪಡೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

Italy-Marinie-case

ಮೀನುಗಾರರನ್ನು ಇಟಲಿ ನಾವಿಕರು ಕೊಂದ ಪ್ರಕರಣ: ಅಂ.ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯ

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌?

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌?

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಜೆಡಿಯು ಪಕ್ಷದಿಂದ ಅಭ್ಯರ್ಥಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.